ಹೈದರಾಬಾದ್​:ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಟ ಹಾಗೂ ರಾಜಕಾರಣಿ ಪ್ರಕಾಶ್​ ರಾಜ್​ ಅವರು ಶಾಕಿಂಗ್​ ಕಾಮೆಂಟ್​ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರು ನಿದ್ರಾ ರೋಗದಿಂದ ಬಳಲುತ್ತಿದ್ದಾರೆ. ಮೊದಲು ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಕುರಿತು ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್​ ಪಾಟೀಲ್​ ಅವರು ನೀಡಿದ ಹೇಳಿಕೆಗೆ ಪ್ರತಿಯಾಗಿ ಪ್ರಕಾಶ್​ ರಾಜ್​ ಈ ಹೇಳಿಕೆಯನ್ನು ನೀಡಿದ್ದಾರೆ. ಹಾಗಾದರೆ, ಚಂದ್ರಕಾಂತ್​ ಪಾಟೀಲ್​ ಹೇಳಿದ್ದೇನು ಎಂದು ನೋಡುವುದಾರೆ, ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪಾಟೀಲ್​, ಮೋದಿ ಅವರು ದಿನದ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಕೇವಲ 2 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ ಎಂದು ಪ್ರಧಾನಿಯನ್ನ ಹೊಗಳಿದ್ದರು.
Please have some common sense… not able to sleep is a medical condition called INSOMNIA.. it should be treated .. not bragged about ..🙏🏻🙏🏻 please take care of your leader#justaskingpic.twitter.com/CPj7rP7F6Z
— Prakash Raj (@prakashraaj)March 22, 2022

ಪಾಟೀಲ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್​ ರಾಜ್​, ದಯವಿಟ್ಟು ಸ್ವಲ್ಪ ಸಾಮಾನ್ಯ ಜ್ಞಾನವನ್ನು ಬಳಸಿ, ಇದೊಂದು ನಿದ್ರಾ ಸಮಸ್ಯೆ ಇರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ನಿದ್ರಾಹೀನತೆ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಬೇಡಿ. ರೋಗದಿಂದ ಬಳಲುತ್ತಿರುವ ನಿಮ್ಮ ನಾಯಕರಿಗೆ ಮೊದಲು ಚಿಕಿತ್ಸೆ ಕೊಡಿಸಿ ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.
ಇದೀಗ ಪ್ರಕಾಶ್​ ರಾಜ್​ ಅವರ ಟ್ವೀಟ್​ ವೈರಲ್​ ಆಗಿದೆ. ಈ ಹಿಂದೆ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದರು. ಅದೂ ಕೂಡ ವೈರಲ್​ ಆಗಿತ್ತು. ಕಾಶ್ಮೀರ್​ ಫೈಲ್ಸ್​ ಚಿತ್ರದಂತೆ ಗೋಧ್ರಾ ಫೈಲ್ಸ್​, ದೆಹಲಿ ಫೈಲ್ಸ್​, ಜಿಎಸ್​ಟಿ ಫೈಲ್ಸ್​, ಡಿಮಾನೀಟೈಸ್​ ಫೈಲ್ಸ್​, ಕೋವಿಡ್​ ಫೈಲ್ಸ್​ ಮತ್ತು ಗಂಗಾ ಫೈಲ್ಸ್​ ಚಿತ್ರಗಳನ್ನು ತೆಗೆಯಿರಿ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದರು.(ಏಜೆನ್ಸೀಸ್​)
Dear supreme Actor turned Producer.. will you arm twist these files too .. and release them#justaskingpic.twitter.com/IuiEslWidB
— Prakash Raj (@prakashraaj)March 19, 2022

41ರ ಉದ್ಯಮಿ ಪತಿಯ ಕೊಲೆಗೆ 26ರ ಪತ್ನಿಯಿಂದಲೇ ಸುಪಾರಿ: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

ಯಾರೂ ಹೇಳದ ರಹಸ್ಯವೊಂದನ್ನು ಬಹಿರಂಗಪಡಿಸಿದ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳ ಬಹುಪರಾಕ್​!​

ಮಗು ಮಾಡಿಕೊಳ್ಳಲು ನಯನತಾರಾ ಆಯ್ಕೆ ಮಾಡಿಕೊಂಡ ವಿಧಾನ ಕೇಳಿ ಬೆರಗಾದ ಅಭಿಮಾನಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
