ನವದೆಹಲಿ:ಕೇವಲ ನಾಲ್ಕೇ ದಿನಗಳಲ್ಲಿ ಮೂರು ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಆಯಿಲ್​ ಕಂಪನಿಗಳು ಮತ್ತೊಮ್ಮೆ ಶಾಕ್​ ನೀಡಿದೆ. ಇಂದು (ಮಾ.25) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಮತ್ತೆ 80 ಪೈಸೆಗಳಷ್ಟು ಏರಿಕೆಯಾಗಿದೆ. ನಿನ್ನೆ (ಮಾ. 24) ಒಂದು ದಿನ ಇಂಧನ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಮಾರ್ಚ್​ 22 ಮತ್ತು ಮಾ.23ರಂದು ಬೆಲೆ ಏರಿಕೆಯಾಗಿತ್ತು. ಒಂದು ದಿನದ ಬಳಿಕ ಮತ್ತೊಮ್ಮೆ ಬೇಲೆ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ಎದುರಾಗುತ್ತಿದೆ.
ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆದೆಹಲಿಪೆಟ್ರೋಲ್​: ಪ್ರತಿ ಲೀಟರ್​ಗೆ 97.81 ರೂಪಾಯಿಡೀಸೆಲ್​: ಪ್ರತಿ ಲೀಟರ್​ಗೆ 89.07
ಮುಂಬೈಪೆಟ್ರೋಲ್​: 112.51 ರೂ.ಡೀಸೆಲ್​: 96.70
ಚೆನ್ನೈಪೆಟ್ರೋಲ್​: 103.67 ರೂ.ಡೀಸೆಲ್​: 93.71
ಕೊಲ್ಕತಪೆಟ್ರೋಲ್​: 107.18 ರೂ.ಡೀಸೆಲ್​: 92.22
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ನಾಲ್ಕೇ ದಿನದಲ್ಲಿ ಮೂರನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಇಂಧರ ದರದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಇದೀಗ ಚುನಾವಣೆ ಮುಗಿದ್ದಿದ್ದು, ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.(ಏಜೆನ್ಸೀಸ್​)
ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತಕ್ಕೆ ಬೇಡಿಕೆ: ಸಿಎಂ ಕೇಜ್ರಿವಾಲ್​ ಉತ್ತರ ಕೇಳಿ ದಂಗಾದ ಬಿಜೆಪಿಗರು!

ಶಿಕ್ಷಕರ ಹುದ್ದೆಗೆ ಮೊದಲ ದಿನವೇ 5 ಸಾವಿರ ಅರ್ಜಿ ಸಲ್ಲಿಕೆ: ಅರ್ಜಿ ಶುಲ್ಕ ಪಾವತಿಸಿರುವ ಸಂಖ್ಯೆ ಮಾತ್ರ 5!

ವಿಜಯವಾಣಿ ಕ್ಲಬ್​ಹೌಸ್​ನಲ್ಲಿಂದು ವಿಶ್ವ ರಂಗಭೂಮಿ ಸಂವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
