ಹೈದರಾಬಾದ್​:ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಬದುಕಿರುವಾಗಲೇ ತನ್ನ ಫೋಟೋ ಮಾಡಿಸಿ ಅದರ ಮೇಲೆ ಸೆಲೆಬ್ರಿಟಿ ಎಂದು ಬರೆದು, ಪೂಜೆ ಮಾಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ವಡಪಲ್ಲಿ ಶಿವಪ್ರಸಾದ್​ (48) ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಮೂಲದವನಾಗಿದ್ದು, 30 ವರ್ಷಗಳ ಹಿಂದೆ ತೆಲಂಗಾಣಕ್ಕೆ ವಲಸೆ ಬಂದು ನೆಲೆಸಿದ್ದ. ಮೊದಲು ವಿಜಯವಾಡದಲ್ಲಿದ್ದ ಶಿವಪ್ರಸಾದ್​ ನಂತರ ಖಮ್ಮಮ್​ಗೆ ಬಂದಿದ್ದ. ಆನಂತರ ಖಮ್ಮಮ್​ ಗ್ರಾಮೀಣ ಪ್ರದೇಶ ಎಡುಲಪುರಂ ಮತ್ತು ವೇಂಪತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ರಸ್ತೆ ಬದಿಯ ಹೋಟೆಲ್​ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.
ಫೆ. 1ರಂದು ಕೆಲಸಕ್ಕೆ ಬಂದ ಶಿವಪ್ರಸಾದ್​ ಅದಾದ ಬಳಿಕ ಕಾಣಿಸಿಕೊಳ್ಳಲೇ ಇಲ್ಲ. ಗುರುವಾರ ಬೆಳಗ್ಗೆ ಹೋಟೆಲ್​ ಮಾಲೀಕ ಆತನ ಮನೆಗೆ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಎಷ್ಟೇ ಬಾಗಿಲು ಬದಿದರೂ ತೆಗೆಯದಿದ್ದಾಗ ಅನುಮಾನ ಬಂದು ಕಿಟಕಿ ಬಾಗಿಲಿನಿಂದ ನೋಡಿದಾಗ ಮನೆಯ ಫ್ಯಾನ್​ಗೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ಇದಾದ ಬಳಿಕ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಖಮ್ಮಮ್​ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೆಲವು ದಿನಗಳಿಂದ ಶಿವಪ್ರಸಾದ್​ ಗಂಭೀರ ತಲೆನೋವಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಅದನ್ನು ತಡೆಯಲಾಗದೇ ಮೊದಲೇ ಸಾವನ್ನು ಬಯಸಿದ್ದ. ಕೊನೆಗೂ ಆತ್ಮಹತ್ಯೆಗೆ ಶರಣಾಗಿರುವ ಆತ ಸಾವಿಗೂ ಮುನ್ನ ತನ್ನ ಫೋಟೋಗೆ ತಾನೇ ಪೂಜೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ

ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ: ತುಮಕೂರಲ್ಲಿ ನಡೆದ ಅಮಾನವೀಯ ಘಟನೆ

ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್​ ಬಚ್ಚನ್​ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
