ನವದೆಹಲಿ:ರೊಬೊಟ್​ಗಳು ಇಂದು ಕೇವಲ ಯಂತ್ರಗಳಾಗಿಯೇ ಉಳಿದಿಲ್ಲ. ಮಾನವನಂತೆಯೇ ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವುದನ್ನು ನೋಡಿದ್ದೇವೆ. ಮಾನವ ಮಾತನಾಡುವುದನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತವೆ. ಗಮನಾರ್ಹವೆಂದರೆ, ಕೆಲವೊಂದು ರೆಸ್ಟೋರೆಂಟ್​ಗಳಲ್ಲಿ ರೊಬೊಗಳು ಸರ್ವ್​ ಮಾಡುವುದನ್ನು ನೋಡಿ ಚಕಿತರಾಗಿದ್ದಾವೆ.
ಟೆಕ್ನಾಲಜಿ ಬೆಳೆದಂತೆ ರೊಬೊಟಿಕ್​ ಟೆಕ್ನಾಲಜಿಯಲ್ಲೂ ಹಲವು ಸುಧಾರಣೆಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ. ಕೇವಲ ಮನುಷ್ಯನಂತೆ ಮಾತಾಡುವುದು ಮಾತ್ರವಲ್ಲ, ಮನುಷ್ಯನ ಭಾವನೆಗಳನ್ನು ಕೂಡ ವ್ಯಕ್ತಪಡಿಸುತ್ತವೆ ಅಂದರೆ ನೀವು ನಂಬುತ್ತೀರಾ? ಆದರೆ ನೀವು ನಂಬಲೇಬೇಕಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ರೊಬೊಟ್ ಒಂದು​ ಮಾನವನ ಭಾವನೆಗಳನ್ನು ಮಿಮಿಕ್ರಿ ಮಾಡಿದೆ. ಇಎಚ್​ಎ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್​ ಆಗಿದೆ. ಅದರಲ್ಲಿರುವ ರೊಬೊ ಹೆಸರು ಅಟ್ಲಾಸ್​. ಇದು ಮಾನವರಂತೆ ಅನೇಕ ವಿಧದ ಮುಖಭಾವಗಳನ್ನು ವ್ಯಕ್ತಪಡಿಸಿದೆ.
🤖 A robot trying to replicate human emotions.pic.twitter.com/JXLZSUkWXu
— EHA News (@eha_news)January 13, 2022

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮಿಲಿಯನ್​ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 54 ಸಾವಿರಕ್ಕೂ ಹೆಚ್ಚು ಲೈಕ್ಸ್​ ಮತ್ತು 6 ಸಾವಿರಕ್ಕೂ ಹೆಚ್ಚು ರೀಟ್ವೀಟ್ಸ್​ ಗಿಟ್ಟಿಸಿಕೊಂಡಿವೆ.(ಏಜೆನ್ಸೀಸ್​)
ಧನುಷ್​-ಐಶ್ವರ್ಯಾ ಡಿವೋರ್ಸ್​ ಯುವ ಜನಾಂಗಕ್ಕೆ ನೀಡುತ್ತಿರೋ ಎಚ್ಚರಿಕೆಯಂತೆ! ಆರ್​ಜಿವಿ ವಿವರಣೆ ಹೀಗಿದೆ…

ಲಿಪ್​ಲಾಕ್ ದೃಶ್ಯಕ್ಕಾಗಿ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಮಲಯಾಳಿ ಬೆಡಗಿ ಅನುಪಮಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eight =
Remember me
