ಪುಣೆ:ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಅವಘಡದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.
ಕಬ್ಬಿಣದ ಸರಳುಗಳನ್ನು ಅಳವಡಿಸುವ ವೇಳೆ ಹತ್ತು ಕಾರ್ಮಿಕರ ಮೇಲೆ ಕಟ್ಟಡವು ಹಠಾತ್ತನೆ ಕುಸಿದು ಸರಳುಗಳ ನಡುವೆ ಸಿಲುಕಿ ದುರಂತ ಸಂಭವಿಸಿದೆ ಎಂದು ಪುಣೆಯ ಅಗ್ನಿಶಾಮಕ ಅಧಿಕಾರಿ ಸುನೀಲ್​ ಗಿಲ್ಬಿಲ್​ ತಿಳಿಸಿದ್ದಾರೆ.
ಕಾರ್ಮಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಪುಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ದುರ್ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರೂ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
Pained by the mishap at an under-construction building in Pune. Condolences to the bereaved families. I hope that all those injured in this mishap recover at the earliest: PM@narendramodi
— PMO India (@PMOIndia)February 4, 2022

ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ವರದಿ ಸೂಚಿಸುತ್ತದೆ” ಎಂದು ಪುಣೆಯ ಪೊಲೀಸ್ ಉಪ ಪೊಲೀಸ್ ಆಯುಕ್ತ ರೋಹಿದಾಸ್ ಪವಾರ್ ಹೇಳಿದ್ದಾರೆ.
5 people have been reported dead and 2 critically injured. The construction work of a mall was being done here when a heavy steel structure collapsed. All laborers belong to Bihar. The reason for the collapse is under investigation: Rohidas Pawar, DCP Pune Policepic.twitter.com/IC4Cokms1a
— ANI (@ANI)February 3, 2022

ಸ್ಥಳೀಯ ಶಾಸಕ ಸುನೀಲ್ ಟಿಂಗ್ರೆ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯನ್ನು ವೀಕ್ಷಿಸಿದರು. “ಈ ಸೈಟ್‌ನಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ನಿರ್ಮಾಣ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಕಾರ್ಮಿಕರು ಎಷ್ಟು ದಿನ ಕೆಲಸ ಮಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ನಿರಂತರ ಕೆಲಸದ ಬಳಲಿಕೆಯು ಕೂಡ ಅನಾಹುತಕ್ಕೆ ಕಾರಣವಾಗಿರಬಹುದು. ಇಲ್ಲಿರುವ ಇತರ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಗಾಯಾಳುಗಳು ಬಿಹಾರ ಮೂಲದವರಾಗಿದ್ದಾರೆ ಎಂದು ಅವರು ಹೇಳಿದರು.
ಸದ್ಯ ಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್​ ಬಚ್ಚನ್​ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!

ಕರೊನಾ 3ನೇ ಅಲೆಯ ಉತ್ತುಂಗ ಅಂತ್ಯ – ಪಾಸಿಟಿವಿಟಿ ಇಳಿಕೆ : ಆರೋಗ್ಯ ಸಚಿವಾಲಯ

ಪಿಗ್ಗಿ ಹೊಸ ಚಿತ್ರ ಎಂಡಿಂಗ್​ ಥಿಂಗ್ಸ್​ : ಹಾಲಿವುಡ್​ನಲ್ಲಿ ಇನ್ನಷ್ಟು ಸಕ್ರಿಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
