ಎರ್ನಾಕುಲಂ:ಕೇರಳದ ಎರ್ನಾಕುಲಂ ಜಿಲ್ಲೆ ಚೆರೈನಲ್ಲಿ ಮೀನಾಗಾರರ ಬಲೆಗೆ ವಿರಾಳತಿ ವಿರಳ ಮೀನೊಂದು ಬಿದ್ದಿದೆ. ಇದೊಂದು ಅಪರೂಪದ ಜಾತಿಯ ಮೀನಾಗಿದ್ದು, ಅದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.
ನೋಡಲು ಜೆಲ್ಲಿಫಿಶ್​ನಂತೆಯೇ ಈ ಮೀನು ಕಾಣುತ್ತದೆ. ಕಿತ್ತಳೆ ಬಣ್ಣದಲ್ಲಿದ್ದು, ಅದರ ಕೆಂಪು ಬಣ್ಣದ ರೆಕ್ಕೆಗಳ ಮೇಲೆ ಬಿಳಿ ಪಟ್ಟೆಗಳಿವೆ. ಸಮತಟ್ಟಾದ ದೇಹವನ್ನು ಹೊಂದಿದ್ದು, ಈ ಮೀನು 8 ಇಂಚು ಉದ್ದ ಮತ್ತು 200 ಗ್ರಾಂ ತೂಕವಿದೆ.
ಶುಕ್ರವಾರ ಮೀನು ಹಿಡಿಯಲು ಕುಜುಪ್ಪೊಳ್ಳಿಯಿಂದ ಮೀನುಗಾರರು ಸಣ್ಣ ದೋಣಿಯಲ್ಲಿ ಹೋದಾಗ ಚೆರೈನಲ್ಲಿ ಈ ಮೀನು ಬಲೆಗೆ ಬಿದ್ದಿದೆ. ಅಂದಹಾಗೆ ಚೆರೈ, ವೈಪಿನ್ ದ್ವೀಪದ ಉತ್ತರ ಭಾಗದಲ್ಲಿರುವ ಚಿಕ್ಕ ಪಟ್ಟಣ. ಈ ಪಟ್ಟಣವು ಕೊಚ್ಚಿನ್, ಉತ್ತರ ಪ್ರಾವೂರ್ ಮತ್ತು ಕೊಡುಂಗಲ್ಲೂರಿಗೆ ಸಂಪರ್ಕಿಸುತ್ತದೆ. ಚೆರೈ ಎರ್ನಾಕುಲಂ ಜಿಲ್ಲೆಗೆ ಸೇರಿದೆ.
ಇದುವರೆಗೂ ಇಂತಹ ಮೀನನ್ನು ನಾವು ನೋಡಿಯೇ ಇಲ್ಲ ಎಂದು ಮೀನುಗಾರರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಬಲೆಗೆ ಬಿದ್ದ ಮೀನನ್ನು ಒಂದು ಬಕೆಟ್​ನಲ್ಲಿ ಸಮುದ್ರದ ನೀರು ತುಂಬಿಸಿಕೊಂಡು ಅದರೊಳಗೆ ಇಟ್ಟು ಜೋಪಾನವಾಗಿ ತಂದಿದ್ದಾರೆ.(ಏಜೆನ್ಸೀಸ್​)
ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ ಡಿಸೆಂಬರ್​ನಲ್ಲಿ 2ನೇ ಡೋಸ್​ ಕರೊನಾ ಲಸಿಕೆ: ಆಘಾತಕ್ಕೊಳಗಾದ ಕುಟುಂಬ

VIDEO: ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!

ಜೂನಿಯರ್​ ಎನ್​ಟಿಆರ್​​ ಧರಿಸಿರುವ ಈ ವಾಚ್​ನ​ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
