ಚಂಡೀಗಢ:ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಮತ್ತು ಡಾ. ಗುರುಪ್ರೀತ್​ ಕೌರ್ ಗುರುವಾರ (ಜುಲೈ 7) ಸಪ್ತಪದಿ ತುಳಿದರು. ಚಂಡೀಗಢ್​ನಲ್ಲಿರುವ ಭಗವಂತ್​ ಮಾನ್ ಅವರ ನಿವಾಸದಲ್ಲಿ ಮದುವೆ ಸಮಾರಂಭ ಸರಳವಾಗಿ ನೆರವೇರಿತು.
ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಖಾಸಗಿ ಸಮಾರಂಭವಾಗಿದ್ದು, ಕೆಲವೇ ಗಣ್ಯರು ಹಾಗೂ ಎರಡು ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಭಗವಂತ್​ ಮಾನ್ ಮತ್ತು ಗುರುಪ್ರೀತ್​ ಕೌರ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Punjab CM Bhagwant Mann ties knot with Dr Gurpeet Kaur in a close-knit ceremony in Chandigarhpic.twitter.com/VGfCP25lE4
— ANI (@ANI)July 7, 2022

ವಧು ಗುರುಪ್ರೀತ್​ ಕೌರ್​ ಕಡುಗೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರೆ, ಸಿಎಂ ಭಗವಂತ್​ ಮಾನ್​ ಅವರು ಹೊಂಬಣ್ಣದ ಶೆರ್ವಾನಿಯಲ್ಲಿ ಮಿಂಚಿದರು. ಮಾನ್​ ಅವರು ಖಡ್ಗ ಹಿಡಿದು ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
48 ವರ್ಷದ ಮುಖ್ಯಮಂತ್ರಿ ಭಗವಂತ್​ ಮಾನ್​ ಈ ಹಿಂದೆ ಸ್ಟ್ಯಾಂಡ್​ ಅಪ್​​ ಕಾಮಿಡಿಯನ್​ ಆಗಿದ್ದರು. 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಇದು ಅವರ ಎರಡನೇ ಮದುವೆಯಾಗಿದ್ದು, 32 ವರ್ಷದ ಗುರುಪ್ರೀತ್​ ಕೌರ್​ ಮತ್ತು 48 ವರ್ಷದ ಭಗವಂತ್​ ಮಾನ್​ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರುಪ್ರೀತ್​ ಕೌರ್​ ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದವರು. ಅವರ ತಂದೆ ಇಂದ್ರಜಿತ್​ ಸಿಂಗ್​ ಓರ್ವ ರೈತ. ಅವರ ತಾಯಿ ರಾಜ್​ ಕೌರ್​ ಗೃಹಿಣಿ. ಗುರುಪ್ರೀತ್​ ಕೌರ್​ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಮಾನ್​ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ.
The wedding proceedings of Punjab CM Bhagwant Mann with Dr. Gurpreet Kaur begin in a close private ceremony at his house in Chandigarh.pic.twitter.com/Fw1zYNH4V5
— ANI (@ANI)July 7, 2022

ಹರಿಯಾಣದ ಮೌಲಾನಾದಲ್ಲಿರುವ ಮಹಾರಿಷಿ ಮಾರ್ಕಂಡೇಶ್ವರ್​ ಮೆಡಿಕಲ್​ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾಳೆ. ಆಕೆ ಚಿನ್ನದ ಪದಕ ವಿಜೇತೆ ಎಂದು ಅವರ ಅಂಕಲ್ ಗುರಿಂದರ್​ ಜೀತ್​​ ತಿಳಿಸಿದ್ದಾರೆ.
ಆಮ್​ ಆದ್ಮಿ ಪಕ್ಷದ ನಾಯಕರಾದ ಭಗವಂತ್ ಮಾನ್​, ಇತ್ತೀಚಿಗೆ ನಡೆದ ಪಂಜಾಬ್​ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ ಗೆಲ್ಲಿಸಿಕೊಂಡು ದಾಖಲೆ ಬರೆದಿದ್ದರು. ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುರುಪ್ರೀತ್​ ಅವರು ಭಗವಂತ್ ಮಾನ್ ಅವರಿಗೆ ಸಹಾಯ ಮಾಡಿದರು ಎಂದು ಮೂಲಗಳು ಹೇಳಿವೆ.
ಭಗವಂತ್ ಮಾನ್​ ಅವರಿಗೆ ಈಗಾಗಲೇ ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿತ್ತು. ಇವರ ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. 6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್​ ಅವರು ಇದೀಗ ಮತ್ತೊಂದು ಮದ್ವೆ ಆಗಿದ್ದಾರೆ. ತಾಯಿ ಹಾಗೂ ಸಹೋದರಿ ಇಬ್ಬರೂ ಮತ್ತೊಂದು ಮದ್ವೆ ಆಗಲು ಒಪ್ಪಿಸಿದ್ದಾರೆ.(ಏಜೆನ್ಸೀಸ್​)
Chandigarh | Wedding rituals underway of Punjab CM Bhagwant Mann with Dr. Gurpreet Kaurpic.twitter.com/4QjnNsRXtg
— ANI (@ANI)July 7, 2022

ಇಂದು ಪಂಜಾಬ್​ ಸಿಎಂ ಮದುವೆ: ವಧು ಗುರುಪ್ರೀತ್​ ಕೌರ್​ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ​

15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ATM ಕಸದ ಬುಟ್ಟಿಗೆ ಎಸೆದು ಹೋದ ಮಹಿಳೆ! ಕಾರಣ ಕೇಳಿದ್ರೆ ದಂಗಾಗ್ತೀರಾ

ಪತ್ನಿಯರ ಎಕ್ಸ್​ಚೇಂಜ್: ಸ್ನೇಹಿತರ ಜತೆ ಮಲಗಲು ಹೆಂಡ್ತಿಗೆ ಟಾರ್ಚರ್​- ಪೊಲೀಸರ ಮುಂದೆ ಕಣ್ಣೀರಿಟ್ಟ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 4 =
Remember me
