ಇಸ್ಲಮಾಬಾದ್​:ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ತೀವ್ರ ಪರಿಣಾಮ ಬೀರಿದೆ. ಕರೊನಾ ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ಎಲ್ಲ ದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಕೇವಲ ಒಂದು ಸರ್ಕಾರಿ ಉದ್ಯೋಗಕ್ಕಾಗಿ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆಂದರೆ ನೀವು ನಂಬಲೇಬೇಕು. ಇದು ಪಾಕಿಸ್ತಾನದ ದುಸ್ಥಿತಿಯಾಗಿದೆ. ಕರೊನಾಗೂ ಮುಂಚೆ ಹದಗೆಟ್ಟಿದ್ದ ಪಾಕ್​ ಸ್ಥಿತಿ ಕರೊನಾ ನಂತರ ಹೇಳತೀರದ್ದಾಗಿದೆ.
ಪಾಕಿಸ್ತಾನದ ಪ್ರಮುಖ ದಿನಪತ್ರಿಕ ಡಾನ್​ ಇತ್ತೀಚೆಗಷ್ಟೇ ಒಂದು ಲೇಖನ ಪ್ರಕಟ ಮಾಡಿತ್ತು. ಅದರಲ್ಲಿರುವಂತೆ ಪಾಕಿಸ್ತಾನದ ಕೋರ್ಟ್​ನಲ್ಲಿ ಖಾಲಿಯಿದ್ದ ಒಂದೇ ಒಂದು ಜವಾನನ ಕೆಲಸಕ್ಕೆ ಬರೋಬ್ಬರಿ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರಂತೆ. ಅಚ್ಚರಿಯೆಂದರೆ, ಅರ್ಜಿ ಹಾಕಿರುವವರಲ್ಲಿ ಎಂಫಿಲ್​ ಅಧ್ಯಯನ ಮಾಡಿರುವವರು ಇದ್ದಾರೆ.
ಇನ್ನು ಪಾಕಿಸ್ತಾನದಲ್ಲಿ ನಿರುದ್ಯೋಗವು ತುತ್ತ ತುದಿಯನ್ನು ತಲುಪಿದೆ. ಕರೊನಾದಿಂದ ಬಹುತೇಕ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ಬಹಿರಂಗ ಮಾಡಿದೆ. ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ಸಂಸ್ಥೆ (ಪಿಐಡಿಇ) ಪ್ರಕಾರ ಪಾಕ್​ನಲ್ಲಿ ನಿರುದ್ಯೋಗ ಪ್ರಮಾಣ ಶೇ 16 ರಷ್ಟು ದಾಟಿದೆ. ಪ್ರಸ್ತುತ ಶೇ. 24 ರಷ್ಟು ಶಿಕ್ಷಿತ ಯುವಕತು ಉದ್ಯೋಗದಿಂದ ವಂಚಿತರಾಗಿದ್ದಾರೆ.
ಪಿಐಡಿಇ ತನ್ನ ಸಮೀಕ್ಷೆಯನ್ನು ಪಾಕ್​ನ ಸೆನೆಟ್​ ಸ್ಟ್ಯಾಂಡಿಂಗ್​ ಸಮಿತಿ ಮುಂದೆ ಬಹಿರಂಗಪಡಿಸಿದೆ. ಶೇ. 40 ರಷ್ಟು ಪದವಿ ಮತ್ತು ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಎಂಫಿಲ್​ ಮಾಡಿದ ಅನೇಕರು ಕೆಲಸದಿಂದ ವಂಚಿತರಾಗಿದ್ದಾರೆ. ನಿರುದ್ಯೋಗ ಪ್ರಮಾಣ ಮತ್ತಷ್ಟು ಏರಿಕೆ ಆಗಲಿದೆ ಎಂದು ಪಿಐಡಿಇ ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಪಾಕ್​ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿದೆ.
ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಲೇಬರ್ ಫೋರ್ಸ್ ಸಮೀಕ್ಷೆ ಪ್ರಕಾರ ಪಾಕಿಸ್ತಾನದಲ್ಲಿ 2017-18ರಲ್ಲಿ ಶೇ. 5.8 ರಷ್ಟಿದ್ದ ನಿರುದ್ಯೋಗ ಪ್ರಮಾಣ 2018-19ರಲ್ಲಿ 6.9 ರಷ್ಟು ಏರಿಕೆ ಆಗಿದೆ. ಪುರುಷರಲ್ಲಿ ಶೇ 5.1 ಮತ್ತು ಮಹಿಳೆಯರಲ್ಲಿ 5.9 ಇದ್ದ ನಿರುದ್ಯೋಗ ಪ್ರಮಾಣ ಇದೀಗ ಪುರಷರಲ್ಲಿ 8.3 ಮತ್ತು ಮಹಿಳೆಯರಲ್ಲಿ 10 ರಷ್ಟು ಏರಿಕೆ ಕಂಡಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನವು ವಿಶ್ವದ 9ನೇ ಅತಿದೊಡ್ಡ ಕಾರ್ಮಿಕ ಬಲವನ್ನು ಹೊಂದಿದೆ. ಆದರೂ ಕರೊನಾ ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರೆತೆಯಿಂದ ಪಾಕ್​ ಯುವ ಜನಾಂಗ ಕೆಲಸವಿಲ್ಲದೆ ಪರದಾಡುತ್ತಿದೆ.(ಏಜೆನ್ಸೀಸ್​)
ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

ಮೈಸೂರು ಗ್ಯಾಂಗ್​ರೇಪ್​ ಮಾಸುವ ಮುನ್ನವೇ ಮತ್ತೊಂದು ಘಟನೆ: ಏಕಾಂತದಲ್ಲಿ ಲವರ್ಸ್ ಮಧ್ಯೆ ಕೀಚಕರ ಎಂಟ್ರಿ

ನಟಿ ಕೃಷಿ ತಾಪಂಡ ಕನಸು-ನನಸು; ಬೀರು ಬ್ರ್ಯಾಂಡ್ ನೇಮ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
