ಜೈಪುರ:ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ಚಿತ್ರೀಕರಣ ಮಾಡಿರುವ ಪಾಪಿ ಪತಿರಾಯನೊಬ್ಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಅಮಾನವೀಯ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಹೆಂಡತಿಯ ಕುಟುಂಬದವರು 1.5 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನೀನು ವರದಕ್ಷಿಣೆ ಕೊಡಲಿಲ್ಲ ಅಂದರೆ, ನಿನ್ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ವರದಕ್ಷಿಣೆ ಹಣ ಪಡೆದುಕೊಳ್ಳುತ್ತೇನೆ ಎಂಬ ಉದ್ಧಟತನದ ಹೇಳಿಕೆಯನ್ನು ನೀಡುವ ಮೂಲಕ ನಾಗರಿಕ ಸಮಾಜ ತಲೆಗ್ಗಿಸುವಂತೆ ದುಷ್ಟ ಪತಿರಾಯ ಮಾಡಿದ್ದಾನೆ. ಸದ್ಯ ಪತಿಯ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ಭರತಪುರದ ಕಮನ್​ ಪೊಲೀಸ್​ ಠಾಣೆಯ ಅಧಿಕಾರಿ ದೌಲತ್​​ ಸಾಹು ಅವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯು ತನ್ನ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಅಲ್ಲದೆ, ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿರುವ ಮಾತು ಸಹ ಕೇಳಿಬಂದಿದೆ ಎಂದಿದ್ದಾರೆ.
ಸಂತ್ರಸ್ತೆ ಸಹ ಮಾತನಾಡಿದ್ದು, ನನ್ನ ಅತ್ತೆ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಹಣ ಕೊಡಲು ವಿಫಲವಾಗಿದ್ದಕ್ಕೆ ಸಂಬಂಧಿಕರಿಂದ ನನ್ನ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ಮೊಬೈಲ್​ ಮೂಲಕ ವಿಡಿಯೋ ರೆಕಾರ್ಡ್​ ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿದ್ದಾರೆ. ಸಂಬಂಧಿಕರಲ್ಲಿ ಒಬ್ಬ ನನ್ನನ್ನು ಐದು ದಿನಗಳ ಹಿಂದೆ ಕಮನ್​ಗೆ ಕರೆತಂದು ರೇಪ್​ ಮಾಡಿದ್ದಾನೆ. ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ನನ್ನ ಮನೆ ಓಡಿ ಬಂದೆ ಎಂದು ಹೇಳಿದ್ದಾಳೆ.
ಸಂತ್ರಸ್ತೆ 2019ರಲ್ಲಿ ಹರಿಯಾಣದಲ್ಲಿ ಮದುವೆ ಆಗಿದ್ದಳು. ಅಂದಿನಿಂದಲೂ ಅತ್ತೆ ಆಖೆಗೆ ಕಿರುಕುಳ ನೀಡುತ್ತಿದ್ದಾರಂತೆ. ಈ ಕಾರಣದಿಂದಲೇ ಆಕೆ ತವರು ಮನೆಗೆ ಹಿಂದಿರುಗಿದ್ದಳು. ಆದರೆ, ಗಂಡ ಆಕೆಯನ್ನು ಪುಸಲಾಯಿಸಿ ಮತ್ತೆ ಮನೆಗೆ ಕರೆದೊಯ್ದಿದ್ದ. ಇದಾದ ಬಳಿಕ ತನ್ನ ಇಬ್ಬರು ಸಂಬಂಧಿಕರನ್ನು ಮನೆ ಕರೆದು ನನ್ನ ಮೇಲೆ ಗ್ಯಾಂಗ್​ರೇಪ್​ ಮಾಡಲು ಹೇಳಿದ. ಅದರಂತೆ ನನ್ನ ಮೇಲೆ ಮೃಗೀಯವಾಗಿ ಎರಗಿದರು. ಅದನ್ನು ಪತಿ ವಿಡಿಯೋ ರೆಕಾರ್ಡ್​ ಮಾಡಿಕೊಂಡ ಎಂದು ಸಂತ್ರಸ್ತೆ ಹೇಳಿದ್ದಾಳೆ.
ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ನಿನ್ನ ಕುಟುಂಬ ವರದಕ್ಷಿಣೆ ಕೊಡಲಿಲ್ಲ ಆದರೆ, ಈಗ ನಿನ್ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿ ಒಂದಿಷ್ಟು ಹಣವನ್ನು ಪಡೆದುಕೊಳ್ಳುತ್ತೇನೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಹಿಂದು ಎಂಬ ಕಾರಣಕ್ಕೆ ಅಫ್ರಿದಿ ಕೊಟ್ಟ ಕಿರುಕುಳದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪಾಕ್​ ಮಾಜಿ ಆಟಗಾರ ಕನೇರಿಯಾ!

ನನ್ನ ಕೊನೆಯ ಉಸಿರು ಇರೋವರೆಗೂ ನಾನು ಮುಸ್ಲಿಮರಿಗೆ ದ್ರೋಹ ಮಾಡಲ್ಲ: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ

9ನೇ ಪಂದ್ಯದಲ್ಲಾದರೂ ಗೆದ್ದೀತೇ ಮುಂಬೈ? ಇಂದು ರಾಜಸ್ಥಾನ ರಾಯಲ್ಸ್ ಎದುರಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
