ಚೆನ್ನೈ:ತಮಿಳುನಾಡು ಬಿಜೆಪಿ ಬೆಂಬಲಿಗರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿರುವ ಕಾಲಿವುಡ್​ ನಟ ಸಿದ್ಧಾರ್ಥ್​ಗೆ ಮಿಲನ ಖ್ಯಾತಿಯ ನಟಿ ಪಾರ್ವತಿ ಥಿರುವೊತ್ತು ಬೆಂಬಲ ಕೋರಿದ್ದಾರೆ.
ಏಪ್ರಿಲ್​ 29ರಂದು ಟ್ವೀಟ್​ ಮಾಡಿರುವ ಸಿದ್ಧಾರ್ಥ್​, ನನ್ನ ಫೋನ್​ ನಂಬರ್​ ಅನ್ನು ಬಿಜೆಪಿ ಐಟಿ ಸೆಲ್​ ಸೋರಿಕೆ ಮಾಡಿದೆ. ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದು, ನನ್ನ ಕುಟುಂಬದ ವಿರುದ್ಧ ತುಂಬಾ ಲಘುವಾಗಿ ಮಾತನಾಡಿದ್ದಾರೆ. ಇಷ್ಟೇ ಅಲ್ಲದೆ, ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಸಹ ಬಂದಿವೆ. ಎಲ್ಲವನ್ನು ಪೊಲೀಸರಿಗೆ ನೀಡಿದ್ದೇನೆ. ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಪ್ರಯತ್ನ ಮಾಡುತ್ತೀರಿ ಎಂದು ಬರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಅವರಿಗೆ ಸಿದ್ಧಾರ್ಥ್​ ಟ್ಯಾಗ್​ ಮಾಡಿದ್ದರು.
ಇಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಬೆದರಿಕೆ ಹಾಕಿರುವ ಕೆಲವರ ಸ್ಕ್ರೀನ್​ ಶಾಟ್​ಗಳನ್ನು ಶೇರ್​ ಮಾಡಿಕೊಂಡಿರುವ ಸಿದ್ಧಾರ್ಥ, ತಮಿಳುನಾಡಿನ ಬಿಜೆಪಿ ಸದಸ್ಯರು ನನಗೆ ಕಿರುಕುಳ ನೀಡಲು ಕೆಲ ಕಿಡಿಗೇಡಿಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಿನ್ನೆಯಿಂದ ಅನೇಕರು ನನ್ನ ಮೇಲೆ ಜಾಲತಾಣದಲ್ಲಿ ದಾಳಿ ಮಾಡುತ್ತಿದ್ದಾರೆ. ನಾವು ಕೋವಿಡ್​ನಿಂದ ಬದುಕಬಹುದು. ಆದರೆ, ಇಂತಹ ಜನರಿಂದ ಬದುಕುತ್ತೇವೆಯೇ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ಪಾರ್ವತಿ, ಹಿಂಜರಿಯಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ನಮ್ಮೊಂದಿಗೆ ಒಂದು ಸೇನೆಯೇ ಇದೆ. ಧೈರ್ಯವಾಗಿರಿ ಎಂದು ಸಂದೇಶ ರವಾನಿಸಿದ್ದಾರೆ. ಅಲ್ಲದೆ, ನಿನ್ನೆಯಷ್ಟೇ ಐ ಸ್ಟ್ಯಾಂಡ್​ ವಿತ್​ ಸಿದ್ಧಾರ್ಥ ಹ್ಯಾಶ್​ಟ್ಯಾಗ್​ ಸಹ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು.
With you @Actor_Siddharth No backing down! There is an army of us with you! Stay strong and lots of love to fam✨https://t.co/m0uXFgsghW
— Parvathy Thiruvothu (@parvatweets)April 29, 2021

ಇತ್ತೀಚೆಗಷ್ಟೇ ಸಿದ್ಧಾರ್ಥ್​ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಕೋವಿಡ್​ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸೋತು ಹೋಗಿದೆ ಎಂದು ಜರಿದಿದ್ದರು. ಇದರ ಬೆನ್ನಲ್ಲೇ ಸಿದ್ಧಾರ್ಥ್​ ವಿರುದ್ಧ ಜಾಲತಾಣದಲ್ಲಿ ವ್ಯಯಕ್ತಿಕವಾಗಿ ದಾಳಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.(ಏಜೆನ್ಸೀಸ್​)
ಸ್ಕೂಲ್ ಇಲ್ಲದಿದ್ದರೇನಂತೆ ಮನೇಲೇ ತಗೊಳ್ಳಿ ಕ್ಲಾಸ್!

ಬಾಲಕಾರ್ವಿುಕರಾಗೋದು ಬೇಡ, ಆದರೆ ಕೆಲಸದ ಮಹತ್ವ ಗೊತ್ತಿರಲಿ

ಕ್ಷೇತ್ರದ ಜನರಿಗೆ ನೆರವು ನೀಡಿ: ಸಂಪುಟ ಸಚಿವರಿಗೆ ಪ್ರಧಾನಿ ಮೋದಿ ಕರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
