ಕೊತ್ತಮಂಗಲಂ:ಕದ್ದ ಲಾಟರಿ ಟಿಕೆಟ್​ಗೆ ಬಂದು ನಗದು ಬಹುಮಾನವನ್ನು ಪಡೆಯಲು ಹೋದ ಖದೀಮ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿರುವ ಘಟನೆ ಕೇರಳದ ಕೊತ್ತಮಂಗಲಂನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಉರುಂಬಿಲ್​ ಬಾಬು ಎಂದು ಗುರುತಿಸಲಾಗಿದೆ. ಈತ ಕೊತ್ತಮಂಗಲಂನ ಜೆಜೆ ಲಾಟರೀಸ್ ಹೆಸರಿನ​ ಅಂಗಡಿಯಿಂದ ನವೆಂಬರ್​ 12ರಂದು 80 ಸಾವಿರ ಮೌಲ್ಯದ 2520 ಲಾಟರಿಯನ್ನು ಕದ್ದಿದ್ದ. ಲಾಟರಿ ಏಜೆನ್ಸಿಗಳ ಸಹಾಯದಿಂದ ಕದ್ದ ಲಾಟರಿ ಟಿಕೆಟ್‌ಗಳ ಸಂಖ್ಯೆಯನ್ನು ಎಲ್ಲೆಡೆ ನೀಡಲಾಗಿತ್ತು.
ಕದ್ದ ಒಂದು ಲಾಟರಿಗೆ 5 ಸಾವಿರ ರೂ. ನಗದು ಬಹುಮಾನ ಬಂದಿತ್ತು. ಇದನ್ನು ತಿಳಿದ ಬಾಬು ಹಣ ಪಡೆದುಕೊಳ್ಳಲೆಂದು ಪಲಾದಲ್ಲಿರುವ ಲಾಟರಿ ಏಜೆನ್ಸಿಗೆ ಹೋಗಿದ್ದ. ಬಾಬು ಲಾಟರಿ ನೀಡಿದಾಗ ಅನುಮಾನಗೊಂಡ ಶಾಪ್​ ಮಾಲೀಕ ನಂಬರ್​ ಅನ್ನು ಪರಿಶೀಲಿಸಿದ್ದಾರೆ. ಇದನ್ನು ನೋಡಿ ಬಾಬು ಮಾಲೀಕನಿಗೆ ತನ್ನ ಕೃತ್ಯ ಗೊತ್ತಾಗಿದೆ ಎಂದು ತಿಳಿದು ಲಾಟರಿ ಟಿಕೆಟ್​ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇದಾದ ಬಳಿಕ ಶಾಪ್​ ಮಾಲೀಕರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹುಡುಕಾಡಿದಾಗ ಆರೋಪಿ ಬಾಬು ಸಿಕ್ಕಿಬಿದ್ದಿದ್ದಾನೆ. ಆತನ ಮೇಲೆ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ಕಂಜಿರಪಲ್ಲಿ ಪೊಲೀಸರು ಬಾಬುನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಪುಷ್ಪ ಸಿನಿಮಾದಿಂದ ಪ್ರಭಾವಿತರಾಗಿ ಗ್ಯಾಂಗ್​ ಕಟ್ಟಿಕೊಂಡು ನೀಚ ಕೆಲಸ ಎಸಗಿದ ಅಪ್ರಾಪ್ತರು..!

ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​

ಕನ್ನಡ ಪ್ರೀತಿಗೆ ಸಲಾಂ! ಹೆಜ್ಜೆ ಹಾಕಿದ್ದು ತೆಲುಗು ಸಿನಿಮಾ ಹಾಡಿಗೆ ಆದ್ರೆ ವಾರ್ನರ್ ಗೆದ್ದಿದ್ದು ಕನ್ನಡಿಗರ ಹೃದಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 18 =
Remember me
