ವಿಜಯವಾಡ:ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಸರ್ಪ್ರೈಸ್​ ಗಿಫ್ಟ್​​ ಕೊಡುವುದಾಗಿ ಕರೆದು ಭಾವಿ ಪತಿಯ ಕತ್ತು ಕೊಯ್ದಿದ್ದ ಯುವತಿಯೊಬ್ಬಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ.
ಆಂಧ್ರದ ಅನಕಪಲ್ಲಿ ಜಿಲ್ಲೆಯ ರವಿಕಾಮತಮ್​ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಆರೋಪಿಯ ಹೆಸರು ಪುಷ್ಪಾ. ಮದುವೆ ಇಷ್ಟವಿಲ್ಲದಿದ್ದಕ್ಕೆ ಈ ಕೃತ್ಯ ಎಸಗಿದೆ ಎಂದು ಪುಷ್ಪಾ ತಪ್ಪೊಪ್ಪಿಕೊಂಡಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧನ ಮಾಡಿ ವಿಶಾಖಪಟ್ಟಣಂ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ಅನಕಪಲ್ಲಿ ಜಿಲ್ಲೆಯ ಮಡುಗುಲ ಮಂಡಲ್​ ಘಾಟ್​​ ನಿವಾಸಿ ಅಡ್ಡೆಪಲ್ಲಿ ರಾಮು ನಾಯ್ಡು ಹೈದರಾಬಾದ್​ನ ಸಿಎಸ್​ಐಆರ್​ನಲ್ಲಿ​ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮದುವೆ ಪುಷ್ಪಾ ಜತೆ ಮೇ 26ರಂದು ನಡೆಯಬೇಕಿತ್ತು. ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು. ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಲಾಗಿತ್ತು. ಇತ್ತ ಪುಷ್ಪಾ ಕೂಡ ರಾಮ ನಾಯ್ಡು ಜತೆ ಆಗಾಗ ಫೋನ್​ನಲ್ಲಿ ಬಿಜಿಯಾಗಿರುತ್ತಿದ್ದಳು.
ಹೀಗಿರುವಾಗ ಭಾವಿ ಪತಿಯನ್ನು ಕರೆದಿದ್ದ ಪುಷ್ಪಾ ತನ್ನ ಫ್ರೆಂಡ್ಸ್​ಗಳಿಗೆ ಪರಿಚಯ ಮಾಡಿಕೊಡಲು ಜತೆಗೆ ಕರೆದೊಯ್ಯವುದಾಗಿ ಹೇಳಿದ್ದರು. ಜತೆಗೆ ಕರೆದೊಯ್ದಿದ್ದ ಪುಷ್ಪಾ ಮಾರ್ಗ ಮಧ್ಯದಲ್ಲಿ ಫ್ಯಾನ್ಸಿ ಶಾಪ್​ನಲ್ಲಿ ಗಿಫ್ಟ್​ ಆಗಿ ಸ್ಟೈಲಿಶ್​ ಚಾಕು ಕೊಂಡು ತಂದಿದ್ದಳು. ಬಳಿಕ ಇಬ್ಬರು ಕೊಮಲಪುಡಿಯಲ್ಲಿರುವ ಅಮರಪುರಿ ಆಶ್ರಮ ಕಡೆಗೆ ಭಾವಿ ಪತಿಯನ್ನು ಕರೆದೊಯ್ದಳು. ಇದಾದ ಬಳಿಕ ಸರ್ಪ್ರೈಸ್​ ಗಿಫ್ಟ್​ ಕೊಡುವುದಾಗಿ ಹೇಳಿ ದುಪ್ಪಟ್ಟದಿಂದ ಭಾವಿ ಪತಿಯ ಕಣ್ಣು ಮುಚ್ಚಿದ್ದಾಳೆ. ತಕ್ಷಣ ಆತನ ಕತ್ತನ್ನು ಚಾಕುವಿನಿಂದ ಕೊಯ್ದಿದ್ದಾಳೆ.
ಭಾವಿ ಪತ್ನಿಯ ಕೃತ್ಯದಿಂದ ಶಾಕ್​ ಆದ ರಾಮು ನಾಯ್ಡು, ತಾನು ತಂದಿದ್ದ ಹೂವನ್ನು ಬೈಕ್​ ಮೇಲೆ ಇಟ್ಟು ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆತ ಏನು ಬೇಕಾದರೂ ಮಾಡಬಹುದು ಅಂದುಕೊಂಡ ಪುಷ್ಪಾ ಆತನನ್ನು ತಾನು ಹಿಂಬಾಲಿಸಿದ್ದಾಲೆ. ಆದಾಗ್ಯೂ ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ರಾಮು ನಾಯ್ಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ರಾಮು ನಾಯ್ಡುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಭಾವಿ ಪತಿಯ ಮೇಲೆ ದಾಳಿ ಮಾಡುವ ಮುನ್ನ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ, ಇಬ್ಬರ ನಡುವೆ ಪ್ರೀತಿ ಇದೆ ಎಂದು ಬಿಂಬಿಸಲು ಪುಷ್ಪಾ, ರಾಮು ನಾಯ್ಡು ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾಳೆ. ಇದಾದ ಬಳಿಕ ಸರ್ಪ್ರೈಸ್​ ಗಿಫ್ಟ್​ ಕೊಡುವುದಾಗಿ ಹೇಳಿ ತನ್ನ ಕೃತ್ಯ ಎಸಗಿದ್ದಾಳೆ. ಪುಷ್ಪಾಳ ಮುಖವಾಡ ಸದ್ಯ ಬಯಲಾಗಿದ್ದು, ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ. ಪುಷ್ಪಾಗೆ ಯಾಕೆ ಮದುವೆ ಇಷ್ಟವಿರಲಿಲ್ಲ ಎಂಬುದು ಇನ್ನು ನಿಗೂಢವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಹೊಂಬಾಳೆ ಸಂಸ್ಥೆಯಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆ: ನೈಜ ಕತೆಗೆ ಸುಧಾ ಕೊಂಗಾರ ನಿರ್ದೇಶನ

ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:five − 2 =
Remember me
