ತಿರುವನಂತಪುರಂ:ಮಲಯಾಳಂ ನಟ ಉನ್ನಿ ರಾಜನ್​ ಪಿ ದೇವ್​ ಪತ್ನಿ ಪ್ರಿಯಾಂಕಾ ಸಾವಿನ ಸುತ್ತ ಇದೀಗ ಅನುಮಾನದ ಹುತ್ತ ಬೆಳೆಯುತ್ತಿದೆ. ಕೌಟಂಬಿಕ ಕಲಹದಿಂದಾಗಿ ಆಕೆ ಬಲವಂತದಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ.
ನಟ ಉನ್ನಿ ರಾಜನ್​ ಪಿ ದೇವ್, ಹಿರಿಯ ನಟ​​ ದಿವಂಗತ ರಾಜನ್​ ಪಿ ದೇವ್​ ಕಿರಿಯ ಮಗ. ಬುಧವಾರ ಮಧ್ಯಾಹ್ನ ವೆಂಬಾಯಮ್​ ನಿವಾಸದಲ್ಲಿ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು. ಇದಕ್ಕೂ ಒಂದು ದಿನ ಮುಂಚೆ ಪ್ರಿಯಾಂಕಾ ತನ್ನ ಗಂಡ ಉನ್ನಿ ರಾಜನ್​ ವಿರುದ್ಧ ವಟ್ಟಪ್ಪರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಆಕೆ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಸಂಬಂಧಿ ರೇಷ್ಮಾ ಕೆಲವೊಂದು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ವರದಕ್ಷಿಣೆ ವಿಚಾರವಾಗಿ ಪ್ರಿಯಾಂಕಾ ಮೇಲೆ ಆಗಾಗ ಉನ್ನಿ ರಾಜನ್​ ಹಲ್ಲೆ ಮಾಡುತ್ತಿದ್ದನಂತೆ. ಆರಂಭದ ದಿನಗಳಲ್ಲಿ ಇದನ್ನು ತನ್ನ ಮನೆಯವರಿಂದ ಪ್ರಿಯಾಂಕಾ ಮುಚ್ಚಿಟ್ಟಿದ್ದರು. ಆದರೆ, ಯಾವಾಗ ಕಿರುಕುಳವನ್ನು ಸಹಿಸಲು ಸಾಧ್ಯವಾಗಲಿಲ್ಲವೋ ಆವಾಗ ಸ್ವತಃ ಆಕೆಯೇ ಹೋಗಿ ಠಾಣೆಯಲ್ಲಿ ದೂರು ನೀಡಿದ್ದಾಳೆಂದು ರೇಷ್ಮಾ ತಿಳಿಸಿದ್ದಾರೆ.
ಉನ್ನಿ ರಾಜನ್​ ಮತ್ತು ಪ್ರಿಯಾಂಕಾ ಪ್ರೀತಿಸುತ್ತಿದ್ದರು. ಹೊಸ ಜೀವನ ಆರಂಭಿಸಿದಾಗ ಅವರಿಬ್ಬರು ಸಂತೋಷವಾಗಿಯೇ ಇದ್ದರು. ಆದರೆ, ಉನ್ನಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಿಯಾಂಕಾ ಆಭರಣಗಳನ್ನು ಮಾರಲು ಶುರು ಮಾಡಿದ. ಉನ್ನಿ ಒತ್ತಾಯದಂತೆ ಪ್ರಿಯಾಂಕಾ ತಾಯಿಯು ಸಹ ಅವನಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ರೇಷ್ಮಾ ಮಾಹಿತಿ ನೀಡಿದರು.
ಎಲ್ಲವನ್ನು ಮಾರಾಟ ಮಾಡಿದ ಬಳಿಕ ಪ್ರಿಯಾಂಕಾಳನ್ನು ಥಳಿಸಲು ಆರಂಭಿಸಿದ. ಅಲ್ಲದೆ, ಮನೆಯಿಂದ ಹೊರಗಾಕುತ್ತಿದ್ದ. ಕ್ರೂರವಾಗಿ ಹಲ್ಲೆ ಮಾಡುತ್ತಿದ್ದ. ಆದರೆ, ಎಲ್ಲವನ್ನು ಪ್ರಿಯಾಂಕಾ ಸಹಿಸಿಕೊಂಡಳು. ಆಕೆಯ ಬೆನ್ನ ಹಿಂದೆ ಕಚ್ಚಿದ ಗುರುತು ಮತ್ತು ಹಲ್ಲೆ ಮಾಡಿರುವ ಗುರುತುಗಳು ಸಹ ಇವೆ. ಅಲ್ಲದೆ, ಉನ್ನಿ ರಾಜನ್​ ಹಲ್ಲೆ ಮಾಡಿರುವ ಕೆಲವು ವಿಡಿಯೋಗಳನ್ನು ಆಕೆ ರೆಕಾರ್ಡ್​ ಮಾಡಿದ್ದಾಳೆಂದು ರೇಷ್ಮಾ ವಿವರಿಸಿದರು.
ವೆಂಬಾಯಮ್​ನಲ್ಲಿರುವ ತನ್ನ ಮನೆಗೆ ಮರಳಿದ ಬಳಿಕ ಪ್ರಿಯಾಂಕಾ, ಉನ್ನಿ ರಾಜನ್​ ವಿರುದ್ಧ ದೂರು ನೀಡಿದಳು. ಪ್ರಕರಣವನ್ನು ಮುಂದುವರಿಸುವ ಬಗ್ಗೆ ಗಟ್ಟಿ ನಿಲುವು ಹೊಂದಿದ್ದಳು. ಈ ಮಧ್ಯೆ ಅವಳಿಂದ ಒಂದು ಫೋನ್​ ಕಾಲ್​ ಸ್ವೀಕರಿಸಿದೆ. ಕರೆ ಸ್ವೀಕರಿಸಿದರೆ ಆಕೆ ಮೃತಪಟ್ಟಿದ್ದಾಳೆಂಬ ಸುದ್ದಿ ಬಂತು. ಉನ್ನಿ ರಾಜನ್​ಗೆ ಶಿಕ್ಷೆಯಾಗಲೇಬೇಕೆಂದು ರೇಷ್ಮಾ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ಮೈಸೂರು ಕಳಂಕ ಮುಕ್ತವಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ ರೋಹಿಣಿ ಸಿಂಧೂರಿ
ನಮ್ಮಂತೆಯೇ ಕರೊನಾ ವೈರಸ್​ಗೂ ಬದುಕಲು ಹಕ್ಕಿದೆ ಎಂದ ಉತ್ತರಾಖಂಡದ ಮಾಜಿ ಸಿಎಂ
ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
