ನವದೆಹಲಿ:ದೇಶದ ಜನತೆಗೆ ಸತತ ಇಂಧನ ದರ ಏರಿಕೆಯ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಯಾವಾಗ ಬೆಲೆ ಏರಿಕೆಗೆ ಕಡಿವಾಣ ಬೀಳಲಿದೆ ಎಂದು ಜನರು ಆಸೆಗಣ್ಣಿನಿಂದ ಎದರು ನೋಡುತ್ತಿರುವಾಗಲೇ ಇಂದು ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದೆ.
ಇಂದು (ಏ.3) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ 16 ದಿನಗಳಲ್ಲಿ 14 ಬಾರಿ ಏರಿಕೆಯಾಗಿದ್ದು, ಒಟ್ಟು 10 ರೂ. ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ಭಾರವಾಗಿದೆ.
ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆ ಮಾ. 24 ಮತ್ತು ಏಪ್ರಿಲ್​ 1ರಂದು ಮಾತ್ರ ಬಿಡುವು ನೀಡಲಾಗಿತ್ತು. ಉಳಿದ ಎಲ್ಲ ದಿನವು ಬೆಲೆ ಏರಿಕೆ ಆಗಿದೆ. ಇಂದು ಕೂಡ ಬೆಲೆ ಏರಿಕೆಯಾಗಿದೆ. ನಾಳೆಯು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ
ಬೆಂಗಳೂರುಪೆಟ್ರೋಲ್​: ಪ್ರತಿ ಲೀಟರ್​ಗೆ 111.01 ರೂಪಾಯಿಡೀಸೆಲ್​: ಪ್ರತಿ ಲೀಟರ್​ಗೆ 94.83 ರೂಪಾಯಿ
ದೆಹಲಿಪೆಟ್ರೋಲ್​: 105.41 ರೂಪಾಯಿಡೀಸೆಲ್​: 96.67
ಮುಂಬೈಪೆಟ್ರೋಲ್​: 120.47 ರೂ.ಡೀಸೆಲ್​: 104.72
ಚೆನ್ನೈಪೆಟ್ರೋಲ್​: 110.94 ರೂ.ಡೀಸೆಲ್​: 101.02
ಕೊಲ್ಕತಪೆಟ್ರೋಲ್​: 115.05ಡೀಸೆಲ್​: 99.82
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. 16 ದಿನದಲ್ಲಿ 14ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.(ಏಜೆನ್ಸೀಸ್​)
ಮದ್ಯದ ಕಿಕ್ ಇಳಿಸಿದ ಸಾಫ್ಟ್​ವೇರ್: ಪೂರೈಕೆಯಾಗದೆ ಮಾಲೀಕರು ಕಂಗಾಲು, ಇಂದು ಪ್ರತಿಭಟನೆ

ಪರಿಶಿಷ್ಟರಿಗೆ ಡಬಲ್ ಗಿಫ್ಟ್: ಭೂ ಒಡೆತನ ಯೋಜನೆ ಸಹಾಯಧನ, ವಸತಿ ಸಬ್ಸಿಡಿ ಹೆಚ್ಚಳ

ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್: ಕನ್ನಡ ಶಾಲೆ ಉಳಿವಿಗೆ ಆಂಗ್ಲ ಶಿಕ್ಷಣ ಅಗತ್ಯ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eleven − one =
Remember me
