ರಾಂಚಿ:ಜಾರ್ಖಂಡ್​ನ ಐಎಎಸ್​ ಅಧಿಕಾರಿ ಪೂಜಾ ಸಿಂಘಲ್ ಅವರ ಆಪ್ತರಿಬ್ಬರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ 19 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ. ನರೇಗಾ ಯೋಜನೆಯಡಿಯಲ್ಲಿನ ಭ್ರಷ್ಟಾಚಾರ ಆರೋಪ ಸಂಬಂಧ ಇಡಿ ಅಧಿಕಾರಿಗಳಿಂದ ನಡೆದ ಶೋಧ ಕಾರ್ಯಾಚರಣೆ ವೇಳೆ ಭಾರೀ ಹಣ ಪತ್ತೆಯಾಗಿದೆ.
ನರೇಗಾ ನಿಧಿಯ 18 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಾರ್ಖಂಡ್ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿ ಇಡಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ದಾಳಿಯ ವೇಳೆ ಒಟ್ಟು 19.31 ಕೋಟಿ ರೂಪಾಯಿಯನ್ನು ಜಾರ್ಖಂಡ್​ನಲ್ಲಿ ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ 17 ಕೋಟಿ ಹಣ ಪೂಜಾ ಸಿಂಘಾಲ್​ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್​ ಕುಮಾರ್​ ಅವರ ಬಳಿ ದೊರೆತರೆ, ಉಳಿದ 1.8 ಕೋಟಿ ರೂಪಾಯಿ ಮತ್ತೊಂದು ಸ್ಥಳದಲ್ಲಿ ಸಿಕ್ಕಿದೆ. ಐಎಎಸ್ ಅಧಿಕಾರಿಯ ನಿವಾಸದಿಂದಲೂ ತಪಾಸಣೆ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಶುಕ್ರವಾರ ವಶಪಡಿಸಿಕೊಂಡ ಹಣವನ್ನು ಎಣಿಸಲು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. 2000, 500, 200 ಮತ್ತು 100 ರೂ. ಮುಖಬೆಲೆಯ ಬೃಹತ್ ನೋಟುಗಳು ಪತ್ತೆಯಾಗಿವೆ.(ಏಜೆನ್ಸೀಸ್​)
ಶಾಲೆಯ ಸ್ಮಾರ್ಟ್​ ಟಿವಿಗೆ ಮೊಬೈಲ್​​ ಕನೆಕ್ಟ್​ ಮಾಡಿ ‘ಪುಷ್ಪ’ ಹಾಡಿಗೆ ಹೈಸ್ಕೂಲ್​ ವಿದ್ಯಾರ್ಥಿಗಳ ಡಾನ್ಸ್​: ಮುಖ್ಯ ಶಿಕ್ಷಕಿ ಸಸ್ಪೆಂಡ್​

ಈಕೆಯ ಅವತಾರ ಒಂದೆರಡಲ್ಲ… ಜೀನ್ಸ್​ ಮೇಲೆ ಒಳಉಡುಪು ಧರಿಸಿ ಬಂದ ಉರ್ಫಿ ಜಾವೇದ್​!

ಫ್ರೆಂಡ್​ ಆಯೋಜಿಸಿದ್ದ ಪಾರ್ಟಿಯಲ್ಲಿ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣ ನುಂಗಿದ ವ್ಯಕ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
