ವಿಜಯವಾಡ:ಕಷ್ಟ-ಸುಖಗಳನ್ನು ಸಮನಾಗಿ ಹಂಚಿಕೊಂಡು ಸಮಸ್ಯೆ ಅಂತಾ ಬಂದಾಗ ಒಬ್ಬರಿಗೊಬ್ಬರು ಆಸರೆಯಾಗಿ ಜೀವನದ ಕೊನೆಯವರೆಗೂ ಒಟ್ಟಿಗೆ ಬದುಕು ಸಾಗಿಸುವ ಸತಿ-ಪತಿಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಎಂಬುದನ್ನು ಆಂಧ್ರ ಪ್ರದೇಶ ಮಹಿಳೆಯೊಬ್ಬಳು ಸಾಬೀತು ಮಾಡಿದ್ದಾರೆ.
ಅನೈತಿಕ ಸಂಬಂಧ, ಜಗಳ, ಕೊಲೆ, ವೈಮನಸ್ಸು ಹಾಗೂ ವಿಚ್ಛೇದನದಂತಹ ಸುದ್ದಿಗಳೇ ಹೆಚ್ಚಾಗಿರುವ ಕಾಲದಲ್ಲಿ ಆಂಧ್ರದ ಮಹಿಳೆ ಸತಿ-ಪತಿಯ ಸಂಬಂಧಕ್ಕೆ ಅರ್ಥವನ್ನು ನೀಡಿದ್ದಾರೆ. ಹೌದು, ಮಹಿಳೆಯೊಬ್ಬಳು ಮೃತ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ದೇವಸ್ಥಾನವನ್ನೇ ನಿರ್ಮಿಸಿದ್ದು, ನಿತ್ಯವು ಗಂಡನ ಆರಾಧನೆ ಮಾಡುತ್ತಿದ್ದಾಳೆ.
ವಿವರಣೆಗೆ ಬರುವುದಾದರೆ, ಅಂಕಿ ರೆಡ್ಡಿ ಮತ್ತು ಪದ್ಮಾವತಿ ದಂಪತಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪೊಡಿಲಿ ಮಂಡಲದ ನಿಮ್ಮಾವರಂ ಮೂಲದ ನಿವಾಸಿಗಳು. ನಾಲ್ಕು ವರ್ಷಗಳ ಹಿಂದೆ ಅಂಕಿ ರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರೀತಿಯ ಗಂಡನ ಅನುಪಸ್ಥಿತಿಯನ್ನು ಮರೆಯಲಾಗದ ಪದ್ಮಾವತಿ, ಆತನ ಶಾಶ್ವತ ನೆನಪಿಗಾಗಿ ಏನು ಮಾಡಲಿ ಎಂದು ಯೋಚಿಸಿದ್ದಾಳೆ.
ಇದಾದ ಬಳಿಕ ಒಂದು ನಿರ್ಧಾರಕ್ಕೆ ಬಂದ ಪದ್ಮಾವತಿ, ಮಾರ್ಬಲ್​ನಿಂದ ಗಂಡನ ಪ್ರತಿಮೆಯನ್ನು ತಯಾರಿಸಿ, ದೇವಸ್ಥಾನವನ್ನೇ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ದಿನನಿತ್ಯವೂ ಗಂಡನ ಪೂಜೆ ಮಾಡುತ್ತಾ ಬರುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪದ್ಮಾವತಿ ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಹೀಗಾಗಿ ನಾನು ದೇವಸ್ಥಾನವನ್ನು ನಿರ್ಮಾಣ ಮಾಡಿ ದಿನವೂ ಪತಿಯ ಧ್ಯಾನದಲ್ಲಿ ತೊಡಗಿದ್ದೇನೆ ಎಂದಿದ್ದಾರೆ.(ಏಜೆನ್ಸೀಸ್​)
ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ವಿವಾದಿತ ನಟಿ ಮೀರಾ ಮಿಥುನ್​ ಬಂಧನ..!

ಯೂಟ್ಯೂಬ್​ ನೋಡಿ ಹೆಲಿಕಾಪ್ಟರ್​ ನಿರ್ಮಿಸಿದ ಯುವಕ! ಪರೀಕ್ಷೆ ನಡೆಸುವಾಗ ವಿಧಿ ಕೈಕೊಟ್ಟಿತು

‘ವಿಜಯಾನಂದ’ ಚಿತ್ರದ ಮೋಷನ್​ ಟೀಸರ್ ರಿಲೀಸ್​; ಒಂದು ಟ್ರಕ್​ನಿಂದ ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಕಟ್ಟಿದ ಯಶೋಗಾಥೆ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 3 =
Remember me
