ಕೊಚ್ಚಿ:ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸುಮಾರು ಐದು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ಕೇರಳದ ನಟಿ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಟಿ ಅಶ್ವಥಿ ಬಾಬು ಮತ್ತು ಆಕೆಯ ಸ್ನೇಹಿತ ನೌಫಲ್​ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕಾಕನಾಡ ಮೂಲದವರು. ನಿನ್ನೆ (ಜುಲೈ 26) ಸಂಜೆ 6.30ರ ಸುಮಾರಿಗೆ ಅಲುವಾದ ಮುತ್ತೊಮ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಸಿಯುಎಸ್​ಎಟಿ ಜಂಕ್ಷನ್​ನಿಂದ ಥ್ರಿಕ್ಕಕ್ಕರ ದೇವಸ್ಥಾನದವರೆಗೂ ಅಶ್ವಥಿ ಸ್ನೇಹಿತ ನೌಫಲ್​ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಅಪಾಯಕಾರಿ ಕಾರು ಚಾಲನೆಯ ಪರಿಣಾಮ ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದರೂ ಕಾರು ನಿಲ್ಲಿಸದ ಕಾರಣ ಬೇರೆ ವಾಹನಗಳು ಕಾರಿನ ಹಿಂದೆ ಹೋಗಿವೆ. ವಾಹನವೊಂದು ಕಾರನ್ನು ತಡೆದರೂ ನೌಫಲ್​, ಕಾರನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ, ಕಾರಿನ ಟೈರ್ ಒಡೆದಿದೆ. ಅಲ್ಲದೆ, ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ನಿಂತಿದೆ.
ಕಾರು ನಿಲ್ಲುತ್ತಿದ್ದಂತೆ ಜನರು ಅಶ್ವಥಿ ಮತ್ತು ನೌಫಲ್​ ಸುತ್ತ ಸುತ್ತುವರಿದರು. ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನೌಫಲ್​ ಕಂಠಪೂರ್ತಿ ಕುಡಿದು ಅಮಲಿನಲ್ಲಿದ್ದ ಎಂದು ತಿಳಿದುಬಂದಿದೆ.
ಅಂದಹಾಗೆ ಅಶ್ವಥಿ ಬಾಬು ಥುಂಬಾದಲ್ಲಿರುವ ಅರಟ್ಟುವಾಯಿ ಮೂಲದವರು. 2018ರಲ್ಲಿ ಡ್ರಗ್ಸ್​ ಪ್ರಕರಣವೊಂದರಲ್ಲಿ ಅವರನ್ನು ಬಂಧಿಲಾಗಿತ್ತು.(ಏಜೆನ್ಸೀಸ್​)
ಲಾಸ್ಟ್​ ಟೈಂ ಯಾವಾಗ ಲೈಂಗಿಕ ಕ್ರಿಯೆ ನಡೆಸಿದ್ರಿ! ವಿಜಯ್​ಗೆ ಕರಣ್​ ಪ್ರಶ್ನೆ, ನಾನು ಗೆಸ್​ ಮಾಡ್ಲಾ ಎಂದ ಅನನ್ಯಾ

ಭಿಕ್ಷೆ ಬೇಡಿ ಗಳಿಸಿದ 55 ಲಕ್ಷ ರೂ. ದಾನ ಮಾಡಿದ ಭಿಕ್ಷುಕ! ಇವರ ಬಗ್ಗೆ ತಿಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ

ನಟ ರಣವೀರ್​ ಸಿಂಗ್​​ ಕ್ಯಾಮೆರಾ ಮುಂದೆ ಬೆತ್ತಲಾಗಲು ಪಡೆದ ಸಂಭಾವನೆಯ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
