ಕೋಲ್ಕತ:ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಗ್ರಾಹತ್​ನಲ್ಲಿ 21 ವರ್ಷದ ಯುವಕನ ಶವ ಪತ್ತೆಯಾದ ಬೆನ್ನಲ್ಲೇ ಕೊಲೆಯ ಪ್ರಕರಣ ಬೆಳಕಿಗೆ ಬಂದಿದೆ. ಗರ್ಲ್​ಫ್ರೆಂಡ್​ ಮತ್ತು ಆಕೆಯ ತಾಯಿಯ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದೆ ಯುವಕನ ಕೊಲೆಗೆ ಕಾರಣವಾಗಿದೆ ಎಂಬ ಅಂಶ ಬಯಲಾಗಿದೆ.
ಅಯಾನ್​ ಮೊಂಡಾಲ್​ ಮೃತ ಯುವಕ. ತಾಯಿ ಮಂಜು ಮೊಂಡಾಲ್​ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಆರೋಪದ ಅಡಿಯಲ್ಲಿ ಮೊಂಡಾಲ್​ ಗರ್ಲ್​ಫ್ರೆಂಡ್​, ಆಕೆಯ ತಾಯಿ, ತಂದೆ, ಸಹೋದರ ಮತ್ತು ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸಂಜೆ ಅಯಾನ್​ ಗರ್ಲ್​ಫ್ರೆಂಡ್​ ಮನೆಗೆ ಬಂದಿದ್ದಳು. ಈ ವೇಳೆ ಆಕೆ ತುಂಬಾ ದಣಿದಿದ್ದಳು. ಯಾಕೆ ಎಂದು ಪ್ರಶ್ನೆ ಮಾಡಿದೆ. ನಾನು ಗರ್ಭಿಣಿಯಾಗಿದ್ದೇನೆ ಎಂದಳು. ಅವಳನ್ನು ಆ ಕ್ಷಣದಲ್ಲಿದ್ದ ರೀತಿಯನ್ನು ನೋಡಿದರೆ, ಬಹುಶಃ ನನ್ನ ಮಗ ಇನ್ನಿಲ್ಲ ಎಂಬ ಸುದ್ದಿ ಆಕೆಗೆ ಮೊದಲೇ ತಿಳಿದಿತ್ತು ಅನಿಸುತ್ತದೆ ಎಂದು ಮಂಜು ಮೊಂಡಾಲ್ ಮಾಧ್ಯಮಕ್ಕೆ​ ತಿಳಿಸಿದ್ದಾರೆ.
ಗರ್ಲ್​ಫ್ರೆಂಡ್​ ಸಹೋದರ ಭಾರಿ ತೂಕದ ವಸ್ತುವಿನಿಂದ ಬಲವಾಗಿ ತಲೆಗೆ ಹೊಡೆದ ಅಯಾನ್​ ಮೊಂಡಲ್​ನನ್ನು ಹತ್ಯೆ ಮಾಡಿದ್ದಾನೆಂದು ಹೇಳಲಾಗಿದೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ಗರ್ಲ್​ಫ್ರೆಂಡ್​ ಸಹ ಅಲ್ಲಿಯೇ ಇದ್ದಳು ಎಂದು ಮಂಜು ಮೊಂಡಾಲ್​ ಆರೋಪ ಮಾಡಿದ್ದಾರೆ. ಏಕೆಂದರೆ, ಮಗನ ಗರ್ಲ್​ಫ್ರೆಂಡ್​ ಕೆಲ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದೇ ಅನುಮಾನಕ್ಕೆ ಕಾರಣವಾಗಿದೆ.
ಗರ್ಲ್​ಫ್ರೆಂಡ್​ ಮನೆಗೆ ಬಂದ ಸಮಯದಲ್ಲಿ ನನ್ನ ಮಗನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದ್ದಕ್ಕಿದ್ದಂತೆ, ಅವಳು ಅಯಾನ್‌ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಿದಳು, ಪೊಲೀಸರಿಗೆ ಕರೆ ಮಾಡಲು ಕೇಳಿದಳು. ನನ್ನ ಮಗನನ್ನು ಪೊಲೀಸರು ಏಕೆ ಬಂಧಿಸುತ್ತಾರೆ ಎಂದು ನಾನು ಅವಳನ್ನು ಕೇಳಿದೆ. ಅವಳು ಅದಕ್ಕೆ ಸರಿಯಾಗಿ ಉತ್ತರಿಸಿದೇ ನುಣುಚಿಕೊಂಡಳು. ಬದಲಿಗೆ ತಾನು ಗರ್ಭಿಣಿ ಎಂದು ಹೇಳಿದಳು ಎಂದು ಮಂಜು ಮೊಂಡಾಲ್​ ತಿಳಿಸಿದ್ದಾರೆ.
ಪ್ರಸ್ತುತ ಪೊಲೀಸ್ ವಶದಲ್ಲಿರುವ ಅಯಾನ್ ಅವರ ಗೆಳತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಆರೋಪಿಗಳ ಸೂಚನೆಯಂತೆ ಅಯಾನ್ ಅವರ ದೇಹವನ್ನು ಸಾಗಿಸಿ, ನಿರ್ಜನ ಸ್ಥಳದಲ್ಲಿ ಬಿಸಾಡಿದ್ದಕ್ಕಾಗಿ ಪಿಕ್-ಅಪ್ ವ್ಯಾನ್ ಚಾಲಕನನ್ನು ಸಹ ಬಂಧಿಸಲಾಗಿದೆ.
