ನವದೆಹಲಿ:ತುಂಬಾ ದಪ್ಪಗಿರುವ ವ್ಯಕ್ತಿಗಳು ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಬೇರೆಯವರಂತೆ ತುಂಬಾ ಸಕ್ರಿಯರಾಗಿರಲು ಆಗುವುದಿಲ್ಲ. ಬಟ್ಟೆಗಳು ಸಹ ಫಿಟ್​ ಸಹ ಸರಿಯಾಗಿರುವುದಿಲ್ಲ. ಆಯಾಸ ತ್ವರಿತವಾಗಿ ಸಂಭವಿಸುತ್ತದೆ. ಸಾಕಷ್ಟು ಕಾಯಿಲೆಗಳನ್ನು ಅರಸಿಕೊಂಡು ಬರುತ್ತವೆ. ಅಲ್ಲದೆ, ಆತ್ಮವಿಶ್ವಾಸವು ಸಹ ಕುಗ್ಗುತ್ತದೆ.
ವಿಜ್ಞಾನದ ಪ್ರಕಾರ ತುಂಬಾ ದಪ್ಪವಾಗಿರುವುದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹೀಗಾಗಿ ತೂಕ ತಗ್ಗಿಸಿಕೊಳ್ಳಲು ದಪ್ಪಗಿರುವವರು ಆಹಾರದ ಪದ್ಧತಿ ಮತ್ತು ಜಿಮ್​ ವರ್ಕೌಟ್​ ಸೇರಿದಂತೆ ತೂಕ ಇಳಿಸಿಕೊಳ್ಳುವ ನಾನ ತಂತ್ರಗಳನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಯುವಕನೊಬ್ಬ ತನ್ನ ದೇಹದ ಅರ್ಧಕರ್ಧ ತೂಕವನ್ನು ಇಳಿಸಿಕೊಂಡಿದ್ದು, ಅದರ ಹಿಂದಿರುವ ಕತೆ ಎಲ್ಲರ ಮನೆ ಗೆದ್ದಿದೆ. ದೇಹದ ತೂಕವನ್ನು ಕರಗಿಸಿ, ಫಿಟ್​ ಆಗಿರುವ ವಿಡಿಯೋವನ್ನು ಯುವಕ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.
ಪ್ರೇಯಸಿಯ ಒಂದು ಮಾತಿಗೆ ತೂಕ ಇಳಿಸುವ ನಿರ್ಧಾರತೂಕ ಇಳಿಸಿರುವ ವ್ಯಕ್ತಿಯನ್ನು ಡೈಲಿ ಸ್ಟಾರ್​ ಮಾಧ್ಯಮ ಪ್ರಕಾರ ಪುವಿ ಎಂದು ತಿಳಿದುಬಂದಿದೆ. ಈ ಮೊದಲು ಬರೋಬ್ಬರಿ 139 ಕೆಜಿ ತೂಕವಿದ್ದ. ಇದೀಗ 70 ಕೆಜಿ ತೂಕ ಇಳಿಕೆ ಮಾಡಿದ್ದು, ಇದೀಗ 69 ಕೆಜಿ ಇದ್ದಾರೆ. ಅರ್ಧಕರ್ಧ ದೇಹದ ತೂಕವನ್ನು ಇಳಿಸಿದ್ದಾರೆ. ತನ್ನ ತೂಕ ಇಳಿಸುವ ಪಯಣದ ವಿಡಿಯೋವನ್ನು ಪುವಿ ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ. ಪುವಿ ತುಂಬಾ ದಪ್ಪಗಿದ್ದಿದ್ದರಿಂದ ಆತನ ಗೆಳತಿ ಆತನನ್ನು ಬಿಟ್ಟು ಹೋದಳು. ನೀನು ತುಂಬಾ ದಪ್ಪಗಿದ್ದೀಯಾ ನಾನು ನಿನ್ನನ್ನು ಪ್ರೀತಿಸಲಾರೆ ಎಂದು ಪ್ರೇಯಸಿ ಕೈಕೊಟ್ಟು ಹೋಗಿದ್ದಕ್ಕೆ ಪುವಿಯ ಮನಸ್ಸು ಚೂರಾಗಿತ್ತು. ಇದರಿಂದಲೇ ಕೊರಗಿದ್ದ ಪುವಿ ಕೊನೆಗೆ ತೂಕ ಇಳಿಸುವ ನಿರ್ಧಾರಕ್ಕೆ ಬಂದು ಜಿಮ್​ಗೆ ಸೇರಿದ.
