ಅಹಮದಬಾದ್​:ಪೊಲೀಸ್​ ಕೆಲಸವೆಂದರೆ ಅದಕ್ಕೊಂದು ಗತ್ತು ಗಾಂಭೀರ್ಯ ಇದೆ. ಅದರಲ್ಲೂ ಯೂನಿಫಾರ್ಮ್​ ಮೈಮೇಲೆ ಇದ್ದರೆ ಶ್ರದ್ಧೆ ಹಾಗೂ ಗಂಭೀರತೆಯಿಂದ ಕೆಲಸ ಮಾಡಬೇಕು. ಜನರ ಸಮಸ್ಯೆಯನ್ನು ಬಗೆಹರಿಸಿ, ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕರ್ತವ್ಯದ ಸಮಯದಲ್ಲಿ ಎಂಜಾಯ್​ ಮಾಡಲು ಅವಕಾಶವೇ ಇರುವುದಿಲ್ಲ. ಆದರೆ, ತಮ್ಮ ಕರ್ತವ್ಯ ಮರೆತು ಕೆಲಸದ ಸಮಯದಲ್ಲಿ ಪೊಲೀಸ್​ ಸಿಬ್ಬಂದಿ ಎಂಜಾಯ್​ ಮಾಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಏನಿದೆ?ಚಲಿಸುತ್ತಿರುವ ಕಾರಿನಲ್ಲಿ ಕುಳಿತು ಕರ್ತವ್ಯದ ಸಮಯದಲ್ಲಿ ಯೂನಿಫಾರ್ಮ್​ನಲ್ಲಿಯೇ ನಾಲ್ವರು ಪೊಲೀಸ್​ ಸಿಬ್ಬಂದಿ ಫನ್​ ಮಾಡುತ್ತಿರುವುದು ವಿಡಿಯೋದಲ್ಲಿದೆ. ಕಾರಿನಲ್ಲಿ ಹಿಂದಿ ಹಾಡನ್ನು ಪ್ಲೇ ಮಾಡಿ, ಡಾನ್ಸ್​ ಮಾಡುತ್ತಾ ಕೂಗಾಡಿಕೊಂಡು ಸಿಬ್ಬಂದಿ ತೆರಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Three#constablesof A Division#policestationof#Gandhidhamfrom#Kutch#districtwere suspended after a video of them#dancingand having fun while on#dutywent viral on#socialmediapic.twitter.com/QVsarh2jPv
— Ahmedabad Mirror (@ahmedabadmirror)January 19, 2022

ಈ ಘಟನೆ ಗುಜರಾತಿನ ಕಚ್​ ಜಿಲ್ಲೆಯಲ್ಲಿ ನಡೆದಿದೆ. ಗಾಂಧಿಧಾಮ್​ ಪೊಲೀಸ್​ ಠಾಣಾ ಸಿಬ್ಬಂದಿಯ ಈ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಮೂವರು ಕಾನ್ಸ್​ಟೇಬಲ್​ಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.(ಏಜೆನ್ಸೀಸ್​)
ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್​: ಮೊದಲ ದಿನದ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಾ!

ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಹೊಂದುವ ಹಕ್ಕಿದೆ ಎಂದು ಹೇಳುವಂತಿಲ್ಲ: ದೆಹಲಿ ಹೈಕೋರ್ಟ್​

ಡೇಂಜರ್ ಪ್ಯಾರಾಸಿಟಮಲ್ ಸೇವನೆ ಅತಿಯಾದರೆ ಅಡ್ಡಪರಿಣಾಮ; ನರಮಂಡಲ, ಹೃದಯ ತೊಂದರೆ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 10 =
Remember me
