ನವದೆಹಲಿ:ನಮ್ಮ ವೈವಾಹಿಕ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎನ್ನುವ ಮೂಲಕ ಡಿವೋರ್ಸ್​ ವದಂತಿಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪೂರ್ಣ ವಿರಾಮ ಹಾಕಿದ್ದಾರೆ. ​
ಕಳೆದ ಎರಡು ದಿನಗಳಿಂದ ಧನಶ್ರೀ ವರ್ಮ ಮತ್ತು ಚಾಹಲ್​ ದಾಂಪತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ತಾರಾ ಜೋಡಿ 2020ರಲ್ಲಿ ಮದುವೆಯಾಗಿದ್ದಾರೆ. ಇದೀಗ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಧನಶ್ರಿ ಅವರು ತಮ್ಮ ಇನ್​​ಸ್ಟಾಗ್ರಾಂ ಪ್ರೊಫೈಲ್​ನಲ್ಲಿದ್ದ ಚಾಹಲ್​ ಸರ್​ನೇಮ್​ ಅನ್ನು ತೆಗೆದುಹಾಕಿದ್ದು. ಅಲ್ಲದೆ, ಕೆಲ ದಿನಗಳಿಂದ ಚಾಹಲ್​ ಕೂಡ ಹೊಸ ಜೀವನ ಆರಂಭ ಎಂದು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.
ಯಾವಾಗ ಇವರಿಬ್ಬರು ಡಿವೋರ್ಸ್​ ಆಗುತ್ತಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತೋ ಚಾಹಲ್​ ಅದಕ್ಕೆ ಬ್ರೇಕ್​ ಹಾಕಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಚಾಹಲ್​, ನಮ್ಮ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಸಿ ಎಂದು ಕೋರಿದ್ದಾರೆ.

ಅಂದಹಾಗೆ ಚಾಹಲ್​ ಪತ್ನಿ ಧನಶ್ರೀ ಬಗ್ಗೆ ಬಹುತೇಕರಿಗೆ ತಿಳಿದಿದೆ. ಏಕೆಂದರೆ, ಅವರು ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​. ನೃತ್ಯ ಸಂಯೋಜಕಿ ಮತ್ತು ಓರ್ವ ಯೂಟ್ಯೂಬರ್​ ಕೂಡ ಹೌದು. ಮತ್ತೊಂದೆಡೆ ಚಹಾಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು ಮತ್ತು ಐಪಿಎಲ್‌ನಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ.(ಏಜೆನ್ಸೀಸ್​)
5 ಮನೆ, ಈಜುಕೊಳ, ಥಿಯೇಟರ್​, ಬಾರ್​, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್​

ಡಿಕೆಶಿ ಸಿಎಂ ಆಗೋದಾದ್ರೆ ಸಹಕಾರ! ಒಕ್ಕಲಿಗರ ಸಮಾವೇಶದಲ್ಲಿ ಎಚ್​ಡಿಕೆ ಹೇಳಿಕೆ

8 ಯೂಟ್ಯೂಬ್ ಚಾನಲ್ ಬಂದ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + nineteen =
Remember me
