ಅಹಮದಾಬಾದ್​:ತವರು ಭೂಮಿ ಗುಜರಾತಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಇದರ ನಡುವೆ ತಮ್ಮ ಮಾನವೀಯ ಗುಣದಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಅವರು ಅಹಮದಾಬಾದ್​ನಿಂದ ಗಾಂಧಿನಗರ ಕಡೆ ಹೊರಟಿದ್ದಾಗ ಮಾರ್ಗ ಮಧ್ಯೆ ತಮ್ಮ ಬೆಂಗಾವಲು ವಾಹವನ್ನು ನಿಲ್ಲಿಸಿ, ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟರು. ಈ ಮೂಲಕ ವಿವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು, ಮಾನವೀಯತೆಗಿಂತ ದೊಡ್ಡದು ಯಾವುದು ಇಲ್ಲ ಎಂಬ ಸಂದೇಶವನ್ನು ಸಾರಿದರು.
ಈ ಹಿಂದೆ 2017ರಲ್ಲಿ ಪ್ರಧಾನಿ ಮೋದಿ ಅವರು ವಿಐಪಿ ಬದಲಿಗೆ ಇಪಿಐ (ಎಲ್ಲರೂ ಮುಖ್ಯ) ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಇಪಿಐ ಅಂದರೆ ಎವೆರಿ ಪರ್ಸನ್​ ಹ್ಯಾಸ್​ ವ್ಯಾಲ್ಯೂ ಆ್ಯಂಡ್​ ಇಂಪಾರ್ಟೆನ್ಸ್​ (ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಪ್ರಾಮುಖ್ಯತೆ ಇರುತ್ತದೆ). ಪ್ರಧಾನಿ ಅವರು ಅಂದು ಹೇಳಿದ ಮಾತನ್ನು ಪಾಲಿಸುತ್ತಲೇ ಬರುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ವಿಐಪಿ ಸಂಸ್ಕೃತಿಯ ಸಂಕೇತವಾದ ವಾಹನಗಳ ಮೇಲಿನ ಕೆಂಪು ದೀಪಗಳ ಬಳಕೆಯನ್ನು ಸಹ ಪ್ರಧಾನಿ ಮೋದಿ ಕೊನೆಗೊಳಿಸಿದ್ದಾರೆ.(ಏಜೆನ್ಸೀಸ್​)
#WATCH| Gujarat: Prime Minister Narendra Modi, en route from Ahmedabad to Gandhinagar, stopped his convoy to give way to an ambulancepic.twitter.com/yY16G0UYjJ
— ANI (@ANI)September 30, 2022

ನಟ ವಿಶಾಲ್​ ಮನೆಯ ಮೇಲೆ ಕಲ್ಲು ತೂರಾಟ: ದಾಳಿ ಹಿಂದಿನ ಕಾರಣ ಬಿಚ್ಚಿಟ್ಟ ನಾಲ್ವರು ಆರೋಪಿಗಳು

ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ

ಹಾಸನದಲ್ಲಿ ಇಸ್ಪೀಟ್​ ಅಡ್ಡೆ ಮೇಲೆ ದಾಳಿ: ಠಾಣೆಗೆ ನುಗ್ಗಿ ಮಹಿಳಾ ಪಿಎಸ್​ಐ ಮೇಲೆ ಹಲ್ಲೆಗೆ ಯತ್ನಿಸಿದ ಗ್ರಾಪಂ ಸದಸ್ಯ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty − seventeen =
Remember me