ನಿಯಮಿತವಾಗಿ ಜಿಮ್​ ಮಾಡುತ್ತಾ ತನ್ನ ದೇಹಕ್ಕೆ ಒಂದು ಒಳ್ಳೆಯ ಆಕಾರ ನೀಡಿದ್ದಾರೆ. ಈ ಮೊದಲ XXXL ಸೈಜ್​ ಬಟ್ಟೆ ತೊಡುತ್ತಿದ್ದ ಪುವಿ ಇದೀಗ L ಸೈಜ್​ಗೆ ಇಳಿದಿದ್ದಾರೆ. ಪುವಿ ದೇಹದಲ್ಲಿದ್ದ ಬೊಜ್ಜಿನ ಪ್ರಮಾಣ ಗಣನೀಯವಾಗಿ ಕುಗ್ಗಿದೆ. ಪುವಿ ಕಟ್ಟುಮಸ್ತಾದ ದೇಹ ಹೊಂದಿದ್ದು, ಗುರುತೇ ಹಿಡಿಯದಷ್ಟು ಬದಲಾಗಿದ್ದಾರೆ. ಪುವಿಯನ್ನು ನೋಡಿ ಎಲ್ಲರು ಆಶ್ಚರ್ಯಚಕಿತರಾಗಿದ್ದಾರೆ.
ಪುವಿ ಜಿಮ್‌ನಲ್ಲಿ ವರ್ಕೌಟ್ ಮಾಡುವುದರ ಜೊತೆಗೆ ತನ್ನ ಆಹಾರ ಪೋಷಣೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಏಕೆಂದರೆ, ವ್ಯಾಯಾಮಕ್ಕಿಂತ ಆಹಾರಕ್ರಮಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಪುವಿ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಲು ಪ್ರಾರಂಭಿಸಿದರು. ಅವರ ಆಹಾರದಲ್ಲಿ ಬ್ರೆಡ್, ಚಿಕನ್, ಮೊಟ್ಟೆ, ಕಾರ್ಬೋಹೈಡ್ರೇಟ್ಗಳು ಮತ್ತು ಎಲೆಗಳ ಸೊಪ್ಪನ್ನು ಸೇವಿಸುತ್ತಿದ್ದರು. ಇದೀಗ ಒಳ್ಳೆಯ ದೇಹವನ್ನು ಹೊಂದಿದ್ದು, ಎಲ್ಲರಂತೆ ಲವಲವಿಕೆಯಿಂದಿದ್ದಾರೆ. ಅಲ್ಲದೆ, ಬಿಟ್ಟು ಹೋದ ಪ್ರೇಯಸಿ ಹೊಟ್ಟೆ ಉರಿದುಕೊಳ್ಳ ರೀತಿಯಲ್ಲಿ ಪುವಿ ಬದಲಾಗಿದ್ದಾರೆ.(ಏಜೆನ್ಸೀಸ್​)
ಬಿಗ್​ಬಾಸ್​ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

ಕಷ್ಟಗಳನ್ನು ಎದುರಿಸಲು ಆಗ್ತಿಲ್ಲ… ಮಗು ಕೊಂದು ಸಾವಿನ ಹಾದಿ ಹಿಡಿಯಲು ಹೋದ ತಾಯಿಯ ಸ್ಥಿತಿ ಗಂಭೀರ

ಬಾಲಿವುಡ್​ನ ಪ್ರಸ್ತುತ ಸ್ಥಿತಿಯನ್ನು ರಾಹುಲ್​ ಗಾಂಧಿಗೆ ಹೋಲಿಸಿ ಸ್ವರಾ ಭಾಸ್ಕರ್​ ಕೊಟ್ಟ ವಿವರಣೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 9 =
Remember me
