ಹೈದರಾಬಾದ್​:ಹುಡುಗನೊಬ್ಬನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ತನ್ನ ಫೋಟೋ ನೋಡಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಬೊಮ್ಮಲಾರಾಮರಾಮ ವಲಯದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ನಡೆದಿದ್ದು, ಮೃತಳನ್ನು ಶಿಲ್ಪಾ (14) ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಬೊಯ್ನ್​ಪಲ್ಲಿ ಗ್ರಾಮದವಳು. ಈಕೆಯ ಪಾಲಕರು ಚಿಂತಲಪಲ್ಲಿ ವಲಯದ ಪೊಥರಾಮ ಗ್ರಾಮದ ತರಕಾರಿ ತೋಟವೊಂದರಲ್ಲಿ ಕೂಲಿಯಾಳಾಗಿದ್ದಾರೆ.
ಈ ಸಂದರ್ಭದಲ್ಲಿ ಬಾಲಕಿಗೆ ಅದೇ ಗ್ರಾಮದ ಬೊಟಿಮಿಡಿ ಗ್ಯಾಂಗ್​ ಸದಸ್ಯನಾದ ಮಧು ಎಂಬಾತನ ಪರಿಚಯವಾಗುತ್ತದೆ. ಇದಾದ ಬೆನ್ನಲ್ಲೇ ಆಕೆಯ ಫೋಟೋವನ್ನು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕುತ್ತಾನೆ. ಇಬ್ಬರ ನಡುವೆ ತುಂಬಾ ಸಲುಗೆ ಎಂದು ಬಿಂಬಿಸಲಾಗುತ್ತದೆ. ಇದರಿಂದ ಮನನೊಂದ ಬಾಲಕಿ ಇದೀಗ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ.
ಇದರ ಬೆನ್ನಲ್ಲೇ ಬಾಲಕಿಯ ತಾಯಿ ಜಯಮ್ಮ ಪೆಟ್ಟಾಹ್​ ಪೊಲೀಸ್​ ಠಾಣೆಯಲ್ಲಿ ಮಗಳ ಸಾವಿಗೆ ಮಧು ಕಾರಣ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ಭಾರತೀಯ ಯುವತಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನೀನಾಸಂ ಸತೀಶ್​

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
