ನವದೆಹಲಿ:ತಾಯಿಯಾದವರಿಗೆ ತಮ್ಮ ಮಗುವಿಗೆ ಎದೆಹಾಲುಣಿಸುವ ಕ್ಷಣವೂ ಜೀವನ ಪ್ರಯಾಣದಲ್ಲಿ ತುಂಬಾ ಭಾವನಾತ್ಮಕತೆಯನ್ನು ಹೊಂದಿರುತ್ತದೆ. ಈ ಕ್ಷಣವನ್ನು ಜೀವನ ಪೂರ್ತಿ ನೆನಪಿನಲ್ಲಿಡುವ ಸಲುವಾಗಿ ಎದೆಹಾಲಿನ ಮೂಲಕ ಅತ್ಯಮೂಲ್ಯ ಆಭರಣ ತಯಾರಿಸುವ ಟ್ರೆಂಡ್​ ಸೃಷ್ಟಿಯಾಗಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಇದು ಚಾಲ್ತಿಯಲ್ಲಿದೆ.
ಅಲ್ಮ ಪರ್ಟಿಡಾ ಎಂಬುವರು ದಿ ನ್ಯೂಯಾರ್ಕ್​ ಟೈಮ್ಸ್​ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಮೂಲ್ಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗಳು ಅಲೆಸ್ಸಾಗೆ ಸುಮಾರು 18 ತಿಂಗಳು ಎದು ಹಾಲುಣಿಸಿದ್ದ ಅಲ್ಮ, ಎದೆಹಾಲುಣಿಸಿದ ಪ್ರಯಾಣವನ್ನು ಬಹುಕಾಲ ನೆನಪಿನಲ್ಲಿಡುವ ಸಲುವಾಗಿ ವಿಶೇಷ ದಾರಿಯನ್ನು ಆಯ್ದುಕೊಂಡರು.
ಫೇಸ್​ಬುಕ್​ನಲ್ಲಿ ಹುಡುಕಾಡುವಾಗ ಅಲ್ಮ ಅವರು ಒಂದು ವಿಶೇಷ ಪೋಸ್ಟ್​ ಅನ್ನು ಗಮನಿಸುತ್ತಾರೆ. ಅದರಲ್ಲಿ ಎದೆ ಹಾಲಿನಲ್ಲಿ ಆಭರಣ ಮಾಡಿಕೊಡುವುದಾಗಿ ಬರೆದಿಲಾಗಿರುತ್ತದೆ. ಬಳಿಕ ಕೀಪ್​ಸೇಕ್ಸ್ ಬೈ ಗ್ರೇಸ್​​ ಎಂಬ ಕಂಪನಿಯನ್ನು ಸಂಪರ್ಕಿಸಿ ಸುಮಾರು 10 ಮಿಲಿಲೀಟರ್​ನಷ್ಟು ಎದೆಹಾಲನ್ನು ಕಳುಹಿಸಿಕೊಡುತ್ತಾರೆ. ಬಳಿಕ ಹಾಲಿನ ಬಣ್ಣದ ಹೃದಯ ಮಾದರಿಯ ಆಭರಣವೊಂದನ್ನು ಸ್ವೀಕರಿಸುತ್ತಾರೆ. ಇದು ಕೊನೆಯ ಹನಿ ಮತ್ತು ನೀವು ಪ್ರಯಾಣವನ್ನು ನೆನಪಿಟ್ಟುಕೊಳ್ಳಬೇಕಾದ ಕೊನೆಯ ವಿಷಯವಿದು ಎಂದು ಅಲ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ಕೀಪ್​ಸೇಕ್ಸ್​ ಬೈ ಗ್ರೇಸ್ ಮಾಲೀಕ ಸಾರಾ ಕ್ಯಾಸ್ಟಿಲ್ಲೊ ಮಾತನಾಡಿ ಈ ರೀತಿಯ ಬಹಳಷ್ಟು ಆರ್ಡರ್‌ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ಒಂದ ಆಭರಣಕ್ಕೆ 60 ರಿಂದ 150 ಡಾಲರ್​ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಭಾರತದಲ್ಲೂ ಈ ಟ್ರೆಂಡ್​ ಚಾಲ್ತಿಯಲ್ಲಿದೆ. ಚೆನ್ನೈ ಮೂಲದ ಕಲಾವಿದೆ ಪ್ರೀತಿ ಎಂಬಾಕೆ ಇದೇ ರೀತಿಯ ಆಭರಣಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ, ಇಯರಿಂಗ್ಸ್​, ರಿಂಗ್ಸ್​ ಸೇರಿದಂತೆ ಹಲವು ಆಭರಣಗಳನ್ನು ಮಾಡಿಕೊಡುತ್ತಾರೆ. ಅನೇಕರ ಫೇಸ್​ಬುಕ್​ನಲ್ಲಿ ಕೇಳಿಕೊಂಡ ಬಳಿಕ ಎದೆಹಾಲಿನಲ್ಲಿ ಆಭರಣ ಮಾಡಿಕೊಡಲು ಆರಂಭಿಸಿದ್ದಾರೆ. ಒಂದು ಆಭರಣಕ್ಕೆ 1000 ದಿಂದ 4000 ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮ ಡಿಸೈನ್​ ಮೇಲೂ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.

ತಾಯಿಯ ಎದೆ ಹಾಲು ಮಾತ್ರವಲ್ಲ, ಮಗುವಿನ ಮೊದಲ ಹಲ್ಲು, ಕೂದಲು ಮತ್ತು ಹೊಕ್ಕುಳಬಳ್ಳಿಯ ತುಂಡುಗಳೊಂದಿಗೆ ಮಾಡಿದ ಆಭರಣಗಳನ್ನು ಮಾಡಿಕೊಡುವಂತೆ ಆರ್ಡರ್ ಬರುತ್ತಿದೆ ಎಂದು ಪ್ರೀತಿ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)
ನಿನ್ನೆ ರಾತ್ರಿ ಎಂಜಿ ರೋಡಿನಲ್ಲಿ ಬಾಯ್​ಫ್ರೆಂಡ್​ ಜತೆಗೂಡಿ ನಟಿ ದಿವ್ಯಾ ಸುರೇಶ್​ ಹೈಡ್ರಾಮ: ಪೊಲೀಸರಿಗೆ ಅವಾಜ್​

ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

ಡಿವೋರ್ಸ್​ ಆದ ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಸಮಂತಾ-ನಾಗಚೈತನ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + thirteen =
Remember me
