ನವದೆಹಲಿ:ಏಪ್ರಿಲ್​ 24ರ ಪಂಚಾಯತ್​ ರಾಜ್​ ದಿವಸದಂದು ಜಮ್ಮುವಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದೀಗ ಅದರ ಸಮೀಪವೇ ಸ್ಫೋಟ ಸಂಭವಿಸಿದ್ದು, ಆರ್‌ಡಿಎಕ್ಸ್ ಮತ್ತು ನೈಟ್ರೇಟ್ ಸಂಯೋಜನೆಯ ಕುರುಹುಗಳು ಪತ್ತೆಯಾಗಿವೆ.
ಉಲ್ಕಾಶಿಲೆಯ ಅಪ್ಪಳದಿಂದ ಕುಳಿ ಸಂಭವಿಸಿದೆ ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು. ಆದರೆ, ಇದೀಗ ಸ್ಫೋಟಕಗಳ ಕುರುಹುಗಳು ಪತ್ತೆಯಾಗಿರುವುದರಿಂದ ಅನುಮಾನ ಮೂಡಿದೆ. ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಸಮಾವೇಶ ನಡೆದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತಿಯಿಂದ 12 ಕಿ.ಮೀ ದೂರದಲ್ಲಿರುವ ಜಮ್ಮುವಿನ ಲಾಲಿಯಾನ ಗ್ರಾಮದ ಅಂಗಳದಲ್ಲಿ ಈ ಸ್ಫೋಟ ಸಂಭವಿಸಿದೆ.
ಈ ಘಟನೆ ಉಗ್ರರಿಗೆ ಸಂಬಂಧಿಸಿರುವಂತೆ ಕಾಣುತ್ತಿಲ್ಲ. ಸದ್ಯ ಪ್ರಕರಣ ದಾಖಲಿಸಿದ್ದು, ಘಟನೆಯ ಖಚಿತತೆಗಾಗಿ ತನಿಖೆ ನಡೆಯುತ್ತಿದೆ. ಇದು ಉಲ್ಕಾಶಿಲೆಯ ಅಪ್ಪಳದಿಂದ ಆಗಿರಬಹುದು ಅಥವಾ ಮಿಂಚಿನಿಂದಲೂ ಸಂಭವಿಸಿರಬಹುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್​ 24ರ ಭಾನುವಾರದಂದು ಪಂಚಾಯತ್​ ರಾಜ್​ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್​ 370 ಮತ್ತು 35ಎ ಅನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ. ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್​ನಲ್ಲಿ ಸಮಾವೇಶ ನಡೆಯಿತು. ಈ ವೇಳೆ ಪ್ರಧಾನಿ ಅವರು 20 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು.(ಏಜೆನ್ಸೀಸ್​)
ನನ್ನೊಂದಿಗೆ ಮಲಗು ಇಲ್ಲವಾದಲ್ಲಿ ಇನ್ನು 20 ಗಂಡಸರನ್ನು ಕರ್ಕೊಂಡು ಬರ್ತೀನಿ: ಗರ್ಭಿಣಿ ಬಾಲಕಿಯ ನೋವಿನ ಕತೆ

#SinghamOurRealHero ಹ್ಯಾಶ್​ಟ್ಯಾಗ್ ಟ್ರೆಂಡ್​ ಮಾಡಿ ಟ್ರೋಲ್​​ ಆದ ಅಜಯ್​ ದೇವಗನ್​ ಬೆಂಬಲಿಗರು

ನಟ ಸುದೀಪ್ ಹೇಳಿಕೆ ನೂರಕ್ಕೆ ನೂರು ಸತ್ಯ: ಅಜಯ್​ ದೇವಗನ್​ರನ್ನು​ ತರಾಟೆಗೆ ತೆಗೆದುಕೊಂಡ ಪ್ರಶಾಂತ್​ ಸಂಬರಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
