ಒಂಗೋಲ್:ರಾಬರ್ಟ್​ ಚಿತ್ರದ ತೆಲುಗು ವರ್ಷನ್​ “ಕಣ್ಣೇ ಅದಿರಿಂದಿ” ಹಾಡಿನ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿರುವ ತೆಲಂಗಾಣದ ಜಾನಪದ ಗಾಯಕಿ ಮಂಗಲಿ ಸಾಲು ಸಾಲು ಸಿನಿಮಾಗಳಲ್ಲಿ ಹಾಡುವ ಮೂಲಕ ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹಾಡಿದ್ದ ಪುಷ್ಪ ಚಿತ್ರದ ಕನ್ನಡ ವರ್ಷನ್​ “ಊ ಅಂತಿಯಾ ಮಾವ ಊಹು ಅಂತಿಯಾ” ಕೂಡ ತುಂಬಾ ಸದ್ದು ಮಾಡಿದೆ. ಅಲ್ಲದೆ, ಏಕ್​ ಲವ್​ ಯಾ ಚಿತ್ರದ “ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್​ ಇಟ್ಟೆ” ಎಂಬ ಹಾಡು ಕೂಡ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ.
ತಮ್ಮ ವಿಶಿಷ್ಟ ಕಂಠದಿಂದಲೇ ಜನಪ್ರಿಯರಾಗಿರುವ ಮಂಗಲಿ ಇದೀಗ ಸ್ಟಾರ್​ ಸಿಂಗರ್​ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿಯೇ ಅವರು ಎಲ್ಲಿಯೇ ಹೋದರು ಸೆಲ್ಫಿಗಾಗಿ ಜನ ಮುಗಿಬೀಳುತ್ತಾರೆ. ಸಿನಿಮಾ ಹಾಡು ಮಾತ್ರವಲ್ಲದೇ, ಅನೇಕ ಕಾರ್ಯಕ್ರಮಗಳನ್ನು ಮಂಗಲಿ ನಡೆಸಿಕೊಡುತ್ತಾರೆ. ಇತ್ತೀಚೆಗಷ್ಟೇ ಅವರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್​ ಪಟ್ಟಣಕ್ಕೆ ಕಾರ್ಯಕ್ರಮ ನಿಮಿತ್ತ ತೆರಳಿದಾಗ ಮುಜುಗರದ ಪ್ರಸಂಗವೊಂದು ಜರುಗಿದೆ.
ಕಾರ್ಯಕ್ರಮ ಮುಗಿಸಿ ಕಾರು ಹತ್ತಲು ಹೋಗುವಾಗ ಅಲ್ಲಿಯೇ ಇದ್ದ ಯುವಕರ ಗುಂಪು ಸೆಲ್ಫಿಗಾಗಿ ಮಂಗಲಿ ಅವರನ್ನು ಸುತ್ತುವರಿದಿದ್ದಾರೆ. ಯುವಕರ ಗುಂಪು ತುಂಬಾ ಹತ್ತಿರಕ್ಕೆ ಬಂದಿದ್ದರಿಂದ ಅವರು ಮುಜುಗರಕ್ಕೀಡಾದರು. ಅಲ್ಲದೆ, ಯುವಕರ ಅಸಭ್ಯ ವರ್ತನೆ ನೋಡಿ ತಾಳ್ಮೆ ಕಳೆದುಕೊಂಡ ಮಂಗಲಿ ಜೋರು ಧ್ವನಿಯಲ್ಲಿ ಕೂಗಾಡಿದ್ದಲ್ಲದೆ, ಕೈಯಿಂದ ಹೊಡೆಯಲು ಯತ್ನಿಸಿದರು.
ಇದಾದ ಬಳಿಕ ತನ್ನ ಡ್ರೈವರ್‌ಗೆ ಕರೆ ಮಾಡಿ ಕಾರನ್ನು ಬೇಗ ತೆಗೆದುಕೊಂಡು ಬಾ ಎಂದು ಕೂಗಿದರು. ಅಲ್ಲದೆ, ತನ್ನ ಸಹಾಯಕರನ್ನು ಕೂಗಿ ಅವರ ಮೇಲೂ ಕೂಗಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದೆ.(ಏಜೆನ್ಸೀಸ್​)
ನಿನ್ನೆ ರಾತ್ರಿ ಎಂಜಿ ರೋಡಿನಲ್ಲಿ ಬಾಯ್​ಫ್ರೆಂಡ್​ ಜತೆಗೂಡಿ ನಟಿ ದಿವ್ಯಾ ಸುರೇಶ್​ ಹೈಡ್ರಾಮ: ಪೊಲೀಸರಿಗೆ ಅವಾಜ್​

ಸೇಲ್ಸ್​ಮನ್​ ಆಗಿದ್ದ ಪಿಯೂಷ್​ ಜೈನ್​ 300 ಕೋಟಿ ಒಡೆಯನಾಗಿದ್ಹೇಗೆ? ಇಲ್ಲಿದೆ ಯಾರಿಗೆ ಗೊತ್ತಿರದ ಸಂಗತಿ

ಪುಷ್ಪ ಚಿತ್ರದ ಬಗ್ಗೆ ಕೇಳಿ ಭಯವಾಗ್ತಿದೆ: ಮುಂದಾಗುವ ಅನಾಹುತಗಳ ಬಗ್ಗೆ ಅರಣ್ಯಾಧಿಕಾರಿಗಳ ಕಳವಳ

ಡಿವೋರ್ಸ್​ ಆದ ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಸಮಂತಾ-ನಾಗಚೈತನ್ಯ!

Sign in to your account
Please enter an answer in digits:five × one =
Remember me
