ಹೈದರಾಬಾದ್​:ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್​ ಅಧಿಕಾರಿ ಮತ್ತವರ ಪತ್ನಿ ದಾರುಣ ಸಾವಿಗೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರ್ಮೆಟ್​ನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಅಪಘಾತದಲ್ಲಿ ಪೊಲೀಸ್​ ಅಧಿಕಾರಿ ಲಕ್ಷ್ಮಣ್​​ (39) ಮತ್ತು ಪತ್ನಿ ಝಾನ್ಸಿ (34) ಮೃತಪಟ್ಟಿದ್ದಾರೆ. ಸುಲ್ತಾನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ್​ ಹೈದರಾಬಾದ್​ನ ಕೊಟ್ಟಪೇಟೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು.
ಮಗ ಸಾಹಸ ಮತ್ತು ಮಗಳು ಆಕಾಂಕ್ಷಾ ಜತೆ ಕುಟುಂಬ ಸಮೇತರಾಗಿ ಮೂರು ದಿನಗಳ ಹಿಂದೆ ಸೂರ್ಯಪೇಟೆ ಜಿಲ್ಲೆಯ ಪೆನ್​ಪಹಾದ್​ ವಲಯದ ನಗುಲಪತಿಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಸಂಬಂಧಿಕರ ಒತ್ತಾಯದ ಮೇರೆಗೆ ಮಗಳನ್ನು ಅಲ್ಲಿಯೇ ಬಿಟ್ಟು, ಶುಕ್ರವಾರ ರಾತ್ರಿ ಹೈದರಾಬಾದ್​ಗೆ ಹಿಂದಿರುಗುತ್ತಿದ್ದರು.
ಈ ವೇಳೆ ಝಾನ್ಸಿ ಕಾರು ಓಡಿಸುತ್ತಿದ್ದರು. ಲಕ್ಷ್ಮಣ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಹಿಂದಿನ ಸೀಟಿನಲ್ಲಿ ಮಗ ಸಾಹಸ ಕುಳಿತಿದ್ದನು. ಮಧ್ಯರಾತ್ರಿ ನಿಯಂತ್ರಣ ಕಳೆದುಕೊಂಡ ಕಾರು ಅಬ್ದಲ್ಲಾಪುರ್​ ಉಪನಗರದ ಇನಾನ್​ಗುಡ ಗೇಟ್​ ರಸ್ತೆ ಬಂದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಗಂಭೀರವಾರ ಗಾಯಗೊಂಡು ಲಕ್ಷ್ಮಣ್​ ಮತ್ತು ಝಾನ್ಸಿ ಮೃತಪಟ್ಟರೆ. ಸ್ವಲ್ಪವೂ ಏಟಾಗದೇ ಮಗ ಸಾಹಸ ಪವಾಡವೆಂಬಂತೆ ಬದುಕುಳಿದಿದ್ದಾನೆ. ಆದರೂ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಮೃತದೇಹಗಳನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.(ಏಜೆನ್ಸೀಸ್​)
ಲ್ಯಾಂಗ್​ ಮಂಜು-ದಿವ್ಯಾ ಸುರೇಶ್​ ನಡುವಿನ ಅಸಲಿ ಸಂಬಂಧ ಬಯಲು ಮಾಡಿದ ನೆಟ್ಟಿಗರು!

ಪತಿಯಿಂದ ಪತ್ನಿಯ ಹತ್ಯೆ: ಶವದ ಮುಂದೆ ಸೆಲ್ಫಿ, ವಾಟ್ಸ್​ಆ್ಯಪ್ ನೋಡಿ ಬೆಚ್ಚಿಬಿದ್ದ ಸ್ನೇಹಿತರು!​

ಪಾಕಿಸ್ತಾನದ ಆಡಳಿತ ಸೇವೆಯಲ್ಲೀಗ ಪ್ರಥಮ ಹಿಂದೂ ಮಹಿಳೆ: ಪ್ರತಿಷ್ಠಿತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + nine =
Remember me
