ಇಂದೋರ್​ (ಮಧ್ಯಪ್ರದೇಶ):ವಿಷ ಸೇವಿಸಿ 35 ವರ್ಷದ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಟ್ಲಮ್​ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ರಾಟ್ಲಮ್​ನಲ್ಲಿರುವ ತಮ್ಮ ನಿವಾಸದಲ್ಲಿ ಮಹಿಳಾ ಪೊಲೀಸ್​ ಅಧಿಕಾರಿ ಬುಧವಾರ ವಿಷ ಸೇವಿಸಿದ್ದಾರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಮಹಿಳಾ ಪೊಲೀಸ್​ ಅಧಿಕಾರಿಯ ಕೈಬರಹದ ಡೆತ್​ನೋಟ್ ಪತ್ತೆಯಾಗಿದ್ದು, ಮದುವೆಯಾಗದಿದ್ದಕ್ಕೆ ಅವರು ಖಿನ್ನತೆಗೆ ಒಳಗಾಗಿದ್ದರೆಂದು ತಿಳಿದುಬಂದಿದೆ.
ಅಧಿಕಾರಿಯ ಹೆಸರು ಕವಿತಾ ಸೋಲಂಕಿ. ಅವರನ್ನು ರಾಟ್ಲಮ್​ನ ಸ್ಟೇಷನ್​ ರೋಡ್​ ಪೊಲೀಸ್​ ಠಾಣೆಯ ಮಹಿಳಾ ಸಹಾಯವಾಣಿಯ ಸಬ್​ ಇನ್ಸ್​ಪೆಕ್ಟರ್​ ಆಗಿ ಚಾರ್ಜ್​ ನೀಡಲಾಗಿತ್ತು. ಮಂದ್ಸೌರ್​ ಜಿಲ್ಲೆಯಲ್ಲಿರುವ ಆಕೆಯ ಪಾಲಕರನ್ನು ಭೇಟಿ ಮಾಡುವುದಾಗಿ ಹೇಳಿ ಹೋಗಿದ್ದರು.
ಬುಧವಾರ ತವರಿನಿಂದ ಕವಿತಾ ಅವರು ಮರಳಿ ರಾಟ್ಲಮ್​ನಲ್ಲಿರುವ ನಿವಾಸಕ್ಕೆ ಬಂದಿದ್ದರು. ಈ ವೇಳೆ ವಿಷ ಸೇವಿಸಿದ್ದಾರೆ. ಬಳಿಕ ಸಹೋದ್ಯೋಗಿ ಒಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಸಹೋದ್ಯೋಗಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಕವಿತಾ ಅವರು ಅಸುನೀಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಟ್ಲಮ್​ ಪೊಲೀಸ್​ ವರಿಷ್ಠಾಧಿಕಾರಿ ಗೌರವ್​ ತಿವಾರಿ, ವಯಸ್ಸಾಗಿದ್ದರು ಮದುವೆ ಆಗದಿದ್ದಕ್ಕೆ ತುಂಬಾ ಬೇಸರಗೊಂಡಿದ್ದರು. ಅಲ್ಲದೆ, ಮದುವೆ ಕುರಿತು ಜನರು ಆಗಾಗ ಕೇಳುವ ಪ್ರಶ್ನೆಗೆ ಉತ್ತರಿಸಲು ಅವರಿಗೆ ಇರಿಸುಮುರಿಸಾಗಿತ್ತೆಂದು ತಿಳಿದಿದೆ. ಈ ಎಲ್ಲ ನೋವಿನಿಂದ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆಂದು ಹೇಳಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಗಿದೆ.(ಏಜೆನ್ಸೀಸ್​)
ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

ಅಶ್ಲೀಲ ಆಡಿಯೋ, 75 ಕೋಟಿ ರೂ. ಗಳಿಕೆ! ಗಂಡನ ಸಮರ್ಥನೆಗಿಳಿದು ಟ್ರೋಲ್​ ಆದ ಪಬ್​ಜಿ ಮದನ್​ ಪತ್ನಿ

ಐದು ವರ್ಷದ ಬಾಲಕಿಯನ್ನು ಎಲಿವೇಟರ್​ ಒಳಗೆ ಎಳೆದೊಯ್ದ ಕಾಮುಕ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
