ಕೋಲ್ಕತ:ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ಅವರ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇದೀಗ ಅಚ್ಚರಿಯ ವಿಷಯವೊಂದನ್ನು ಬಹಿರಂಗಗೊಳಿಸಿದ್ದಾರೆ.
ಅರ್ಪಿತಾ ಮತ್ತು ಪಾರ್ಥ ಚಟರ್ಜಿ ಅವರು ಐಷಾರಾಮಿ ಕಾರುಗಳಲ್ಲಿ ಜಾಲಿ ರೈಡ್​ ಹೋಗುತ್ತಿದ್ದರು ಎಂಬ ಮಾಹಿತಿಯನ್ನು ಇಡಿ ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ, ಆ ಕಾರುಗಳು ಇದೀಗ ಕೋಲ್ಕತದಲ್ಲಿರುವ ಅರ್ಪಿತಾ ಅವರ ಫ್ಲ್ಯಾಟ್​ನ ಪಾರ್ಕಿಂಗ್​ ಲಾಟ್​ನಿಂದ ನಾಪತ್ತೆಯಾಗಿದೆ.
ಎರಡು ಕಾರು ಕಾಣೆಯಾಗಿದೆ. ಒಂದು ಮರ್ಸಿಡೆಸ್​ ಮತ್ತು ಇನ್ನೊಂದು ಮಿನಿ ಕೂಪರ್​ ಕಾರು. ಎರಡು ಕೂಡ ಅರ್ಪಿತಾಗೆ ಸೇರಿದ್ದಾಗಿವೆ. ಈ ಕಾರುಗಳನ್ನು ಅರ್ಪಿತಾ ಮತ್ತು ಚಟರ್ಜಿ ಜಾಲಿ ರೈಡ್​ಗೆ ಬಳಸುತ್ತಿದ್ದರು. ಅಲ್ಲದೆ, ಇದೇ ಕಾರುಗಳ ಒಳಗೆ ಇಬ್ಬರು ಪಾರ್ಟಿ ಮಾಡುತ್ತಿದ್ದರು ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎರಡು ಕಾರುಗಳನ್ನು ಪಾರ್ಥ ಚಟರ್ಜಿ, ಅರ್ಪಿತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ, ಇತರೆ ಕಾರುಗಳನ್ನು ಖರೀದಿಸಲು ಅರ್ಪಿತಾಗೆ ಚಟರ್ಜಿ ನೆರವು ಸಹ ನೀಡಿದ್ದಾರೆ. ಈಗಾಗಲೇ ಎರಡು ಕಾರುಗಳನ್ನು ಅರ್ಪಿತಾ ಬುಕ್​ ಮಾಡಿದ್ದಾರೆ. ಮುಂಗಡ ಹಣವನ್ನೂ ಪಾವತಿ ಮಾಡಿದ್ದಾರೆ. ಇದರ ಹಣದ ವ್ಯವಹಾರವನ್ನು ಎರಡು ಶೆಲ್​ ಕಂಪನಿಗಳ ಮೂಲಕ ನಡೆಸಿದ್ದಾರೆಂದು ತಿಳಿದುಬಂದಿದೆ. ಇನ್ನೇನು ಕಾರುಗಳು ಡಿಲಿವರಿ ಆಗಬೇಕು. ಅಷ್ಟರಲ್ಲಿ ಅರ್ಪಿತಾ ಇಡಿ ಅಧಿಕಾರಿಗಳಿಂದ ಬಂಧನವಾದಳು ಎಂಬ ಮಾಹಿತಿ ಇದೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಕೋಲ್ಕತ್ತಾದ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಅವರ ನಿವಾಸದಿಂದ ಕಣ್ಮರೆಯಾದ ನಾಲ್ಕು ಐಷಾರಾಮಿ ಮತ್ತು ಮಧ್ಯಮ ಶ್ರೇಣಿಯ ಕಾರುಗಳಿಗಾಗಿ ಇಡಿ ಹುಡುಕಾಟ ನಡೆಸುತ್ತಿದೆ.
ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಜುಲೈ 22ರಂದು ಸಚಿವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಇದಾದ ಬಳಿಕ ಜುಲೈ 28 ಅರ್ಪಿತಾಗೆ ಸಂಬಂಧಿಸಿದ ಮತ್ತೊಂದು ಫ್ಲ್ಯಾಟ್​ನಲ್ಲಿ ಮತ್ತೆ 28 ಕೋಟಿ ರೂಪಾಯಿ ನಗದು ದೊರೆತಿದೆ. ಇದುವರೆಗೂ 50 ಕೋಟಿ ರೂಪಾಯಿಗು ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಏನಿದು ಹಗರಣ?ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇಡಿ, ಜುಲೈ 22ರಂದು ಅರ್ಪಿತಾ ಮನೆ ಮೇಲೆ ದಿಢೀರ್​ ದಾಳಿ ಮಾಡಿತು. ಈ ವೇಳೆ 21 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.(ಏಜೆನ್ಸೀಸ್​)
ಸ್ಟಾರ್ ನಟನಾಗಿ ಇಂಥಾ ಸಿನಿಮಾ ಮಾಡಲು ಎದೆಗಾರಿಕೆ ಬೇಕು: ವಿಆರ್​ ಚಿತ್ರ ಮೆಚ್ಚಿಕೊಂಡ ರಾಜಮೌಳಿ ​

ಇದೆಂಥಾ ಚಟ: ಬಂಗಾಳದಲ್ಲಿ ಕಾಂಡೋಮ್​ ಖರೀದಿಸುವವರ ಸಂಖ್ಯೆ ದಿಢೀರ್​ ಏರಿಕೆ! ಕಾರಣ ಮಾತ್ರ ವಿಚಿತ್ರ

ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
