ಮುಂಬೈ:ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರುವ ಮೈಸೂರಿನ ಆದಿಲ್​ ಖಾನ್​ನನ್ನು ತನ್ನ ಹೊಸ ಬಾಯ್​ಫ್ರೆಂಡ್ ಎಂದು ಪರಿಚಯಿಸಿರುವ ನಟಿ ರಾಖಿ ಸಾವಂತ್​, ಸದ್ಯ ಆದಿಲ್​ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಹಿಂದೆಲ್ಲ ಬೋಲ್ಡ್​ ಡ್ರೆಸ್​ಗಳಿಂದಲೇ ರಾಖಿ ಸಾವಂತ್​ ಸುದ್ದಿಯಾಗುತ್ತಿದ್ದರು. ಈಗ ಅದಕ್ಕೆಲ್ಲ ಬ್ರೇಕ್​ ಬಿದ್ದಿದ್ದು, ತಮ್ಮ ಡ್ರೆಂಸ್ಸಿಂಗ್​ ಪರಿಕಲ್ಪನೆಯನ್ನು ಬದಲಾಯಿಸಿದ ಕೀರ್ತಿಯನ್ನು ಆದಿಲ್​ಗೆ ನೀಡಿದ್ದಾರೆ.
ಇದ್ದಕ್ಕಿದ್ದಂತೆ ಬಟ್ಟೆ ತೊಡುವ ರೀತಿಯನ್ನು ಬದಲಾಯಿಸಿದ್ದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ಎದೆ ಸೀಳು ಕಾಣುವಂತೆ ನಾನು ಬಟ್ಟೆ ಧರಿಸುವುದು ಆದಿಲ್​ಗೆ ಇಷ್ಟವಿಲ್ಲ. ಹೀಗಾಗಿ ಆದಿಲ್ ಮಿತಿಯನ್ನು ಮೀರದಂತೆ ಬದಕಲು ಇಚ್ಛಿಸಿದ್ದೇನೆ ಎಂದಿದ್ದಾರೆ. ​
ಫ್ಯಾಷನ್ ಎಂದರೆ ಎದೆ ಸೀಳನ್ನು ಬಹಿರಂಗಪಡಿಸುವುದು ಎಂದರ್ಥವಲ್ಲ, ನೀವು ಚಿಕ್ಕದಾದ ಅಥವಾ ಮಾದಕ ಉಡುಗೆಯನ್ನೂ ಧರಿಸಬಹುದು. ಎಳೆ ಸೀಳು ತೋರಿಸುವುದನ್ನು ಆದಿಲ್​ ಇಷ್ಟಪಡುವುದಿಲ್ಲ. ಯಾವುದೇ ಕಾರ್ಯಕ್ರಮವಿದ್ದರೂ ಆದಿಲ್​ ಯಾವ ಬಟ್ಟೆ ಧರಿಸಬೇಕೆಂಬುದನ್ನು ಆಯ್ಕೆ ಮಾಡುತ್ತಾರೆ. ನಾನು ಅದನ್ನೇ ಧರಿಸುತ್ತೇನೆ. ನಾನು ಒಂದು ಮಿತಿಯೊಳಗೆ ಇರಲು ಬಯಸುತ್ತೇನೆ ಮತ್ತು ಚಿತ್ರರಂಗ, ಅಭಿಮಾನಿಗಳು, ಆದಿಲ್ ಮತ್ತು ಅವರ ಕುಟುಂಬವನ್ನು ಪರಿಗಣಿಸಲು ಬಯಸುತ್ತೇನೆ. ದೇವರಿಗೆ ವಿರುದ್ಧವಾಗಿ ನಡೆಯಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಆದಿಲ್ ಮತ್ತು ಅವನ ಕುಟುಂಬವು ಆಕ್ಷೇಪಾರ್ಹವೆಂದು ಭಾವಿಸುವ ಯಾವುದನ್ನೂ ಮಾಡಲು ನಾನು ಬಯಸುವುದಿಲ್ಲ ಎಂದು ರಾಖಿ ಸಾವಂತ್​ ಹೇಳಿದರು. ಯಾವುದೇ ನಟಿಯರು ಚಲನಚಿತ್ರಗಳಲ್ಲಿ ಸ್ವಇಚ್ಛೆಯಿಂದ ತುಂಡುಡುಗೆ ತೊಡುವುದಿಲ್ಲ. ಆದರೆ, ಇಂಡಸ್ಟ್ರಿಯಲ್ಲಿ ಮೈಮಾಟ ಪ್ರದರ್ಶನ ಅನಿವಾರ್ಯವಾಗಿದೆ. ಇಲ್ಲವಾದರೆ, ಚಿತ್ರರಂಗದಲ್ಲಿ ಉಳಿಯುವುದು ಕಷ್ಟ ಎಂದು ರಾಖಿ ಹೇಳಿದರು.
ನನಗೆ ಯಾವುದು ಇಷ್ಟವೋ ಅದನ್ನು ಆಯ್ದುಕೊಳ್ಳಲು ನನಗೆ ಸಿನಿಮಾ ರಂಗದಲ್ಲಿ ಯಾವುದೇ ಗಾಡ್​ಫಾದರ್​ ಇಲ್ಲ. ಮೈಮಾಟ ಪ್ರದರ್ಶಿಸಿದ ಸಾಧಿಸಬೇಕಾದ್ದದ್ದು ಏನಿದೆ? ಮೈಮಾಟ ಪ್ರದರ್ಶಿಸಲು ಯಾರೂ ಸ್ವಿಚ್ಛೆಯಿಂದ ಒಪ್ಪಿಕೊಳ್ಳಲ್ಲ. ಸಿನಿಮಾದಲ್ಲಿ ಅವಕಾಶಗಳು ಬರಬೇಕೆಂದರೆ, ಮೈಮಾಟ ಪ್ರದರ್ಶನಕ್ಕೆ ಸಿದ್ಧವಾಗಿರಲೇಬೇಕು ಎಂದು ರಾಖಿ, ಮೈಮಾಟ ಹಿಂದಿನ ಕರಾಳ ಸತ್ಯವನ್ನು ತಿಳಿಸಿದರು.(ಏಜೆನ್ಸೀಸ್​)
A post shared by FilmyKalakar (@filmykalakar)

ಅಭಿಷೇಕ್​ಗೆ ಆಫರ್​ ಬಂದಿರೋದು ನಿಜ… ಆದ್ರೆ ನಾನು ಅವನಿಗೆ ಸ್ಟೂಲ್ ಹಾಕಿಕೊಡಲ್ಲ: ಸುಮಲತಾ ಅಂಬರೀಷ್​

VIDEO| ಎಲ್ಲರೆದುರು ಅಂಕಲ್​ ಎಂದು ಕರೆದಿದ್ದಕ್ಕೆ ಸಾರಾ ಅಲಿ ಖಾನ್​ಗೆ ಸಲ್ಮಾನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆ ಏರಿದ IPS ಅಧಿಕಾರಿ​! ಮಂಗ್ಳೂರು ಕಮೀಷನರ್​ರ ಸಾಹಸಕ್ಕೆ ಮನಸೋತ ಜನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − twelve =
Remember me
