ಜೈಪುರ:ದೇಶದ ಯುವಜನಾಂಗದಲ್ಲಿ ಪಬ್​ಜಿ ಕ್ರೇಜ್​ ಹೆಚ್ಚಾಗುತ್ತಿದೆ. ಈಗಾಗಲೇ ಪಬ್​ಜಿಯಿಂದ ಸಾಕಷ್ಟು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಸಾಕಷ್ಟು ಜನರು ಹಣವನ್ನು ಕಳೆದುಕೊಂಡಿದ್ದಾರೆ. ಕ್ರೌರ್ಯವನ್ನೇ ತುಂಬಿರುವ ಪಬ್​ಜಿಯಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ.
ಇದೀಗ ಪಬ್​ಜಿಯಿಂದ ಮತ್ತೊಂದು ದುರಂತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರೈಲ್ವೇ ಹಳಿ ಮೇಲೆ ಕುಳಿತು ಪಬ್​ಜಿ ಆಡುವಾಗ ರೈಲು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಲೋಕೇಶ್​ ಮೀನಾ (22) ಮತ್ತು ರಾಹುಲ್​ (19) ಎಂದು ಗುರುತಿಸಲಾಗಿದೆ. ಈ ವಿಷಯ ತಿಳಿದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಲೋಕೇಶ್ ಮತ್ತು ರಾಹುಲ್​ ಇಬ್ಬರು ಪಬ್​ಜಿ ಗೇಮ್​ಗೆ ದಾಸರಾಗಿದ್ದರು. ಪಾಲಕರು ಎಷ್ಟೇ ಹೇಳಿದರು ಇಬ್ಬರು ಮಾತ್ರ ಪಬ್​ಜಿ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡಿರಲಿಲ್ಲ. ಬದಲಾಗಿ ಸದಾ ಅದರಲ್ಲೇ ಮುಳುಗಿರುತ್ತಿದ್ದರು. ಇದೀಗ ಅದೇ ಪಬ್​ಜಿಯಿಂದಾಗಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 10 =
Remember me
