ಚೆನ್ನೈ:ಮಹಿಳೆಯರೊಂದಿಗೆ ಪಬ್​ಜಿ ಆಡುತ್ತಾ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ಭಾರೀ ಲಾಭ ಮಾಡುತ್ತಿದ್ದ ಪಬ್​ಜಿ ಮದನ್​ ಕರಾಳ ಮುಖ ಕಳಚಿಬಿದ್ದಿದೆ. ನಿಷೇಧಿತ ಪಬ್​ಜಿ ಆಡುವುದಲ್ಲದೆ, ಅಶ್ಲೀಲತೆಯನ್ನು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಪಬ್​ಜಿ ಮದನ್​ ದಂಪತಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಪೋರ್ನೋಗ್ರಫಿ​ಕ್​ ಆಡಿಯೋ ಮೂಲಕವೇ ಪಬ್​ಜಿ ಮದನ್​ ಕೇವಲ ಮೂರು ವರ್ಷದಲ್ಲಿ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿರುವ ಸುದ್ದಿ ಕೇಳಿ ಒಂದು ಕ್ಷಣ ಪೊಲೀಸರಿಗೆ ಶಾಕ್​ ಆಗಿದೆ. ಅಲ್ಲದೆ, ಮದನ್​ ಮತ್ತು ಪತ್ನಿ ಕೃತಿಕಾ ಬ್ಯಾಂಕ್​ ಖಾತೆಯಲ್ಲಿದ್ದ 4 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆತನ ಬಳಿಕ ಮೂರು ಐಷಾರಾಮಿ ಕಾರುಗಳಿರುವುದು ತಿಳಿದುಬಂದಿದೆ.
ಸಾಕಷ್ಟು ಆಸ್ತಿ ಬೆಳಕಿಗೆ ಬಂದ ಕೂಡಲೇ ಪಬ್​ಜಿ ಮದನ್​ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಮದನ್​ ಜತೆ ಸಂತ್ರಸ್ತ ಮಹಿಳೆಯೊಬ್ಬಳು ನಡೆಸಿರುವ ಅಶ್ಲೀಲ ಸಂಭಾಷಣೆಯನ್ನು ಯೂಟ್ಯೂಬ್​ನಲ್ಲಿ ಸೋರಿಕೆ ಮಾಡಿದ್ದಕ್ಕೆ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.
ಅಂದಹಾಗೆ ಮದನ್​, ಚೆನ್ನೈನ ವೆಂಗೌವಾಸಲ್​ ಮೂಲದವನು. ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡಿದ್ದಾನೆ. ಪಬ್​ಜಿ ಆಡುವಾಗಲೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡಿ ಅದನ್ನು ರೆಕಾರ್ಡ್​ ಮಾಡಿ ಯೂಟ್ಯೂಬ್​​ನಲ್ಲಿ ಮದನ್​ ಹರಿಬಿಡುತ್ತಿದ್ದ. ಲಕ್ಷಾಂತರ ಮಂದಿ ಆತನ ಚಾನೆಲ್​ಗೆ ಚಂದಾದಾರರಾಗಿರುವುದರಿಂದ ಮದನ್​ ಆದಾಯ ದುಪ್ಪಟ್ಟಾಗಿತ್ತು. ಪೊಲೀಸರ ಪ್ರಕಾರ ಆತ 75 ಕೋಟಿ ರೂಪಾಯಿ ಸಂಪಾದಿಸಿದ್ದಾನೆ. ತನ್ನ ಪತ್ನಿಯ ಸಹಾಯದಿಂದ ಸುಮಾರು 12ಕ್ಕೂ ಹೆಚ್ಚು ಯೂಟ್ಯೂಬ್​ ಚಾನೆಲ್​ಗಳನ್ನು ಮದನ್​ ನಡೆಸುತ್ತಿದ್ದಾನೆ.
ಅಚ್ಚರಿಯ ವಿಷಯವೆಂದರೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಹ ಕೃತಿಕಾ, ಮದನ್​ಗೆ ತುಂಬಾ ಸಾಥ್​ ನೀಡುತ್ತಿದ್ದಳು. ಮದನ್​ಗೆ ಸಾಥ್​ ನೀಡುತ್ತಿದ್ದ ಫ್ರೆಂಡ್ಸ್​ಗಳ ಬಗ್ಗೆಯೂ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ತನ್ನ ಜತೆ ಬಹಳ ಸೆಕ್ಸಿಯಾಗಿ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂ.ವರೆಗೂ ಹಣ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮದನ್​ ಜತೆ ಅಶ್ಲೀಲವಾಗಿ ಮಾತನಾಡಿರುವ ಮಹಿಳೆಯರನ್ನು ಸಹ ಪಟ್ಟಿ ಮಾಡಲಾಗುತ್ತಿದೆ. ಇನ್ನು ಮದನ್​ನನ್ನು ಹಿಂಬಾಲಿಸುತ್ತಿರುವ ಬಹುತೇಕ ಚಂದಾದಾರಲ್ಲಿ ಅಪ್ರಾಪ್ತರೇ ಹೆಚ್ಚಾಗಿದ್ದಾರೆ. ಮದನ್​ನನ್ನು ಜೈಲಿಗೆ ಕಳುಹಿಸಲು ಸಕಲ ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ಮದನ್​ ನಿರೀಕ್ಷಣಾ ಜಾಮೀನಿಗೆ ಗುರುವಾರ ಅರ್ಜಿಯನ್ನು ಸಲ್ಲಿಸಿದ್ದಾನೆ.(ಏಜೆನ್ಸೀಸ್​)
ಪಬ್​ಜಿ ಲೈವ್​ ಸ್ಟ್ರೀಮಿಂಗ್​ನಲ್ಲಿ ಅಶ್ಲೀಲತೆ: ಚೆನ್ನೈ ಮೂಲದ ಯೂಟ್ಯೂಬರ್​ ದಂಪತಿಯ ಬಂಧನ!

ನಿನ್ನ ಜತೆ ಸೆಕ್ಸ್​ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್​ ಕೊಟ್ಟ ಆರ್​ಜಿವಿ​

ಅಪ್ಪಂದಿರ ದಿನವೇ ದುರಂತ: ಮಗಳ ಆತ್ಮಹತ್ಯೆ ಸುದ್ದಿ ಕೇಳಿ ತಂದೆ ಸಾವು, ಕಾರಣ ಮನಕಲಕುವಂತಿದೆ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
