ಹೈದರಾಬಾದ್​:ಟಾಲಿವುಡ್ ಸಿನಿಮಾ ‘ಪುಷ್ಪ: ದಿ ರೈಸ್’ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಅದರ ಡೈಲಾಗ್‌ಗಳು ಹಾಗೂ ಸಿಗ್ನೇಚರ್​ ಸ್ಟೆಪ್ಸ್​ ಆಗಾಗ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್​ನಲ್ಲಿರುತ್ತವೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿದೆ. ಪ್ರಪಂಚದಾದ್ಯಂತದ ಜನರು ಅದರ ಅನುಸರಣೆಯನ್ನು ಮಾಡಿದ್ದಾರೆ.
ಯುವಕರಿಂದ ಹಿಡಿದು ವಯಸ್ಸಾದ ನಾಗರಿಕರು ಕೂಡ ತೆಗ್ಗೆದೆಲೆ ಡೈಲಾಗ್​ ಹೊಡೆದು ಸಿಗ್ನೆಚರ್​ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ ಸಿನಿಮಾ ಮೇಲಿನ ಕ್ರೇಜ್​ ಮಾತ್ರ ಇನ್ನು ಕಡಿಮೆ ಆಗಿಲ್ಲ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲೂ ತೆಗ್ಗೆದೆಲೆ ಡೈಲಾಗ್​ ಸದ್ದು ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು ಪುಪ್ಪ ಚಿತ್ರದ ಡೈಲಾಗ್​ ಅನ್ನು ತನ್ನದೇ ರೀತಿಯಲ್ಲಿ ಬರೆದಿದ್ದಾನೆ. ಪುಷ್ಪ…ಪುಷ್ಪರಾಜ್​.. ಅಪುನ್​ ಲಿಖೇಗಾ ನಹಿ ಎಂದು ಬರೆದಿದ್ದು, ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರರ್ಥವಾಗಿದೆ.
ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಫೋಟೋವನ್ನು ಶಿಕ್ಷಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅನೇಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.(ಏಜೆನ್ಸೀಸ್​)
answer sheet me v pushpa raj🤣🤣pic.twitter.com/3RVwDwB4to
— Manoj Sarkar (@manojsarkarus)April 4, 2022

ಹುಬ್ಬಳ್ಳಿಯಲ್ಲಿ ಲವ್​ ಜಿಹಾದ್​ ಕೇಸ್​ಗೆ ಸ್ಫೋಟಕ ತಿರುವು: ಮುತಾಲಿಕ್​ ಕೊಟ್ಟ ಗಡುವಿನೊಳಗೇ ಠಾಣೆಗೆ ಬಂದ ಯುವತಿ

ಮದ್ಯ ಖರೀದಿಸಲು ಹಣಕ್ಕಾಗಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳನಿಗೆ ಕ್ಷಣಾರ್ಧದಲ್ಲೇ ಬೆನ್ನತ್ತಿದ ಕರ್ಮಫಲ!

5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
