ಸಂಗ್ರೂರ್​:ಹೆದ್ದಾರಿ ನಿರ್ಮಾಣದ ಅನುಕೂಲಕ್ಕಾಗಿ ಪಂಜಾಬ್​ನ ಸಂಗ್ರೂರ್​ ಮೂಲದ ರೈತರೊಬ್ಬರ 1.5 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಅಂತಸ್ತಿನ ಮನೆಯನ್ನು 500 ಅಡಿ ದೂರಕ್ಕೆ ಸ್ಥಳಾಂತರ ಮಾಡುತ್ತಿರುವ ಅಪರೂಪದ ಪ್ರಕರಣ ಶನಿವಾರ ವರದಿಯಾಗಿದೆ.
ಸಂಗ್ರೂರ್​ನ ರೋಶನ್​ವಾಲಾ ಗ್ರಾಮದ ರೈತ ಸುಖ್ವಿಂದರ್​ ಸಿಂಗ್​ ಸುಖಿ ತನ್ನ ಹೊಲದಲ್ಲ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅದೇ ಜಾಗದಲ್ಲಿ ದೆಹಲಿ-ಅಮೃತಸರ-ಕಾತ್ರಾ ಹೆದ್ದಾರಿಯು ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ ಹಾದುಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಮನೆಯನ್ನು ನೆಲಸಮ ಮಾಡಿ ರೈತ ಸುಖಿಗೆ ಪರಿಹಾರ ನೀಡಲು ಪಂಜಾಬ್​ ಸರ್ಕಾರ ಆಫರ್​ ಮಾಡಿತ್ತು. ಆದರೆ, ನಂತರದ ಸಮಯದಲ್ಲಿ ಆ ನಿರ್ಧಾರವನ್ನು ಪಕ್ಕಕ್ಕಿಟ್ಟು, ಮನೆಯನ್ನೇ ಬೇರೆಡೆಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಈಗಾಗಲೇ ಗ್ರಾಮದ ಕೆಲವು ನಿರ್ಮಾಣ ಕಾರ್ಮಿಕರ ಸಹಾಯದಿಂದ ಮನೆಯನ್ನು 250 ಅಡಿಗಳಷ್ಟು ಮುಂದಕ್ಕೆ ಜರುಗಿಸಲಾಗಿದೆ. ಇನ್ನು ಕೆಲಸ ಪ್ರಗತಿಯಲ್ಲಿದ್ದು, 500 ಅಡಿಗಳಷ್ಟು ಮುಂದಕ್ಕೆ ಜರುಗಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಕೆಲವು ಗೇರ್‌ಗಳಿರುವುದು ತೋರಿಸುತ್ತದೆ. ಅದು ಚಕ್ರಗಳಂತೆ ಕಾಣುತ್ತದೆ ಮತ್ತು ಅದನ್ನು ಮೈದಾನದಿಂದ ಎಳೆಯಲು ಮನೆಗೆ ಜೋಡಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ರೈತ ಸುಖಿ, ಈ ಮನೆ ನಿರ್ಮಿಸಲು ಎರಡು ವರ್ಷ ಹಾಗೂ 1.5 ಕೋಟಿ ರೂ. ವ್ಯಯಿಸಿದ್ದು, ಇದು ನನ್ನ ಕನಸಿನ ಯೋಜನೆಯಾಗಿದೆ. ಬೇರೆ ಮನೆ ನಿರ್ಮಾಣ ಮಾಡಲು ಮನಸ್ಸಿರಲಿಲ್ಲ. ಹೀಗಾಗಿ ಮನೆ ಸ್ಥಳಾಂತರಕ್ಕೆ ಒಪ್ಪಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಸಚಿವ ಮಾಧುಸ್ವಾಮಿ ಆಡಿಯೋ ವೈರಲ್​ ಬೆನ್ನಲ್ಲೇ ಹೊಸದೊಂದು ಬಾಂಬ್ ಸಿಡಿಸಿದ ಕೆ.ಎನ್.ರಾಜಣ್ಣ

ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ: ಸ್ಥಳಕ್ಕೆ ವಿಪತ್ತು ನಿರ್ವಹಣಾ ಪಡೆ ದೌಡು, ರಕ್ಷಣಾ ಕಾರ್ಯಾಚರಣೆ ಜೋರು

ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವಿಡಿಯೋ ಚಿತ್ರೀಕರಣ: ಈತನ ದುಷ್ಕೃತ್ಯದ ಹಿಂದಿದ್ದ ದುರುದ್ದೇಶವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
