ಜೈಪುರ:ಮಹಿಳಾ ಕಾನ್ಸ್​ಟೇಬಲ್​ ಜತೆ ಸ್ವಿಮ್ಮಿಂಗ್​ಪೂಲ್​ನಲ್ಲಿ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರಾಜಸ್ಥಾನದ ಉಪ ಪೊಲೀಸ್​ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಅಶ್ಲೀಲ ವಿಡಿಯೋ ವೈರಲ್​ ಆದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಡಿಎಸ್​ಪಿ ಹಿರಾಲಾಲ್​ ಸೈನಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಸ್ವಿಮ್ಮಿಂಗ್​ ಪೂಲ್​ ಒಳಗಡೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಇದು ಅವರ ಖಾಸಗಿ ವಿಚಾರವಾದರೂ ಸೈನಿ ಇನ್ನೊಂದು ಘೋರ ಅಪರಾಧವನ್ನು ಎಸಗಿದ್ದಾರೆ. ಮಹಿಳಾ ಸಿಬ್ಬಂದಿಯ ಮಗನ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಇಬ್ಬರು ಅಮಾನತು ಮಾಡಲಾಗಿದೆ.
ಘಟನೆ ಸಂಬಂಧ ಮಹಿಳಾ ಕಾನ್ಸ್​ಟೇಬಲ್​ ಪತಿಯು ದೂರು ನೀಡಿದ್ದಾನೆ. ವಿಡಿಯೋ ಕುರಿತು ಉತ್ತರಿಸಲು ನಿರಾಕರಿಸಿರುವ ಡಿಎಸ್​ಪಿ ನನ್ನ ವಿರುದ್ಧದ ಆರೋಪ ಸುಳ್ಳು. ಅದು ನಕಲಿ ವಿಡಿಯೋ ಎಂದು ಸಮಜಾಯಿಷಿ ನೀಡಿದ್ದಾರೆ.
ನಿಜಕ್ಕೂ ಆಘಾತಕಾರಿಯೆಂದರೆ ಮಹಿಳಾ ಕಾನ್ಸ್​ಟೇಬಲ್ 6 ವರ್ಷದ​ ಮಗನು ಕೂಡ ವಿಡಿಯೋದಲ್ಲಿ ಅಸಹಜ ವರ್ತನೆ ತೋರಿದ್ದಾನೆ. ಆಗಸ್ಟ್​ 2ರಂದೇ ಮಹಿಳಾ ಕಾನ್ಸ್​ಟೇಬಲ್​ ಪತಿ, ನಗೌರ್​ ಜಿಲ್ಲೆಯ ಚಿತಾವಾ ಪೊಲೀಸ್​ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ದೂರಿನ ಪ್ರಕಾರ 2001ರಲ್ಲಿ ಇಬ್ಬರ ಮದುವೆ ಆಗಿದ್ದು, ಅದಕ್ಕೆ ಸಾಕ್ಷಿಯಾಗಿ 6 ವರ್ಷದ ಹಿಂದೆ ಗಂಡು ಮಗು ಜನಿಸಿದೆ. ಹೀಗಿರುವಾಗ 2008ರಲ್ಲಿ ಪತ್ನಿಗೆ ಕಾನ್ಸ್​ಟೇಬಲ್​ ಕೆಲಸ ಸಿಕ್ಕಿತು ಎಂದು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದ ನಂತರ, ಇಬ್ಬರನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಕ್ಲಿಪ್‌ನ ದಿನಾಂಕ ಮತ್ತು ಸ್ಥಳವನ್ನು ನಿರ್ಧರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಾನ್ಸ್​ಟೇಬಲ್​ ಪತಿ ನೀಡಿದ ದೂರನ್ನು ಡಿಜಿಪಿ ಕಚೇರಿಗೆ ಕಳುಹಿಸಲಾಗಿದೆ. ತರುವಾಯ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಯಿತು. ನನ್ನ ಹೆಸರಿಗೆ ಕಳಂಕ ತರಲು ವಿಡಿಯೋ ಎಡಿಟ್​ ಮಾಡಲಾಗಿದೆ ಎಂದಿರುವ ಡಿಎಸ್​ಪಿ, ಕಾನ್ಸ್‌ಟೇಬಲ್ ಗಂಡನ ದೂರಿನ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
ಇಷ್ಟೊಂದು ಮಿಸ್ಟೇಕ್​ ಮಾಡಿದ್ರಾ ನಟ ಸಾಯಿ ಧರಮ್​ ತೇಜ್? ತನಿಖೆಯಲ್ಲಿ ಬೈಕ್​ ಕುರಿತ ಸ್ಫೋಟಕ ಮಾಹಿತಿ ಬಯಲು! ​​

ಕೋಯಿಕ್ಕೋಡ್ ಏರ್​ಪೋರ್ಟ್​ ದುರಂತ: ಎಎಐಬಿ ವರದಿಯಲ್ಲಿ ಬಯಲಾಯ್ತು ವಿಮಾನ ಪತನದ ಕಾರಣ!

ಅಮೆರಿಕ ಅವಳಿ ಗೋಪುರ ದಾಳಿಗೆ 20 ವರ್ಷ! ಯುಎಸ್​ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್? ಹೇಗಿತ್ತು ದಾಳಿಯ ಪ್ಲಾನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
