ನವದೆಹಲಿ:ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಚಿತ್ರದಲ್ಲಿ ಹಾವನ್ನು ಗುರುತಿಸುವುದು ನೆಟ್ಟಿಗರ ಫೇವರಿಟ್ ಟಾಸ್ಕ್​ ಆಗಿದೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ.

ಮೇಲಿರುವ ಚಿತ್ರದಲ್ಲಿ ಒಣಗಿದ ಎಲೆಗಳ ನಡುವೆ ಒಂದು ಹಾವಿದೆ. ಆದರೆ, ಅಷ್ಟು ಸುಲಭವಾಗಿ ಅದು ಕಾಣುವುದಿಲ್ಲ. ಎಲೆಗಳ ಬಣ್ಣದಂತೆಯೇ ಹಾವಿನ ಬಣ್ಣವಿದ್ದು, ನೋಡುಗರನ್ನು ಗೊಂದಲಕ್ಕೀಡುಮಾಡುತ್ತದೆ. ಮೊದಲಿಗೆ ನೋಡಿದವರಿಗೆ ಕಂದು ಬಣ್ಣದ ಎಲೆಗಳು ಭೂಭಾಗವನ್ನು ಆಕ್ರಮಿಸಿರುವಂತೆ ಕಾಣುತ್ತದೆ. ನೀವೇನಾದರೂ ಬಹಳ ಸೂಕ್ಷ್ಮದಿಂದ ನೋಡಿದರೆ ಎಲೆಗಳ ನಡುವೆ ಸಣ್ಣದೊಂದು ಹಾವು ಕಾಣುತ್ತದೆ.
ನಿಮಗೆ 15 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಆ ಸಮಯದಲ್ಲಿ ನೀವು ಹಾವನ್ನು ಫೋಟೋದಲ್ಲಿ ಗುರುತಿಸಿದರೇ ನಿಮ್ಮ ಕಣ್ಣಿನ ಸಾಮರ್ಥ್ಯಕ್ಕೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಹಾವನ್ನು ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

ಕುಡಿದ ಮತ್ತಿನಲ್ಲಿ ಸ್ಕೂಟರ್​ನಲ್ಲಿ ಹಿಮ್ಮುಖವಾಗಿ ಕುಳಿತು ಯುವತಿಯ ತುಂಟಾಟ: ವಿಡಿಯೋ ವೈರಲ್​

ಧಾರ್ಮಿಕ ಭಾವನೆಗೆ ಧಕ್ಕೆ; ಚೇತನ್ ವಿರುದ್ಧ ಮತ್ತೊಂದು ಕೇಸ್ ದಾಖಲು

ಕಿರು ಏತ ನೀರಾವರಿ ಯೋಜನೆಗಳಿಗೆ ಮಾಮನಿ ಕಾಯಕಲ್ಪ; ಸಿಎಂ ಬೊಮ್ಮಾಯಿ‌ ಭಾವಪೂರ್ಣ ಸ್ಮರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + six =
Remember me
