ಢಾಕಾ:ಬಾಂಗ್ಲಾದೇಶದ ರಾಜಧಾನಿ ಢಾಕಾದ ವಾರಿಯಲ್ಲಿರುವ 222 ಲಾಲ್​ ಮೋಹನ್​ ಸಹಾ ಸ್ಟ್ರೀಟ್​ನಲ್ಲಿರುವ ಇಸ್ಕಾನ್​ ರಾಧಾಕಾಂತ ದೇವಸ್ಥಾನದ ಮೇಲೆ ಸುಮಾರು 200 ಮಂದಿ ದಾಳಿ ಮಾಡಿ, ಹಾನಿಗೊಳಿಸಿರುವುದಲ್ಲದೆ, ದೇವಸ್ಥಾನವನ್ನು ಲೂಟಿ ಮಾಡಿರುವುದು ವರದಿಯಾಗಿದೆ.
ಗುರುವಾರ ಈ ಘಟನೆ ನಡೆದಿದೆ. ದಾಳಿಯಲ್ಲಿ ಸುಮಂತ್ರ ಚಂದ್ರ, ಶ್ರವಣ್​, ನಿಹಾರ್​ ಹಲ್ದಾರ್​, ರಾಜೀವ್​ ಭದ್ರ ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ. ಹಾಜಿ ಸಫಿಉಲ್ಲಾ ನೇತೃತ್ವದ ಗುಂಪೊಂದು ಈ ಕೃತ್ಯವನ್ನು ಎಸಗಿದ್ದಾರೆಂದು ತಿಳಿದುಬಂದಿದೆ.
ಕಳೆದ ವರ್ಷ ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುವಾರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜೆ ವೇಳೆ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಬೆನ್ನಲ್ಲೇ ಉಂಟಾದ ಹಿಂಸಾಚಾರದಲ್ಲಿ ಕನಿಷ್ಠ ಮೂವರನ್ನು ಕೊಲ್ಲಲಾಗಿತ್ತು.
ಈ ಹಿಂದೆ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್‌ನ ಕೊಟ್ವಾಲಿಯಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.(ಏಜೆನ್ಸೀಸ್​)
ಹೆಣ್ಣಾಗಿ ಹುಟ್ಟಿದಾಕೆ 47ನೇ ಹುಟ್ಟುಹಬ್ಬವನ್ನು ಗಂಡಾಗಿ ಆಚರಿಸಿಕೊಂಡಳು! ಮಹಿಳೆ ಬಾಳಲ್ಲಿ ಹೀಗೊಂದು ವಿಚಿತ್ರ…

ಐದು ವರ್ಷದ ಪ್ರೀತಿ ಬೆಂಕಿಯಲ್ಲಿ ದಹನ: ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿ ದುರಂತ ಸಾವು

ಇಷ್ಟು ದಿನ ಹೇಳಿದ್ದು ಸುಳ್ಳು… ಜರ್ಸಿ ನಂ. 7ರ ಆಯ್ಕೆ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ಎಂ.ಎಸ್​. ಧೋನಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 3 =
Remember me
