ನವದೆಹಲಿ:ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್​ ಜೋಶಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಶಿ ಅವರಿಗೆ ಟ್ವೀಟ್​ ಮೂಲಕ ಶುಭಕೋರಿದ್ದಾರೆ.
ಶ್ರೀ ಪ್ರಲ್ಹಾದ್​ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. ಉತ್ತಮ ಸಂಘಟನಾ ಕೌಶಲ್ಯ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳಿಂದ ಜೋಶಿ ಅವರು ಆಶೀರ್ವದಿಸಲ್ಪಟ್ಟಿದ್ದಾರೆ. ಅವರು ಕಲ್ಲಿದ್ದಲು ಮತ್ತು ಗಣಿ ವಲಯವನ್ನು ಆಧುನೀಕರಿಸಲು ಮತ್ತು ಸಂಸತ್ತಿನ ಉತ್ಪಾದಕತೆಯನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.
ಪ್ರಧಾನಿ ಟ್ವೀಟ್​ ಪ್ರತಿಕ್ರಿಯೆ ನೀಡಿರುವ ಜೋಶಿ ಅವರು, ಶುಭಕೋರಿದ್ದಕ್ಕೆ ಧನ್ಯವಾದಗಳು ಪ್ರಧಾನಿ ಮೋದಿಜಿ, ನೀವು ನಮ್ಮೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.
ಗೃಹ ಸಚಿವ ಅಮಿತ್​ ಷಾ ಕೂಡ ಟ್ವೀಟ್​ ಮೂಲಕ ಶುಭಕೋರಿದ್ದಾರೆ. ನನ್ನ ಅತ್ಯುತ್ತಮ ಸಹೋದ್ಯೋಗಿ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಪ್ರಲ್ಹಾದ್ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಸಾಂಸ್ಥಿಕ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಸಚಿವಾಲಯವನ್ನು ಅತ್ಯಂತ ಸಮರ್ಪಣೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ದೇವರು ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನವನ್ನು ದಯಪಾಲಿಸಲಿ ಎಂದಿದ್ದಾರೆ.
ಅಮಿತ್​ ಷಾ ಟವರ ಟ್ವೀಟ್​ ಪ್ರತಿಕ್ರಿಯೆ ನೀಡಿರುವ ಜೋಶಿ ಅವರು ಶುಭಕೋರಿದ್ದಕ್ಕೆ ಧನ್ಯವಾದಗಳು ಅಮಿತ್​ ಷಾ ಜೀ ನಿಮ್ಮ ನಿರಂತರ ಬೆಂಬಲವನ್ನು ಎದುರು ನೋಡುತ್ತೇನೆ ಎಂದಿದ್ದಾರೆ.
ಹೀಗೆ ಸಾಕಷ್ಟು ರಾಜಕೀಯ ಗಣ್ಯರು ಪಲ್ಹಾದ್​ ಜೋಶಿ ಅವರಿಗೆ ಶುಭಹಾರೈಸುತ್ತಿದ್ದಾರೆ. ಬರ್ತಡೇ ಹಿನ್ನೆಲೆ ನ. 25ರಂದೇ ಟ್ವೀಟ್​ ಮಾಡಿದ್ದ ಜೋಶಿ ಅವರು ವಿಶೇಷ ಚಳಿಗಾಲ ಅಧಿವೇಶನ 29ರಿಂದ ಪ್ರಾರಂಭವಾಗಲಿದ್ದು, ಅದರ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ನಾನು ದೆಹಲಿಯಲ್ಲಿದ್ದೇನೆ. ಹೀಗಾಗಿ ಹುಟ್ಟುಹಬ್ಬದ ದಿನ ನಾನು ಹುಬ್ಬಳ್ಳಿಯಲ್ಲಿ ಇರುವುದಿಲ್ಲ. ಜನ್ಮದಿನದಂದು ಯಾವುದೇ ಬ್ಯಾನರ್​, ಹೋರ್ಡಿಂಗ್ಸ್​, ಕಟೌಟ್​ ಮುಂತಾದವುಗಳಿಗೆ ಅನವಶ್ಯಕ ವೆಚ್ಚಮಾಡಬಾರದೆಂದು ಕೇಳಿಕೊಳ್ಳುತ್ತೇನೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
Thank you PM@narendramodiji for birthday wishes. You are an inspiration for us all. 🙏https://t.co/kObiiDmO8V
— Pralhad Joshi (@JoshiPralhad)November 27, 2021

Thank you,@AmitShahji for the wishes. Looking forward to your continued support.https://t.co/mo76NOu1VN
— Pralhad Joshi (@JoshiPralhad)November 27, 2021

ಲವ್, ಸೆಕ್ಸ್ , ದೋಖಾ! ಕಲಬುರಗಿ ಪಾಲಿಕೆ ಆಯುಕ್ತರ ವಿರುದ್ಧ ಯುವತಿ ದೂರು, ಅಶ್ಲೀಲ ಚಾಟ್ ವೈರಲ್​

ಖ್ಯಾತ ಗಾಯಕಿ ಹರಿಣಿ ರಾವ್ ತಂದೆ ಸಾವಿಗೆ ಸ್ಫೋಟಕ ತಿರುವು: 390 ಕೋಟಿ ರೂ. ವ್ಯವಹಾರವೇ ಮುಳುವಾಯ್ತಾ?

23 ವರ್ಷಕ್ಕೆ ಈಕೆ ಮಾಡ್ತಿರೋ ಕೆಟ್ಟ ಕೆಲ್ಸ ಕೇಳಿದ್ರೆ ದಂಗಾಗ್ತೀರಾ! ಖತರ್ನಾಕ್​​ ಲೇಡಿಯ ಭಯಾನಕ ಮುಖವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seventeen =
Remember me
