ನವದೆಹಲಿ:ಹೈಟಿಯನ್​ ರಾಷ್ಟ್ರದ ಅಧ್ಯಕ್ಷ ಜೋವೆನೆಲ್ ಮೋಯಿಸ್​ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಗುರುವಾರ ರಾತ್ರಿ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಹೈಟಿ ದೇಶದ ಅಧ್ಯಕ್ಷ ಜೋವೆನೆಲ್​ ಮೋಯಿಸ್ ಹತ್ಯೆ ಮತ್ತು ಪ್ರಥಮ ಮಹಿಳೆ ಮಾರ್ಟಿನ್​ ಮೋಯಿಸ್​ ಮೇಲಿನ ದಾಳಿಯ ಬಗ್ಗೆ ತಿಳಿದು ದುಃಖವಾಯಿತು. ಅಧ್ಯಕ್ಷರ ಕುಟುಂಬ ಮತ್ತು ಹೈಟಿ ದೇಶದ ಜನರಿಗೆ ನನ್ನ ಸಂತಾಪಗಳು ಎಂದು ಮೋದಿ ಹೇಳಿದ್ದಾರೆ.
Saddened by the assassination of President Jovenel Moïse and the attack on First Lady Martine Moïse of Haiti. My Condolences to the family of President Moïse and the people of Haiti.@claudejoseph03
— Narendra Modi (@narendramodi)July 8, 2021

ಅಪರಿಚಿತ ಗುಂಪೊಂದು ಹೈಟಿಯನ್​ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಅವರ ಖಾಸಗಿ ನಿವಾಸದ ಮೇಲೆ ಕಳೆದ ಮಂಗಳವಾರ ದಾಳಿ ಮಾಡಿ ಮೋಯಿಸ್​ ಅವರನ್ನು ಹತ್ಯೆ ಮಾಡಿದೆ. ಬುಧವಾರ ಈ ವಿಚಾರವನ್ನು ಹೈಟಿ ದೇಶದ ಹಂಗಾಮಿ ಪ್ರಧಾನಿ ಕ್ಲೌಡ್​ ಜೋಸೆಫ್​ ತಿಳಿಸಿದರು. ದಾಳಿಯಲ್ಲಿ ಹೈಟಿಯನ್​ ಪ್ರಥಮ ಮಹಿಳೆ ಮಾರ್ಟಿನ್​ ಮೋಯಿಸ್​ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
11 ದಶಲಕ್ಷಕ್ಕೂ ಹೆಚ್ಚು ಜನರಿರುವ ರಾಷ್ಟ್ರವು ಮೋಯಿಸ್ ಆಳ್ವಿಕೆಯಲ್ಲಿ ಹೆಚ್ಚು ಅಸ್ಥಿರವಾಗಿ ಮತ್ತು ಅಸಮಾಧಾನಗೊಂಡಿದೆ ಎಂದು ತಿಳಿದುಬಂದಿದೆ. ಪೋರ್ಟ್ ಔ ಪ್ರಿನ್ಸ್‌ನ ರಾಜಧಾನಿಯಲ್ಲಿ ಸಾಮೂಹಿಕ ಹಿಂಸಾಚಾರವು ಹೆಚ್ಚಾಗುತ್ತಿರುವುದರಿಂದ, ಹಣದುಬ್ಬರ ಮತ್ತು ಆಹಾರ ಮತ್ತು ಇಂಧನವು ವಿರಳವಾಗುತ್ತಿದೆ. ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ತೀವ್ರವಾಗಿದೆ.(ಏಜೆನ್ಸೀಸ್​)
ಖಾಸಗಿ ನಿವಾಸದ ಮೇಲೆ ದಾಳಿ ಮಾಡಿ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಹತ್ಯೆ

ಜೆ​ಫ್​ ಬೆಜೋಸ್​ ಜಗತ್ತಿನ ಕುಬೇರ!

ಇಂದು ಬೆಳ್ಳಂಬೆಳಗ್ಗೆ ಅಮೆರಿಕ ರಾಯಭಾರಿ ಕಚೇರಿ ಮೇಲೆ ರಾಕೆಟ್​ ದಾಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 1 =
Remember me
