ಕರ್ನೂಲ್​:ಸ್ಥಳೀಯರ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ​ ಮಾಧವಿನಗರದ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.
ಕರ್ನೂಲ್​ನ ಹೊರವಲಯದ ಮಾಧವಿನಗರದ ಸ್ಟೇಟ್​ ಬ್ಯಾಂಕ್​ ಕಾಲನಿಯಲ್ಲಿ ವೆಂಕಟೇಶ್ವರ್​ ಮತ್ತು ಕೀರ್ತಿ ಎಂಬುವರು ಬಾಡಿಗೆ ಮನೆ ಪಡೆದು, ಆಂಧ್ರದ ವಿವಿಧ ಭಾಗಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದು ಸ್ಥಳೀಯರ ಗಮನಕ್ಕೆ ಬಂದು, ಭಾನುವಾರ ಥರ್ಡ್​ ಟೌನ್​ ಪೊಲೀಸರಿಗೆ ದೂರು ನೀಡಿದ್ದರು. ದಾಳಿ ನಡೆಸಿದಾಗ ಕಿಂಗ್​ಪಿನ್​ ವೆಂಕಟೇಶ್ವರ್​ ಸಿಕ್ಕಿಬಿದ್ದಿದ್ದಾನೆ.
ದಾಳಿ ವೇಳೆ ಸ್ಥಳದಲ್ಲಿದ್ದ ಜಾಕೀರ್​ ಹುಸೇನ್​ನನ್ನು ಸಹ ವಶಕ್ಕೆ ಪಡೆಯಲಾಗಿದೆ. ಆಂಧ್ರದ ಗುಂಟೂರು ಮತ್ತು ಅಲ್ಲಗಡ್ಡ ಏರಿಯಾದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಕೀರ್ತಿ ಮತ್ತು ವೆಂಕಟೇಶ್ವರ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕೀರ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಚಿನ್ನ ಕಳ್ಳತನದ ಕಿಂಗ್​ಪಿನ್ ಅರೆಸ್ಟ್; ಖಾಕಿ ಮಧ್ಯಸ್ಥಿಕೆಯಲ್ಲೇ ಡೀಲಿಂಗ್ ನಡೆಸುತ್ತಿದ್ದ ಆರೋಪಿ

ದುಬಾರಿ ಸೀತೆ; 12 ಕೋಟಿ ರೂ. ಸಂಭಾವನೆ ಕೇಳಿದರಂತೆ ಕರೀನಾ

ಚಿರು ಸರ್ಜಾ ನೆನಪಲ್ಲಿ ಒಂದು ವರ್ಷ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five + 4 =
Remember me
