ಕಂಜಿರಪಲ್ಲಿ:ಕೆಲ ದಿನಗಳ ಹಿಂದೆ ಬಿಡುಗಡೆಯಾದ ಮಲಯಾಳಂನ ಮಿನ್ನಲ್​ ಮುರಳಿ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುವುದರೊಂದಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಕಮಾಲ್​ ಮಾಡಿದೆ. ಹಾಲಿವುಡ್​ ಸಿನಿಮಾಗಳಲ್ಲಿರುವಂತೆ ಮೊದಲ ಬಾರಿಗೆ ಸೂಪರ್​ ಹೀರೋ ಕಲ್ಪನೆಯಲ್ಲಿ ಈ ಚಿತ್ರವನ್ನು ಸ್ಥಳೀಯ ಸ್ಪರ್ಶ ನೀಡಿ ನಿರ್ಮಿಸಲಾಗಿದೆ.
ಆದರೆ, ಚಿತ್ರಕ್ಕೆ ಸೆಡ್ಡು ಹೊಡೆಯುವ ನಿಜವಾದ ಸೂಪರ್​ ಹೀರೋ ಕೇರಳದಲ್ಲಿ ಒಬ್ಬರಿದ್ದಾರೆ. ಅವರ ಹೆಸರು ಅಭೀಶ್​. ಇದೀಗ ಅವರನ್ನು ಮಿನ್ನಲ್​ ಅಭೀಶ್​ ಎಂದೇ ಕರೆಯಲಾಗುತ್ತಿದೆ. 15ನೇ ವಯಸ್ಸಿನಿಂದಲೇ ಕಠಿಣ ತರಬೇತಿ ಪಡೆದಿರುವ 38 ವರ್ಷದ ಪುಥುಪರಂಬಿಲ್​ ಅಭೀಶ್ ಪಿ ಗಿನ್ನೆಸ್​ ವಿಶ್ವದಾಖಲೆ ಸೇರಿದಂತೆ 15 ಇರತೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅಭೀಶ್​ ಶಕ್ತಿ ಎಂಥದ್ದು ಎಂದು ಹೇಳುವುದಾದರೆ ಬರಿಗೈನಲ್ಲಿ 146 ತೆಂಗಿನಕಾಯಿಗಳನ್ನು ಒಡೆಯಲು ಕೇವಲ 1 ನಿಮಿಷ ಸಾಕು. ಅಲ್ಲದೆ, 10 ಟನ್​ ತೂಕದ ಕೆಎಸ್​ಆರ್​ಟಿಸಿ ಬಸ್​ ಅನ್ನು ಹಲ್ಲಿನಿಂದ ಎಳೆಯುತ್ತಾರೆ. ಮಾರ್ಷಲ್ ಆರ್ಟ್ಸ್ ‘ಕಲರಿ’ ಮತ್ತು ಕರಾಟೆಯಲ್ಲಿ ನಿಷ್ಣಾತರಾಗಿರುವ ಅಭೀಶ್, ಟೈಲ್ಸ್ ಒಡೆಯುವ ಮೂಲಕ ಸಾಹಸಮಯ ಕಾರ್ಯಗಳನ್ನು ಆರಂಭಿಸಿದರು. ಬರಿ ಕೈಗಳಿಂದ 146 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಮೊದಲ ಗಿನ್ನೆಸ್ ವಿಶ್ವ ದಾಖಲೆಯನ್ನು ಗಳಿಸಿದರು ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿಯವರೆಗೆ ಹೆಚ್ಚು ವೀಕ್ಷಿಸಿದ ಗಿನ್ನೆಸ್ ರೆಕಾರ್ಡ್ ಸಹ ಹೊಂದಿದೆ. 10 ಟನ್‌ ತೂಕದ ಕೆಎಸ್‌ಆರ್‌ಟಿಸಿ ಬಸ್‌ ಎಳೆಯುವ ಮೂಲಕ ಏಷ್ಯನ್ ಮತ್ತು ಅಮೆರಿಕದ ದಾಖಲೆಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಅಭೀಶ್​ ಮಾಡಿದ ಇತರ ದಾಖಲೆಗಳಲ್ಲಿ ಅರೇಬಿಯನ್ ಬುಕ್ ಆಫ್ ರೆಕಾರ್ಡ್ಸ್, ಟೈಮ್ಸ್ ವರ್ಲ್ಡ್ ರೆಕಾರ್ಡ್ಸ್, ಏಷ್ಯಾ ಮತ್ತು ಇಂಡಿಯಾ ಲಿಮ್ಕಾ ರೆಕಾರ್ಡ್ಸ್ ಸೇರಿವೆ. ಕೆಎಸ್‌ಆರ್‌ಟಿಸಿ ಬಸ್‌ನ್ನು ಕಿವಿಯಿಂದ ಎಳೆದು ಮತ್ತು ಅಂಗೈಯಲ್ಲಿ ಮೊಟ್ಟೆ ಇಟ್ಟು ತೆಂಗಿನಕಾಯಿ ಒಡೆಯುವ ಮೂಲಕ ಅಭಿಷೇಕ ತನ್ನದೇ ದಾಖಲೆ ಮುರಿಯಲು ಹವಣಿಸುತ್ತಿದ್ದಾರೆ.
ಇತರ ದೇಶಗಳಲ್ಲಿ ಇಂತಹ ಪ್ರಯತ್ನಗಳಿಗೆ ಸುಲಭವಾಗಿ ನೆರವು ಸಿಗುತ್ತದೆ. ಆದರೆ, ಅಭೀಶ್​ಗೆ ಅಂತಹ ಯಾವುದೇ ಸಹಾಯ ಸಿಕ್ಕಿಲ್ಲ. ಒಂದು ವೇಳೆ ಸಾಕಷ್ಟು ಹಣಕಾಸಿನ ನೆರವು ಸಿಕ್ಕಿದ್ದೇ ಆದಲ್ಲಿ ಅಭೀಶ್​ ಉತ್ತಮ ಸಾಧನೆ ಮಾಡಬಹುದು ಎಂಬ ವಿಶ್ವಾಸ ಅವರದ್ದಾಗಿದೆ. ಪ್ರಸ್ತುತ ಅಭೀಶ್ ಕೂವಪಲ್ಲಿಯ ಅಮಲ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೈಹಿಕ ತರಬೇತುದಾರರಾಗಿದ್ದಾರೆ.(ಏಜೆನ್ಸೀಸ್​​)
ಚಿನ್ನು ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದ: ಅನುಶ್ರೀ ಭಾವುಕ

ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

ಮಾರ್ಚ್​ 18ಕ್ಕೆ ಬಿಡುಗಡೆಯಾದ್ರೆ RRR ಸಿನಿಮಾಗೆ ಕರ್ನಾಟಕದಲ್ಲಿ ಎದುರಾಗಲಿದೆ ಭಾರೀ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
