ನವದೆಹಲಿ:ಕೇಳಿದರೂ ಚಪಾತಿ ಕೊಡಲಿಲ್ಲ ಅಂತಾ ರಿಕ್ಷಾ ಎಳೆಯುವವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಕರೋಲ್​ ಬಾಘ್​ ಏರಿಯಾದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಮುನ್ನಾ ಎಂದು ಗುರುತಿಸಲಾಗಿದೆ. ಆರೋಪಿ ಫಿರೋಜ್ ಖಾನ್​ ಚಿಂದಿ ಆಯುವವನಾಗಿದ್ದು, ಕರೋಲ್​ ಭಾಘ್​ನ ಪಾರ್ಕಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಮೇಲೆ ಬಿದ್ದಿದ್ದು, ಆತನನ್ನು ಸ್ಥಳೀಯರು ಆರ್​ಎಂಎಲ್​ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಿದರು. ಆದರೆ, ಅಷ್ಟರಲ್ಲಗಾಲೇ ಆತ ಮೃತಪಟ್ಟಿದ್ದ ಎಂದು ಜುಲೈ 26 ರ ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು.
ಜುಲೈ 26ರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ವಿಷ್ಣು ಮಂದಿರ್​ ರಸ್ತೆಯಲ್ಲಿ ನಾನು ಮುನ್ನಾ ಜೊತೆ ಕುಳಿತಿದ್ದೆ. ಹೋಟೆಲ್​ನಿಂದ ತಂದಿದ್ದ ಚಪಾತಿಯನ್ನು ತಿನ್ನಲು ಮುನ್ನಾ ಶುರು ಮಾಡಿದ. ಇದೇ ಸಂದರ್ಭದಲ್ಲಿ ಪಾನಮತ್ತ ವ್ಯಕ್ತಿ (ಫಿರೋಜ್​ ಖಾನ್​) ಒಬ್ಬ ಅಲ್ಲಿಗೆ ಬಂದು ಚಪಾತಿ ಕೇಳಿದ. ಆತನಿಗೆ ಮುನ್ನ ಚಪಾತಿ ನೀಡಿದ ಎಂದು ಪ್ರತ್ಯಕ್ಷದರ್ಶಿ ಲಖನ್​ ಪೊಲೀಸರಿಗೆ ಮಾಹಿತಿ ನೀಡಿದರು.
ಚಪಾತಿ ಕೊಟ್ಟ ಬಳಿಕವೂ ಇನ್ನೊಂದು ಚಪಾತಿ ಕೊಡುವಂತೆ ಕೇಳಿದ. ಆದರೆ, ಮುನ್ನಾ ಕೊಡಲು ನಿರಾಕರಿಸಿದ. ಏಕೆಂದರೆ, ಇದ್ದಿದ್ದೇ ಎರಡು ಚಪಾತಿ. ಪಾನಮತ್ತ ಸ್ಥಿತಿಯಲ್ಲಿದ್ದ ಆರೋಪಿ ಮುನ್ನಾ ವಿರುದ್ಧ ವಾಗ್ದಾಳಿ ಮಾಡಲು ಶುರು ಮಾಡಿದ. ಯಾವಾಗ ಮುನ್ನಾ ಅದನ್ನು ವಿರೋಧಿಸಿದನೋ ಇಬ್ಬರ ನಡುವೆ ಜಗಳ ಶುರುವಾಯಿತು. ಆರೋಪಿ ಹರಿತವಾದ ಹಾಗೂ ಉದ್ದವಾದ ಚಾಕು ತಂದಿದ್ದ. ಮುನ್ನಾಗೆ ತಿವಿದು, ಸ್ಥಳದಿಂದ ಕಾಲ್ಕಿತ್ತ. ಸುಮಾರು 400 ರಿಂದ 500 ಮೀಟರ್​ ಆರೋಪಿಯನ್ನು ಬೆನ್ನತ್ತಿ ಹೋದೆ ಆದರೆ, ಆತ ಸಿಗಲಿಲ್ಲ. ಮುನ್ನಾನನ್ನು ಆರ್​ಎಂಎಲ್​ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ಲಖನ್​ ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಾಗಿ ತಕ್ಷಣ ಹುಡುಕಾಟ ಆರಂಭಿಸಿದರು. ಎಲ್ಲ ಕಾರ್ಮಿಕರನ್ನು ಭೌತಿಕವಾಗಿ ಪರಿಶೀಲಿಸಲು ಪ್ರಾರಂಭಿಸಿದರು. ರಸ್ತೆ ಬದಿ ಮತ್ತು ಪಾರ್ಕ್ ಪ್ರದೇಶದಲ್ಲಿ ತಂಗಿದ್ದ ಶಂಕಿತರನ್ನು ವಿಚಾರಿಸಲಾಯಿತು. ಎಸ್‌ಐ ವಿಕ್ರಮ್ ಸಿಂಗ್ ಮತ್ತು ಎಎಸ್‌ಐ ಜಿತೇಂದರ್ ಅವರನ್ನೊಳಗೊಂಡ ತಂಡವು ಜಜೋರಿಯಾ ಪಾರ್ಕ್‌ಗೆ ಆಗಮಿಸಿ ಉದ್ಯಾನವನದಲ್ಲಿ ಮಲಗಿದ್ದ ಶಂಕಿತನನ್ನು ಗುರುತಿಸಿ, ಕೊನೆಗೆ ಆತನನ್ನು ಬಂಧಿಸಿದರು.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಪರಾಧ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನೂ ಪಡೆಯಲಾಗಿದೆ. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ನಿದರ್ಶನದ ಮೇರೆಗೆ ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.(ಏಜೆನ್ಸೀಸ್​)
ದಾಳಿ ಮಾಡಿದಷ್ಟು ದುಡ್ಡಿನ ರಾಶಿ! ನಟಿ ಅರ್ಪಿತಾಳ ಮತ್ತೊಂದು ಫ್ಲ್ಯಾಟ್​ನಲ್ಲಿ 20 ಕೋಟಿ ನಗದು, 3 ಕೆಜಿ ಚಿನ್ನ ಪತ್ತೆ

ನಟಿ ಸಂಯುಕ್ತಾಗೆ ಪೆಟ್ಟು!; ಕಾಲು ಉಳುಕಿಸಿಕೊಂಡ ಕಿರಿಕ್ ಹುಡುಗಿ

ಹಂತಕರಿಂದ ಪ್ರವೀಣ್​​ ಕನಸು ನುಚ್ಚುನೂರು: ಕನಸು ಸಾಕಾರಕ್ಕೆ ಸಿದ್ಧತೆ ನಡೆಯುತ್ತಿದ್ದ ಸ್ಥಳದಲ್ಲೇ ಅಂತ್ಯಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + four =
Remember me
