ನವದೆಹಲಿ:ಮಹಾಮಾರಿ ಕರೊನಾ ಸಾಂಕ್ರಮಿಕ ನಡುವೆಯೂ ಇಂದು ಸರಳವಾಗಿ ಕ್ರಿಸ್​​ಮಸ್​ ಆಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.
ಎಲ್ಲರಿಗೂ ಕ್ರಿಸ್​ಮಸ್​ ಶುಭಾಶಯಗಳು. ಸೇವೆ, ದಯೆ ಮತ್ತು ನಮ್ರತೆಗೆ ಹೆಚ್ಚಿನ ಒತ್ತು ನೀಡಿದ ಯೇಸು ಕ್ರಿಸ್ತನ ಜೀವನ ಮತ್ತು ಉದಾತ್ತ ಬೋಧನೆಗಳನ್ನು ನಾವು ನೆನಪಿಸಿಕೊಳ್ಳೋಣ. ಎಲ್ಲರೂ ಆರೋಗ್ಯವಂತರಾಗಿ ಮತ್ತು ಸಮೃದ್ಧಿಯಾಗಿರಲಿ. ನಮ್ಮ ಸುತ್ತಲೂ ಸಾಮರಸ್ಯವಿರಲಿ ಎಂದು ಟ್ವೀಟ್​ ಮೂಲಕ ಪ್ರಧಾನಿ ಶುಭಕೋರಿದ್ದಾರೆ.
Christmas greetings to everyone! We recall the life and noble teachings of Jesus Christ, which placed topmost emphasis on service, kindness and humility. May everyone be healthy and prosperous. May there be harmony all around.
— Narendra Modi (@narendramodi)December 25, 2021

ಕರೊನಾ ರೂಪಾಂತರಿ ಒಮಿಕ್ರಾನ್​ ಹೆಚ್ಚಳದಿಂದ ಅದ್ಧೂರಿ ಕ್ರಿಸ್​ಮಸ್​ ಆಚರಣೆಯ ಮೇಲೆ ಕರಿನೆರಳು ಬಿದ್ದಿದೆ. ಈಗಾಗಲೇ ಚೀನಾ, ಬ್ರಿಟನ್​ ಸೇರಿದಂತೆ ಹಲವು ದೇಶಗಳು ಕಠಿಣ ಕ್ರಮಗಳ ಮೊರೆ ಹೋಗಿವೆ. ಭಾರತದಲ್ಲೂ ಕೂಡ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಕೆಲವು ರಾಜ್ಯಗಳು ಈಗಾಗಲೇ ಕಠಿಣ ನಿರ್ಬಂಧಗಳನ್ನು ಹೇರಿವೆ.
ಮಹಾರಾಷ್ಟ್ರದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ ಕರ್ಫ್ಯೂ ವಿಧಿಸಿದೆ. ದೆಹಲಿ ಮತ್ತು ಹರಿಯಾಣ ಸರ್ಕಾರವೂ ಕೂಡ ಕ್ರಿಸ್​ಮಸ್​ ಆಚರಣೆಯ ಮೇಲೆ ನಿರ್ಬಂಧ ಹೇರಿದೆ. ದೆಹಲಿಯಲ್ಲಿ ಪೂಜಾ ಸ್ಥಳಗಳನ್ನು ತೆರೆಯಲು ಮಾತ್ರ ಅವಕಾಶ ಮಾಡಿಕೊಟ್ಟಿದೆ.
ಕರ್ನಾಕದಲ್ಲೂ ಕೂಡ ಕ್ರಿಸ್​ಮಸ್​ ಆಚರಣೆಗೆ ಸರ್ಕಾರ ಪ್ರತ್ಯೇಕ ಗೈಡ್​ಲೈನ್ ಜಾರಿ ಮಾಡಿದೆ. ಚರ್ಚ್‌ಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿದೆ. ಆದಾಗ್ಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧ ಇಲ್ಲ, ಪ್ರಾರ್ಥನೆ ಸಲ್ಲಿಸುವ ವೇಳೆ ಎಚ್ಚರಿಕೆ ವಹಿಸುವುದು ಕಡ್ಡಾಯವಾಗಿದ್ದು, ಪ್ರಾರ್ಥನಾ ಸ್ಥಳಗಳಲ್ಲಿ ಕೊರೋನಾ ಎಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದೆ.(ಏಜೆನ್ಸೀಸ್​)
ರಾಜಸ್ಥಾನದಲ್ಲಿ ಮಿಗ್​-21 ಫೈಟರ್​ ಜೆಟ್​ ಪತನ: ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

ಸಾರ್ವಜನಿಕರ ಕ್ಷಮೆಯಾಚಿಸದಿದ್ರೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ: ಸನ್ನಿ ಲಿಯೋನ್​ಗೆ ಅರ್ಚಕರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
