ಪಣಜಿ:ಗೋವಾದ ಕಾನಕೊನಾ ದಾಮ್​ ಏರಿಯಾದಲ್ಲಿ 2020ರಲ್ಲಿ ಅಶ್ಲೀಲ ವಿಡಿಯೋ ಶೂಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಲ್​ ಕಂ ನಟಿ ಪೂನಂ ಪಾಂಡೆ ಹಾಗೂ ಅವರ ಮಾಜಿ ಪತಿ ಸ್ಯಾಮ್​ ಬಾಂಬೆ ವಿರುದ್ಧ ಗೋವಾ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.
ಕಾನಕೋನಾದ ಫಸ್ಟ್​ ಕ್ಲಾಸ್​ ಮ್ಯಾಜಿಸ್ಟ್ರೇಟ್​ ಮುಂದೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಚಾರ್ಜ್ ಶೀಟ್ ಪ್ರಕಾರ, ಪೂನಂ ಪಾಂಡೆ ಅವರು ಸಾರ್ವಜನಿಕವಾಗಿ ಅಸಭ್ಯ ರೀತಿಯಲ್ಲಿ ನೃತ್ಯ ಮಾಡುವ ಮತ್ತು ವರ್ತಿಸುವ ವೀಡಿಯೊವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು ಎಂದು ಹೇಳಲಾಗಿದೆ.
ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಕಾನಕೋನಾ ಪೊಲೀಸರು ಪೂನಂ ಹಾಗೂ ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ 2020ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋವಾದ ಚಾಪೋಲಿ ಅಣೆಕಟ್ಟಿನ ಬಳಿ ನಟಿ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿದ್ದರು. ಇದೇ ಪ್ರಕರಣದಲ್ಲಿ ಪೂನಂ ಮತ್ತು ಸ್ಯಾಮ್ ಅವರನ್ನು 2020ರ ನವೆಂಬರ್ ತಿಂಗಳಲ್ಲಿ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಈ ಪ್ರಕರಣದಲ್ಲಿ 39 ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಐಪಿಸಿ ಸೆಕ್ಷನ್ 447, 292, 293, 294 ಅಡಿಯಲ್ಲಿ ಅಶ್ಲೀಲತೆ, ಅತಿಕ್ರಮಣ, ಅಶ್ಲೀಲ ವಿಡಿಯೋ ಪ್ರಸಾರ ಮತ್ತು ಮಹಿಳೆಯರ ಮಾನನಷ್ಟಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಪಾಲಕರ ವಿರೋಧದ ನಡುವೆಯೂ ಮದ್ವೆಯಾದ ಮರುಗಳಿಗೆಯೇ ನವವಿವಾಹಿತೆಗೆ ಶಾಕ್​ ಕೊಟ್ಟ ಪಾಲಕರು!

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಬಳಿ ಹಣ ಕಬಳಿಸಿದ ರಾಮನಗರ ಲೇಡಿ PSI? ದುಡ್ಡು ಕೇಳಿದ್ದಕ್ಕೆ ದರ್ಪದ ಮಾತು

ತೀವ್ರ ಹೋರಾಟ ನಡೆಸಿ ಕೊನೆಗೂ ತನ್ನ ಪ್ರೇಯಸಿಯನ್ನು ಮರುಪಡೆದ ಆಧಿಲಾ: ಗೆದ್ದು ಬೀಗಿದ ಸಲಿಂಗ ಜೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