ತನಿಖೆಯಲ್ಲಿ ತಿಳಿದುಬಂದಿದ್ದೇನು?ಪ್ರಾಥಮಿಕ ತನಿಖೆಯಲ್ಲಿ ಕೊಲೆಯ ಹಿಂದೆ ಅಯಾನ್, ಅವನ ಗೆಳತಿ ಮತ್ತು ಅವಳ ತಾಯಿಯನ್ನು ಒಳಗೊಂಡಿರುವ ತ್ರಿಕೋನ ಪ್ರೇಮ ಕತೆಯ ಸುಳಿವು ಸಿಕ್ಕಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಮಹತ್ವದ ಮಾಹಿತಿ ಪತ್ತೆಯಾಯಿತು. ಕೊಲೆಯಾದ ಅಯಾನ್​, ತನ್ನ ಗೆಳತಿ ಮತ್ತು ಆಕೆಯ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದ ಸಂದರ್ಭದಲ್ಲಿ ಅಯಾನ್​ ಕೊಲೆಯಾಗಿದೆ ಎಂದು ಹೇಳಲಾಗಿದೆ. ಬಳಿಕ ಮೃತದೇಹವನ್ನು ಮಗ್ರಾಹತ್​ನ ನಿರ್ಜನ ಪ್ರದೇಶದಲ್ಲಿ ಬೀಸಾಡಿದ್ದಾರೆ.
ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಅಯಾನ್​, ಕಳೆದ ಬುಧವಾರ ಸಂಜೆ ತನ್ನ ಗೆಳತಿಯೊಂದಿಗೆ ಪದೇಪದೆ ಫೋನ್ ಮೂಲಕ ಮಾತನಾಡಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಅವಳು ಅವನ ಎಲ್ಲಾ ಕರೆಗಳನ್ನು ಕಡಿತಗೊಳಿಸಿದ್ದರಿಂದ, ಕುಪಿತಗೊಂಡ ಅಯಾನ್​ ನಂತರ ಅಮಲೇರಿದ ಸ್ಥಿತಿಯಲ್ಲಿ ಪ್ರೇಯಸಿಯ ನಿವಾಸಕ್ಕೆ ಹೋಗಿದ್ದಾನೆ. ಮನೆಗೆ ಹೋಗುತ್ತಿದ್ದಂತೆ ಅಲ್ಲಿ ಗರ್ಲ್​ಫ್ರೆಂಡ್ ತಾಯಿಯೊಂದಿಗೆ ವಾಗ್ವಾದಕ್ಕಿಳಿದು ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗರ್ಲ್​ಫ್ರೆಂಡ್​ ತನ್ನ ಸಹೋದರ ಮತ್ತು ತಂದೆಯೊಂದಿಗೆ ಮನೆಗೆ ಬಂದಿದ್ದಾಳೆ. ತಾಯಿಯ ಮೇಲೆ ಅಯಾನ್​ ಹಲ್ಲೆ ಮಾಡುವುದನ್ನು ನೋಡಿದ ಗರ್ಲ್​ಫ್ರೆಂಡ್ ಸಹೋದರ ಆಯುಧವೊಂದರಿಂದ ಅಯಾನ್​ ತಲೆಗೆ ಹೊಡೆದಿದ್ದಾನೆ. ಪರಿಣಾಮ ಅಯಾನ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕೊಲೆಯಾದ ಬಳಿಕ ನಾಲ್ವರು ಸೇರಿಕೊಂಡು ಹೇಗಾದರೂ ಮಾಡಿ ಶವವನ್ನು ಏಕಾಂತ ಸ್ಥಳದಲ್ಲಿ ಎಸೆಯಲು ನಿರ್ಧರಿಸಿದರು. ಸಹೋದರ ತನ್ನ ಇಬ್ಬರು ನಿಕಟ ಸಹಚರರನ್ನು ಸಂಪರ್ಕಿಸಿ, ಪಿಕ್-ಅಪ್ ವ್ಯಾನ್ ಬಾಡಿಗೆಗೆ ಪಡೆದು, ಶವವನ್ನು ಸುತ್ತಿ, ಮಗ್ರಾಹತ್‌ನಲ್ಲಿ ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಎಸೆದನು. ಅಯಾನ್​ ಕಾಣದಿರುವುದನ್ನು ನೋಡಿ ಗುರುವಾರ ಬೆಳಿಗ್ಗೆ, ಅವರ ತಾಯಿ ಮಂಉ ಮೊಂಡಲ್ ಹರಿದೇವಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು ಮತ್ತು ಅಂತಿಮವಾಗಿ ಶುಕ್ರವಾರ ರಾತ್ರಿ ಅಯಾನ್​ ಶವ ಪತ್ತೆಯಾಯಿತು. ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)
VIDEO| ಬೀದಿ ಬದಿಯಲ್ಲಿ ತರಕಾರಿ ಖರೀದಿಸಿ ವ್ಯಾಪಾರಿಗಳ ಕುಂದು-ಕೊರತೆ ಆಲಿಸಿದ ವಿತ್ತ ಸಚಿವೆ! ವಿಡಿಯೋ ವೈರಲ್​

ಪ್ರೊ ಕಬಡ್ಡಿ ಲೀಗ್: ಗುಜರಾತ್-ತಲೈವಾಸ್ ಫೈಟ್ ರೋಚಕ ಟೈ, ಪಟನಾ ಪೈರೇಟ್ಸ್-ಪುಣೇರಿ ಪಲ್ಟಾನ್ ಪಂದ್ಯವೂ ಸಮಬಲ

ಅಕ್ರಮ-ಸಕ್ರಮಕ್ಕೆ ನಾಲ್ಕು ಸೂತ್ರ: ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ; ಬೆಂಗಳೂರು ಹೊರತು ಉಳಿದೆಡೆ ಮಾತ್ರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
