ಪುದುಕ್ಕೊಟ್ಟೈ:ಮೇಕೆ ಕಳ್ಳರನ್ನು ಹಿಡಿಯಲು ಹೋದ ಸಹಾಯಕ​ ಇನ್ಸ್​ಪೆಕ್ಟರ್​ನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಪುದುಕ್ಕೊಟ್ಟೈಯಲ್ಲಿ ನಡೆದಿದೆ.
ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್​ ಠಾಣೆಯಲ್ಲಿ ವಿಶೇಷ ಸಹಾಯಕ ಇನ್ಸ್​ಪೆಕ್ಸರ್​ ಆಗಿದ್ದ ಭೂಮಿನಾಥನ್ (50)​ ಕೊಲೆಯಾಗಿದ್ದಾರೆ. ಭಾನುವಾರ ರಾತ್ರಿ ಗಸ್ತಿನಲ್ಲಿದ್ದ ಭೂಮಿನಾಥನ್​, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ತಲೆಗೆ ದಾಳಿ ಮಾಡಿದ್ದಾರೆ. ತಲೆ ಹೊಡೆದು ಹೋಗಿದ್ದು ತೀವ್ರ ರಕ್ತಸ್ರಾವವಾಗಿದ್ದು, ರಕ್ತದ ಮಡುವಿನಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಮೇಕೆಗಳನ್ನು ಕಳ್ಳತನ ಮಾಡಿ, ಅದನ್ನು ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ನವಲ್ಪಟ್ಟು ಬಾರ್ಡರ್​ನಲ್ಲಿ ಸಾಗುತ್ತಿದ್ದಾಗ, ಗಸ್ತಿನಲ್ಲಿದ್ದ ಭೂಮಿನಾಥನ್​ ಖದೀಮರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಇನ್ಸ್​ಪೆಕ್ಟರ್​ ಮೇಲೆಯೇ ದಾಳಿ ಮಾಡಿರುವ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಕುಡುಗೋಲಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾರೆಂದು ತಿಳಿದುಬಂದಿದೆ. ತಿರುಚಿರಾಪಳ್ಳಿ – ಪುದುಕೋಟ್ಟೈ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೀರನೂರು ಠಾಣಾ ವ್ಯಾಪ್ತಿಯಲ್ಲಿ ಭೂಮಿನಾಥನ್ ಹತ್ಯೆಯಾಗಿದೆ.
ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಕೆ ಕಳ್ಳತನ ಪ್ರಕರಣ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಭೂಮಿನಾಥನ್​ ಗಸ್ತಿನಲ್ಲಿದ್ದರು. ಕರ್ನಾಟಕದ ರಾಮನಗರ ಮತ್ತು ತಮಿಳುನಾಡಿನಲ್ಲು ಮೇಕೆ ಕಳ್ಳತನ ಪ್ರಕರಣಗಳಿವೆ. ಖದೀಮರು ಜೈಲಿನಿಂದ ಹೊರ ಬಂದು ಮತ್ತೆ ಕಳ್ಳತನ ಮಾಡ್ತಿದ್ರು. ಸದ್ಯ ಆರೋಪಿಗಳನ್ನು ಬಂಧಿಸಲು ಇಬ್ಬರು ತನಿಖಾಧಿಕಾರಿಗಳು ಮತ್ತು ಇಬ್ಬರ ಉಪ ತನಿಖಾಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲು ತಿರುಚಿರಾಪಳ್ಳಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಶಾ ಪಾರ್ಥಿಬನ್​, ಡಿಸಿಪಿಗಳಾ ಶಿವಸುಬ್ರಮಣಿಯನ್​ ಮತ್ತು ಅರುಣಮೋಳಿ ಅರಸುಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
2 ಮಕ್ಕಳ ತಾಯಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ: ಆಕೆಯ ಮಾತು ನಂಬಿ ಹೋದವನ ಬಾಳಲ್ಲಿ ಕತ್ತಲು!

ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​​ ಅವರ​ ಮುಂಬೈ ನಿವಾಸದಲ್ಲಿ ಅಗ್ನಿ ಅವಘಡ

ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್‌ ನವದಂಪತಿಯ ಘೋರ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
