ನವದೆಹಲಿ:ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಕರೆತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನದ ವಿಶೇಷ ದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದಾರೆ.
ಬೋನಿನ ಬಾಗಿಲುಗಳನ್ನು ಯಂತ್ರದ ಸಹಾಯದೊಂದಿಗೆ ತೆರೆಯುವ ಮೂಲಕ ಪ್ರಧಾನಿ ಮೋದಿ ಅವರು ಚೀತಾಗಳನ್ನು ಭಾರತದ ಮಣ್ಣಿಗೆ ಬಿಟ್ಟರು. ಈ ವೇಳೆ ಸ್ವತಃ ಕ್ಯಾಮೆರಾದಲ್ಲಿ ಚೀತಾಗಳ ಫೋಟೋವನ್ನು ಮೋದಿ ಕ್ಲಿಕ್ಕಿಸಿದರು.
#WATCH| Prime Minister Narendra Modi releases the cheetahs that were brought from Namibia this morning, at their new home Kuno National Park in Madhya Pradesh.
(Source: DD)pic.twitter.com/CigiwoSV3v
— ANI (@ANI)September 17, 2022

ಸುಮಾರು 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾ ಸಂತತಿ ಭಾರತಕ್ಕೆ ಮತ್ತೆ ಮರಳಿದೆ. ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ಹಾರಿದ 8 ಚೀತಾಗಳು ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿರುವ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು.
Prime Minister Narendra Modi releases the cheetahs that were brought from Namibia this morning, at Kuno National Park in Madhya Pradesh.pic.twitter.com/dtW01xzElV
— ANI (@ANI)September 17, 2022

ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್​ನಿಂದ 8 ಚೀತಾಗಳನ್ನು ಕರೆತರಲಾಗಿದೆ. 8ರಲ್ಲಿ 5 ಚೀತಾ ಹೆಣ್ಣು ಮತ್ತು 3 ಚೀತಾ ಗಂಡು. ಭಾರತಕ್ಕೆ ಆಗಮಿಸಿದ ಈ ವಿಶೇಷ ಅತಿಥಿಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಿದ್ದಾರೆ.
ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬಂದಿವೆ.(ಏಜೆನ್ಸೀಸ್​)
ಭಾರತಕ್ಕೆ ಬಂದಿಳಿದ ವಿಶೇಷ ಅತಿಥಿಗಳು: ಕೆಲವೇ ಗಂಟೆಗಳಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳ ಅರ್ಪಣೆ

ನಮೀಬಿಯಾ ಚೀತಾಗಳಿಗೆ ಕುನೋ ರಾಷ್ಟ್ರೀಯ ಉದ್ಯಾನವನ ಸೂಕ್ತ ಯಾಕೆ?

ಮದ್ವೆಯಾದ 8 ವರ್ಷದ ಬಳಿಕ ಕಳಚಿತು ಗಂಡನ ಮುಖವಾಡ: ಹನಿಮೂನ್​ ವೇಳೆ ಗೊತ್ತಾಗದ ರಹಸ್ಯ ಈಗ ಬಯಲು! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 18 =
Remember me
