ಚೆನ್ನೈ:ಪ್ರಖ್ಯಾತ ಬಹುಭಾಷಾ ನಟ, ರಾಜಕಾರಣಿ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕ ಪ್ರಕಾಶ್​ ರಾಜ್ ಅವರು ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹೊಸ ವೇಷ ಧರಿಸಿರುವ ಫೋಟೋವನ್ನು ಪೋಸ್ಟ್​ ಮಾಡಿ ಟ್ವೀಟ್​ ಮೂಲಕ ಪ್ರಧಾನಿ ಮೋದಿಯನ್ನು ಅಣಕಿಸಿದ್ದಾರೆ.
ಸ್ಥಳೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಎರಡು ಫೋಟೋಗಳನ್ನು ಟ್ವಿಟರ್​ನಲ್ಲಿ ಪ್ರಕಾಶ್​ ರಾಜ್​ ಅವರು ಅಪ್​ಲೋಡ್​ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ.
ಫೋಟೋ ಕುರಿತು “ನಮ್ಮ ಸುಪ್ರೀಂ ಲೀಡರ್​ನಿಂದ ಸ್ಫೂರ್ತಿಗೊಂಡು ಇದನ್ನು ಧರಿಸಿದ್ದೇನೆ…ಹಾಯ್​ ಗಯ್ಸ್​ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು” ಎಂದು ಟ್ವೀಟ್​ ಮಾಡಿದ್ದಾರೆ. ಇಲ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.
Inspired by our Supreme leader… hi guys why don’t you all try it too ..#justaskingpic.twitter.com/dRAos4MKK6
— Prakash Raj (@prakashraaj)May 18, 2022

ಪ್ರಕಾಶ್​ ಅವರು ಧರಿಸಿರುವುದು ನೇಪಾಳಿ ಶೈಲಿಯ ಉಡುಪಾಗಿದೆ. ಬಹುಶಃ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಅದನ್ನು ಅಣುಕಿಸುವ ಸಲುವಾಗಿ ಪ್ರಕಾಶ್​ ರಾಜ್​ ಈ ಟ್ವೀಟ್​ ಮಾಡಿರಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಕಾಶ್​ ರಾಜ್​ ಅವರು ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ 2ನಲ್ಲಿ ಕಾಣಿಸಿಕೊಂಡಿದ್ದಾರೆ. ದಳಪತಿ ವಿಜಯ್ ಅವರ​ 66ನೇ ಚಿತ್ರದಲ್ಲೂ ಪ್ರಕಾಶ್​ ರಾಜ್​ ಇರಲಿದ್ದಾರೆ. ಜೂನ್​ 3ಕ್ಕೆ ಬಿಡುಗಡೆಯಾಗಲಿರುವ ಅದಿವಿ ಶೇಷ್​ ನಟನೆಯ ಹಾಗೂ ಮಹೇಶ್​ ಬಾಬು ನಿರ್ಮಾಣದ ಮೇಜರ್​ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಪ್ರಕಾಶ್​ ರಾಜ್​ ಅವರು ಬಿಜಿಯಾಗಿದ್ದಾರೆ.(ಏಜೆನ್ಸೀಸ್​)
ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ವೈರಲ್​ ಆಯ್ತು ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಹಾಟ್​ ಅವತಾರಗಳು!

ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್​​​​: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್​!

ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
