ತಿರುವನಂತಪುರಂ:ಕೇರಳ ಮುಖ್ಯಮಂತ್ರಿ ಪಿಣರಾಯ್​ ವಿಜಯನ್​ ಅವರ ಅಧಿಕೃತ ನಿವಾಸದ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್​ ಸಿಬ್ಬಂದಿಯೊಬ್ಬರ ಮೃತದೇಹ ರೈಲು ಹಳಿಯ ಮೇಲೆ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೃತ ಸಿಬ್ಬಂದಿಯನ್ನು ಅನೀಶ್​ ಕ್ಸೇವಿಯರ್ (32) ಎಂದು ಗುರುತಿಸಲಾಗಿದೆ. ಭಾನುವಾರ 1.30ರ ಸುಮಾರಿಗೆ ಇಡಿಚಕ್ಕಪ್ಲಾಮೂಡು ಬಳಿ ಇರುವ ರೈಲ್ವೇ ಮೇಲ್ಸೇತುವೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಪರಸಾಲ ಪೊಲೀಸ್​ ಠಾಣೆಯಲ್ಲಿನ ಮಾನಸಿಕ ಕಿರುಕುಳದಿಂದ ಅನೀಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತನ್ನ ನೆರೆಹೊರೆಯ ಮಹಿಳೆಯೊಬ್ಬರು ದಾಖಲಿಸಿದ ದೂರಿನ ಮೇರೆಗೆ ಅನೀಶ್​ ಪೊಲೀಸ್ ಠಾಣೆಗೆ ಹೋಗಿದ್ದರು. ಇದಕ್ಕೂ ಮುನ್ನ ಅಣ್ಣನ ಮದುವೆ ರದ್ದಾದ ಹಿನ್ನೆಲೆಯಲ್ಲಿ ಮಹಿಳೆಯೊಂದಿಗೆ ಕೆಲಕಾಲ ಜಗಳವಾಡಿದ್ದರು. ಅನೀಶ್, ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳು. ಪೊಲೀಸ್​ ಠಾಣೆಗೆ ಮಗನನ್ನು ಕರೆಸಿ ಕಿರುಕುಳ ನೀಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಇದೇ ಸಂದರ್ಭದಲ್ಲಿ ಮಹಿಳೆಯು ತನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ ಎಂದು ಆರೋಪಿಸಿರುವ ಡೆತ್​ನೋಟ್​ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ, ಈವರೆಗೂ ಅನೀಶ್​ ಮಹಿಳೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ ಎಂದು ಪಾರಸಾಲ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ದೂರು ನೀಡಿದರೆ, ಕೆಲಸ ಕಳೆದುಕೊಳ್ಳಬಹುದು ಎಂಬ ಭಯ ಅನೀಶ್‌ಗೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ಢಮರುಗ ಯಾರಿಗಾದ್ರೂ ಕಿರಿಕಿರಿ ಮಾಡಿದ್ಯಾ? ಎನ್ನುತ್ತಲೇ ಧ್ವನಿವರ್ಧಕ ವಿವಾದ ಇತ್ಯರ್ಥಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್​ಡಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
