ನವದೆಹಲಿ:ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹಾದೂರ್​ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕ ಬಳಿ ತೆರಳಿ ಪುಷ್ಪ ನಮನ ಅರ್ಪಿಸಿದರು.
ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯವರಿಗೆ ನನ್ನ ನಮನ. ಈ ಗಾಂಧಿ ಜಯಂತಿ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದೆ. ನಾವು ಬಾಪು ಅವರ ಆದರ್ಶಗಳನ್ನು ಸದಾ ಪಾಲಿಸುತ್ತಿರಬೇಕು. ಗಾಂಧಿಯವರಿಗೆ ಗೌರವ ಸೂಚಕವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ ಎಂದಿದ್ದಾರೆ.
https://twitter.com/narendramodi/status/1576387584003280896?s=20&t=5H8Z7-R6Z7wAQyjK5Kxuog
ಹಾಗೇ ಲಾಲ್ ಬಹಾದೂರ್​ ಶಾಸ್ತ್ರಿ ಅವರು ತಮ್ಮ ಸರಳತೆ ಮತ್ತು ನಿರ್ಣಾಯಕತೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರ ಕಠಿಣ ನಾಯಕತ್ವ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಜಯಂತಿಯಂದು ಅವರಿಗೆ ನಮನಗಳು ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
Lal Bahadur Shastri Ji is admired all across India for his simplicity and decisiveness. His tough leadership at a very crucial time of our history will always be remembered. Tributes to him on his Jayanti.pic.twitter.com/f5a3PWreMl
— Narendra Modi (@narendramodi)October 2, 2022

ಇದೇ ಸಂದರ್ಭದಲ್ಲಿ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ಲಾಲ್ ಬಹಾದೂರ್​ ಶಾಸ್ತ್ರಿ ಅವರ ಗ್ಯಾಲರಿಯಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಪ್ರಧಾನಿಯಾಗಿದ್ದ ಶಾಸ್ತ್ರಿ ಅವರ ಜೀವನ ಪಯಣ ಮತ್ತು ಸಾಧನೆಗಳನ್ನು ತೋರಿಸುತ್ತದೆ. ನೀವು ಒಮ್ಮೆ ಮ್ಯೂಸಿಯಂಗೆ ಭೇಟಿ ನೀಡಿ ಎಂದು ಕರೆ ನೀಡಿದ್ದಾರೆ.
Today, on Shastri Ji’s Jayanti I am also sharing some glimpses from his gallery in the Pradhanmantri Sangrahalaya in Delhi, which showcases his life journey and accomplishments as PM. Do visit the Museum…pic.twitter.com/09yi9FWQSs
— Narendra Modi (@narendramodi)October 2, 2022

ದೆಹಲಿಯ ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕ ಮತ್ತು ವಿಜಯ್​ ಘಾಟ್​ನಲ್ಲಿರುವ ಲಾಲ್​ ಬಹಾದೂರ್​​ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನಕರ್​, ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸಹ ಸಹ ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಿಗೆ ತಮ್ಮ ಗೌರವ ಸಮರ್ಪಿಸಿದರು.(ಏಜೆನ್ಸೀಸ್​)
#WATCH| Delhi: PM Narendra Modi pays tribute to Mahatma Gandhi at Rajghat on#GandhiJayanti
(Source: DD)pic.twitter.com/HUZyZKzjJM
— ANI (@ANI)October 2, 2022

#WATCH| Delhi: PM Narendra Modi pays tribute to former PM Lal Bahadur Shastri on his birth anniversary
(source: DD)pic.twitter.com/FTwww9foal
— ANI (@ANI)October 2, 2022

#WATCH| President Droupadi Murmu pays tribute to Mahatma Gandhi at Rajghat on#GandhiJayantipic.twitter.com/SNA5mtGidA
— ANI (@ANI)October 2, 2022

Delhi | Vice President Jagdeep Dhankar pays tribute to Mahatma Gandhi at Rajghat on occasion of#GandhiJayantipic.twitter.com/QUWg4tTEnQ
— ANI (@ANI)October 2, 2022

Delhi | Congress interim president Sonia Gandhi and Senior Congress leader Mallikarjun Kharge pay tribute to Mahatma Gandhi at Rajghat on#GandhiJayantipic.twitter.com/EBkoWbWpHZ
— ANI (@ANI)October 2, 2022

ಗಾಂಧಿ ಜಯಂತಿ‌ ಹಿನ್ನಲೆ ಇಂದಿನ ಜೋಡೋ ಯಾತ್ರೆಯ ಬೆಳಗಿನ ಪಾದಯಾತ್ರೆಗೆ ರಾಹುಲ್​ ಗಾಂಧಿ ಬ್ರೇಕ್​

ಪಂದ್ಯ ಸೋತಿದ್ದಕ್ಕೆ ಹತಾಶೆಯಿಂದ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​: ಕಾಲ್ತುಳಿತದಿಂದ 127 ಮಂದಿ ದುರ್ಮರಣ

ದೇವಸ್ಥಾನದಿಂದ ಹಿಂದಿರುಗುವಾಗ ಕೆರೆಗೆ ಉರುಳಿದ ಟ್ರ್ಯಾಕ್ಟರ್​: 26 ಯಾತ್ರಿಕರ ದುರ್ಮರಣ, ಪ್ರಧಾನಿ ಮೋದಿ ಸಂತಾಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 1 =
Remember me
