ಹೈದರಾಬಾದ್​:ಸಂಜೆ ಸಮಯದಲ್ಲಿ ನಗರದ ಹೊರವಲಯದ ರಿಂಗ್​ರೋಡ್​ನಲ್ಲಿ ನಿಂತಿದ್ದ ಕಾರೊಂದರಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಿಸಿದಾಗಿ ಶಾಕಿಂಗ್​ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಈ ಘಟನೆ ತೆಲಂಗಾಣದ ಉಪನಗರ ಘಾಟ್ಕೇಸರದ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ.
ಹುಮಾಯುನ್​ ನಗರ ಕಾಲನಿಯ ಮೆಹದಿಪಟ್ಟಣದ ಮೊಹಮ್ಮದ್​ ಜಮೀರ್​ ಸಿದ್ದಿಕ್​ (28), ಅಲ್ಮಸ್ಗುಡ ಶೇಶಾದ್ರಿ ನಗರದ ಅಖಿಲ್​ (31) ಮತ್ತು ಹಫೀಜ್​ಪೇಟೆಯ ನಿವಾಸಿ ರಮ್ಯಾ (32) ಬಂಧಿತ ಆರೋಪಿಗಳು. ಮೂವರು ಕೂಡ ಕ್ಲಬ್​ಹೌಸ್​ ಮೂಲಕ ಪರಿಚಿತರು. ಇದಕ್ಕೂ ಮೊದಲು ಸಿದ್ದಿಕ್​ ಮತ್ತು ಅಖಿಲ್​ ಪ್ರಿಸಂ ಪಬ್​ನಲ್ಲಿ ಭೇಟಿಯಾಗಿದ್ದರು. ಅಖಿಲ್​ ಗೋವಾದಿಂದ ತಂದಿದ್ದ ಡ್ರಗ್ಸ್​ ಅನ್ನು ಮೂವರು ಕೂಡ ಈ ಹಿಂದೆ ಸೇವಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಎದುರಾಗಲಿರುವ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಡ್ರಗ್ಸ್​ ತೆಗೆದುಕೊಳ್ಳಲೆಂದು ಎರಡು ದಿನಗಳ ಹಿಂದೆ ಸಿದ್ದಿಕ್​ ಮತ್ತು ರಮ್ಯಾ ಗೋವಾಗೆ ಹೋಗಿದ್ದರು.
ಗೋವಾದಿಂದ ತಂದಂತಹ ಡ್ರಗ್ಸ್​ ಅನ್ನು ಹಂಚಿಕೊಳ್ಳಲು ಮೂವರು ಕೂಡ ಘಾಟ್ಕೇಸರ ಏರಿಯದಲ್ಲಿರುವ ಹೊರವರ್ತುಲ ರಸ್ತೆಯ ಬಳಿ ಹೋಗಿದ್ದರು. ಓರ್ವ ಯುವತಿ ಮತ್ತು ಇಬ್ಬರು ಯುವಕರು ಕಾರಿನಲ್ಲಿರುವುದನ್ನು ಕಂಡ ಅಲ್ಲಿನ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಅವರಿಂದ ಡ್ರಗ್ಸ್​ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.(ಏಜೆನ್ಸೀಸ್​)
https://www.vijayavani.net/r-nigeria-drug-peddler-bengaluru-police-govindpura-police-station-anjum-razak/
ಇನ್ಮುಂದೆ ಯುವತಿಯರ ಮದುವೆ ವಯಸ್ಸು 21: ಸಚಿವ ಸಂಪುಟ ಅಸ್ತು- 43 ವರ್ಷಗಳ ಬಳಿಕ ಏಕೀ ಬದಲಾವಣೆ? ಇಲ್ಲಿದೆ ವಿವರ

ಇರೋದು ನಾಲ್ಕೇ ವಿದ್ಯಾರ್ಥಿನಿಯರು ಆದ್ರೆ ಲೆಕ್ಕದಲ್ಲಿ 35! ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಗೋಲ್‌ ಮಾಲ್‌

VIDEO: 22 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಬಸ್‌ಗೆ ಬೆಂಕಿ: ಬೆಳಗ್ಗೆ ಕಾರವಾರದಲ್ಲಿ ಭಾರಿ ಅವಘಡ- ಸುಟ್ಟ ಭಸ್ಮವಾದ ವಾಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + sixteen =
Remember me
